Site icon Vistara News

Vijay Deverakonda: ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ!

Vijay Deverakonda

ಹೈದರಾಬಾದ್: ವಿಜಯ್ ದೇವರಕೊಂಡ (Vijay Deverakonda) ಅವರ `ದಿ ಫ್ಯಾಮಿಲಿ ಸ್ಟಾರ್‌‘ ಸಿನಿಮಾ ಬಿಡುಗಡೆಗೊಂಡಿದೆ. ಇದೀಗ ಸಿನಿಮಾ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಟ ವಿಜಯ್ ದೇವರಕೊಂಡ ಟೀಮ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ. ಮಾತ್ರವಲ್ಲ ಇದರಿಂದಾಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ವಿಜಯ್ ದೇವರಕೊಂಡ ಅವರ ಚಿತ್ರ `ದಿ ಫ್ಯಾಮಿಲಿ ಸ್ಟಾರ್‌’ಗಾಗಿ ಟ್ರೋಲ್ ಆಗುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ದೇವರಕೊಂಡ ಅಭಿಮಾನಿಗಳು ಮತ್ತು ನಟನ ಮ್ಯಾನೇಜರ್ ಇತ್ತೀಚೆಗೆ ಹೈದರಾಬಾದ್‌ನ ಮಾದಾಪುರದಲ್ಲಿರುವ ಸೈಬರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 7 ರಂದು ದೂರು ದಾಖಲಿಸಲಾಗಿದೆ. ವಿಜಯ್ ಅವರ ಚಿತ್ರವು ಏಪ್ರಿಲ್ 5ರಂದು ಬಿಡುಗಡೆಯಾಯಿತು ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರದಲ್ಲಿ ಮೃಣಾಲ್ ಠಾಕೂರ್ ಸಹ ನಟಿಸಿದ್ದಾರೆ. ಬಿಡುಗಡೆಯಾದ ಎರಡು ದಿನಗಳ ನಂತರ ಸೈಬರ್ ಕ್ರೈಂಗೆ ಅಧಿಕೃತ ದೂರು ದಾಖಲಾಗಿದೆ.

ಸಿನಿಮಾ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ನೆಗೆಟಿವ್‌ ಕಮೆಂಟ್‌ಗಳಿಂದಾಗಿ ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಜಯ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನಟನೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಸಿನಿಮಾ ಈಗ ನೆಲಕಚ್ಚಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಎಂದು ತಂಡ ಆರೋಪಿಸಿದೆ.

ಇದನ್ನೂ ಓದಿ: Vijay Deverakonda: ಕೆಟ್ಟ ಬೈಗುಳಕ್ಕೆ ಸೆನ್ಸಾರ್ ಕತ್ತರಿ; ವಿಜಯ್‌-ಮೃಣಾಲ್‌ ಸಿನಿಮಾಗೆ ‘ಯು/ಎ’ ಸರ್ಟಿಫಿಕೇಟ್‌!

ʻಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್‌ ರಾಜು ಮತ್ತು ಶಿರೀಷ್ ನಿರ್ಮಿಸಿರುವ ಈ ಚಿತ್ರ ಬಿಡುಗಡೆ ಆಗಿದೆ.

Exit mobile version