Site icon Vistara News

Allu Arjun: `ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

Allu Arjun

ಬೆಂಗಳೂರು: ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ನಟನೆಯ ʻಪುಷ್ಪಾ 2ʼ ಸಿನಿಮಾದ (Pushpa 2 Teaser ) ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಪುಷ್ಪ 2 ಸಿನಿಮಾ ಕಂಡು ಸಿನಿಪ್ರಿಯರು ಬೆರಗಾಗಿದ್ದಾರೆ. ಟೀಸರ್‌ನಲ್ಲಿ ಹೆಚ್ಚು ಹೈಲೈಟ್‌ ಆಗಿದ್ದು, ಗಂಗಮ್ಮ ಜಾತ್ರೆ. ಈ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ ಸಖತ್‌ ರಗಡ್‌ ಲುಕ್‌ನಲ್ಲಿ ಕಂಡಿದ್ದರು. ಈ ಸೆಟ್‌ಗೆ ಚಿತ್ರತಂಡ ಖರ್ಚು ಮಾಡಿದ್ದು ಐವತ್ತು ಕೋಟಿ ರೂ. ಎಂದು ವರದಿಯಾಗಿದೆ.

ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ರೂ. ಎನ್ನಲಾಗಿದೆ. ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಸೆಟ್‌ ಅಲ್ಲದೇ ಕಲಾವಿದರ ಸಂಭಾವನೆ, ಮೇಕಪ್‌, ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಹೀಗೆ ಎಲ್ಲವೂ ಸೇರಿ ಬರೋಬ್ಬರಿ 50 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Pushpa 2 Teaser: ನಿರೀಕ್ಷೆಗೂ ಮೀರಿದೆ ಪುಷ್ಪ 2 ಟೀಸರ್‌; ಇಲ್ಲಿವೆ ಪುಷ್ಪರಾಜ್‌ನ ಖಡಕ್‌ ಲುಕ್‌ಗಳು!

ಟೀಸರ್‌ ಔಟ್‌ ಆದ ಕೆಲವೇ ನಿಮಿಷಗಳಲ್ಲಿ ಭಾರಿ ವೀಕ್ಷಣೆ ಕಂಡಿದೆ. ಕಿವಿಯಲ್ಲಿ ಜುಮ್ಕಿ, ಕಾಲಲ್ಲಿ ಗೆಜ್ಜೆ, ಹಣೆಯಲ್ಲಿ ಕುಂಕುಮ, ಸೀರೆಯುಟ್ಟು ಜಾತ್ರೆಯಲ್ಲಿ ಶತ್ರುಗಳನ್ನು ಸೆದೆಬಡಿಯುವ ಅವತಾರದಲ್ಲಿ ಕಂಡಿದ್ದಾರೆ ಪುಷ್ಪರಾಜ್‌. ದೃಶ್ಯಕ್ಕೆ ತಕ್ಕ ಹಾಗೇ ಹಿನ್ನೆಲೆ ಧ್ವನಿ ಕೂಡ ಮೈ ರೋಮಾಂಚನಗೊಳಿಸುವಂತಿದೆ. ಸಿನಿಮಾ ಆಗಸ್ಟ್ 15ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

Exit mobile version