Site icon Vistara News

Daniel Balaji: ತಮಿಳು ಖ್ಯಾತ ಖಳ ನಟ ಹೃದಯಾಘಾತದಿಂದ  ನಿಧನ

Daniel Balaji No more

ಬೆಂಗಳೂರು: ತಮಿಳು ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ (Daniel Balaji) ಮಾರ್ಚ್ 29ರ ಶುಕ್ರವಾರ ರಾತ್ರಿ  ಹೃದಯಾಘಾತದಿಂದ ( heart attack)  ನಿಧನರಾದರು. ಡೇನಿಯಲ್ ಬಾಲಾಜಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ನಟ ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ನಂತರ ಅವರು ಕೊನೆಯುಸಿರು ಎಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ಚಲನಚಿತ್ರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಅವರು ಬಾಲಾಜಿ ಅವರ ನಿಧನದ ಸುದ್ದಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡೇನಿಯಲ್ ಬಾಲಾಜಿ (48) ಒಬ್ಬ ಉತ್ತಮ ನಟ.  ಹೃದಯಾಘಾತದಿಂದ  ತಡರಾತ್ರಿ ನಿಧನರಾದರು. ʻವೆಟ್ಟೈಯಾಡು ವಿಲಯಾಡುʼ, ʻಪೊಲ್ಲಾಧವನ್ʼ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದರು. ಅವರ ಅಭಿನಯವನ್ನು ಯಾರು ಮರೆಯಲು ಸಾಧ್ಯ?ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Indian Navy: ಇರಾನ್‌ ಹಡಗು, 23 ಪಾಕಿಸ್ತಾನಿಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆ

ಡೇನಿಯಲ್ ಬಾಲಾಜಿ ಅವರ ಹಠಾತ್ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತಗೊಳಿಸಿದೆ. ನಿರ್ದೇಶಕ ಮೋಹನ್ ರಾಜಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬಾಲಾಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು, “ಇದೊಂದು ದುಃಖದ ಸುದ್ದಿ. ನನಗೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಲು ಅವರೇ ಸ್ಫೂರ್ತಿ. ತುಂಬಾ ಒಳ್ಳೆಯ ಸ್ನೇಹಿತ. ಅವರ ಆತ್ಮಕೆ ಶಾಂತಿ ಸಿಗಲಿ.”ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಲ್ಲಿ ಒಬ್ಬರು “ತಮಿಳು ಚಿತ್ರರಂಗದ ಶ್ರೇಷ್ಠ ಖಳನಾಯಕ ಮತ್ತು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು” ಎಂದು ಬರೆದುಕೊಂಡಿದ್ದಾರೆ.

ಡೇನಿಯಲ್ ಬಾಲಾಜಿ 2022ರ ಏಪ್ರಿಲ್ ʻಮಾಧತಿಲ್ʼ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಗೌತಮ್ ಮೆನನ್ ಮತ್ತು ಸೂರ್ಯ-ಜ್ಯೋತಿಕಾ ಅವರʻ ಕಾಖಾ ಕಾಖಾʼ ( Kaakha Kaakh) ಮೂಲಕ ಜನಪ್ರಿಯರಾದರು. ನಂತರ ಅವರು ʻವಿಧಿ ಮದಿ ಉಲ್ಟಾʼ (Vidhi Madhi Ultaa )ಮತ್ತು ʻಪೊಲ್ಲಾಧವನ್ʼ (Polladhavan) ಸೇರಿದಂತೆ ಹಲವಾರು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ದಳಪತಿ ವಿಜಯ್ ಅವರ ʻಭೈರವಾʼ, ಧನುಷ್ ಅವರ ʻವಡಾ ಚೆನ್ನೈʼ ಮತ್ತು ವಿಜಯ್ ಅವರ ʻಬಿಗಿಲ್ʼ (Bigil) ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Indian Navy: ಇರಾನ್‌ ಹಡಗು, 23 ಪಾಕಿಸ್ತಾನಿಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆ

ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಮೋಹನ್​ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು. ಬಾಲಾಜಿ ಕೆಲವು ಮಲಯಾಳಂ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

Exit mobile version