ಬೆಂಗಳೂರು: ಸಂಗೀತ ಮಾಂತ್ರಿಕ ಇಳಯರಾಜ (Ilayaraja Daughter) ಅವರ ಪುತ್ರಿ ಜನಪ್ರಿಯ ಗಾಯಕಿ ಭವತಾರಿಣಿ (Bhavatharini) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿದ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಯ ಪ್ರಕಾರ, ಭವತಾರಿಣಿ ಚಿಕಿತ್ಸೆಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಐದು ತಿಂಗಳ ಕಾಲ ಆಯುರ್ವೇದ ಚಿಕಿತ್ಸೆಗೆ ಒಳಗಾದರೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಜ.25ರ ಸಂಜೆ 5:20ಕ್ಕೆ ನಿಧನರಾದರು. ಮೃತದೇಹವನ್ನು ಚೆನ್ನೈನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಹೇಳಲಾಗುತ್ತಿದೆ.
ಭವತಾರಿಣಿ 30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಲವಾರು ಜನಪ್ರಿಯ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದರು. ಅವರ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಭವತಾರಿಣಿ ಬಹುಮುಖ ಕಲಾವಿದೆಯಾಗಿ, ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯಾಗಿ ಹೆಸರು ಮಾಡಿದ್ದರು. ತಂದೆ ಮತ್ತು ಸಹೋದರರೊಂದಿಗೆ ಹಲವಾರು ಸಿನಿಮಾಗಳಿಗೆ ಸಂಗೀತ ಯೋಜನೆಗೆ ಸಾಥ್ ಕೂಡ ಕೊಟ್ಟಿದ್ದರು.
ಇದನ್ನೂ ಓದಿ: Raichur News: ಶಾಸಕ ಮಾನಪ್ಪ ವಜ್ಜಲ್ ಪುತ್ರ ಹೃದಯಾಘಾತದಿಂದ ನಿಧನ
#RIPBhavatharini Rest in Peace 🛐#Bhavatharini One Memories about @thisisysr childhood 🥺❤ pic.twitter.com/Tj3XWt5jtI
— Akashᴸᵉᵒᴰᵃˢ 🥶 (@Akash_jd07) January 26, 2024
அதிர்ச்சி…! தனித்துவமான குரலில் பாடிய ‘மஸ்தானா மஸ்தானா…’ என்ற பாடல் தான் முதல்முறையாக நான் கேட்ட அவருடைய பாடல். அன்றிலிருந்தே அவர் குரலுக்கு ரசிகன்.
— இளம்பிறை | hilaal (@HilaalAlamTamil) January 26, 2024
என் பட்டியலில் (ஜென்சிக்குப் பிறகு) மிகச் சிறந்த குரலுக்கு சொந்தக்காரர் யார் என்றால் #Bhavatharini தான்…
ஆழ்ந்த இரங்கல்கள் 😓 pic.twitter.com/oh5xO1llEh
‘ಭಾರತಿ’ ಸಿನಿಮಾದ ಹಾಡಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಗಳಿಸಿದ್ದರು. ಈ ಸಿನಿಮಾ ಸುಬ್ರಹ್ಮಣ್ಯ ಭಾರತಿ ಅವರ ಜೀವನದ ಮೇಲೆ ಆಧಾರಿತವಾಗಿತ್ತು. “ರಸಯ್ಯ” ಚಿತ್ರದಲ್ಲಿ ಹಿನ್ನಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ತಮಿಳು ಮಾತ್ರವಲ್ಲದೆ, ಅವರು ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ವಿವಿಧ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.