ಬೆಂಗಳೂರು: ನಟಿ ನಯನತಾರಾ (Actress Nayanthara ) ಮತ್ತು ನಿವಿನ್ ಪೌಲ್ ಮುಂಬರುವ ಮಲಯಾಳಂ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’ಗ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಏಪ್ರಿಲ್ 14ರಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಂದೀಪ್ ಕುಮಾರ್ ಮತ್ತು ಜಾರ್ಜ್ ಫಿಲಿಪ್ ಜೋಡಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ನಯನತಾರಾ ಮತ್ತು ನಿವಿನ್ ಪೌಲಿ ಅವರು ಚಿತ್ರದಲ್ಲಿ ನಟಿಸಿರುವುದಲ್ಲದೇ ತಮ್ಮ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾ ಮೊದಲು ನಯನತಾರಾ ಮತ್ತು ನಿವಿನ್ ಪೌಲ್ 2019 ರಲ್ಲಿ ‘ಲವ್ ಆ್ಯಕ್ಷನ್ ಡ್ರಾಮಾ’ ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗೆ ಧ್ಯಾನ್ ಶ್ರೀನಿವಾಸನ್ ನಿರ್ದೇಶನವಿತ್ತು. ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಜೋಡಿ ರೆಡಿಯಾಗಿದೆ. “ಆತ್ಮೀಯ ವಿದ್ಯಾರ್ಥಿಗಳ ಮೋಜಿನ ಜಗತ್ತಿನಲ್ಲಿʼʼ ಎಂದು ಸಣ್ಣ ವಿಡಿಯೊ ಹಂಚಿಕೊಂಡಿದ್ದಾರೆ ನಯನತಾರಾ.
ಮಲಯಾಳಂನಲ್ಲಿ, ನಯನತಾರಾ ಕೊನೆಯ ಬಾರಿಗೆ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಅವರ ‘ಗೋಲ್ಡ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಸುಕುಮಾರನ್ ನಾಯಕರಗಿದ್ದರು. ಸಿನಿಮಾ ನೆಗೆಟಿವ್ ವಿಮರ್ಶೆಯನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ: Nayanthara and Vignesh: ಪತಿಯನ್ನು ಅನ್‌ಫಾಲೋ ಮಾಡಿ ಭಾವುಕ ಪೋಸ್ಟ್ ಹಂಚಿಕೊಂಡ ನಯನತಾರ!
ಇತ್ತೀಚೆಗೆ ನಿರ್ದೇಶಕ ವಿನೀತ್ ಶ್ರೀನಿವಾಸನ್ ಅವರ ‘ವರ್ಷಂಗಲ್ಕ್ಕು ಶೇಷಂ’ ಚಿತ್ರದಲ್ಲಿ ನಿವಿನ್ ಪೌಲಿ ಕಾಣಿಸಿಕೊಂಡಿದ್ದರು. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇನ್ನೂ ಯಶಸ್ವಿಯಾಗಿ ಓಡುತ್ತಿದೆ.
‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸುತ್ತಾರಾ ನಯನತಾರಾ?
ಸದ್ಯ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಯನತಾರಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ‘ಬೈಜು ಬವ್ರಾ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಇದೀಗ ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
ತಮ್ಮ ಎರಡನೇ ಬಾಲಿವುಡ್ ಚಿತ್ರದ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಜತೆ ಈಗಾಗಲೇ ನಯನತಾರಾ ಚರ್ಚೆ ನಡೆಸಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಣವೀರ್ ಸಿಂಗ್ ಟೈಟಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1952ರಲ್ಲಿ ತೆರೆಕಂಡ ‘ಬೈಜು ಬವ್ರಾ’ ಚಿತ್ರದ ರಿಮೇಕ್ ಎನ್ನಲಾಗಿದ್ದು, ಮೂಲ ಚಿತ್ರದಲ್ಲಿ ಭರತ್ ಭೂಷಣ್-ಮೀನಾ ಕುಮಾರಿ ನಟಿಸಿದ್ದರು. ಸಂಗೀತಗಾರನೊಬ್ಬನ ಜೀವನದ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿತ್ತು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸುವಂತೆ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ. ಅವರು ಇನ್ನೂ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಮಾರ್ಚ್‌ನಲ್ಲಿ ನಯನತಾರಾ, ಪತಿ ವಿಘ್ನೇಶ್ ಶಿವನ್ ಜತೆ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಭೇಟಿಯಾಗಿ ಈ ಸಿನಿಮಾ ಕುರಿತು ಮಾತುಕತೆ ನಡೆಸಿದ್ದರು ಎಂದು ಮೂಲಗಳು ವರದಿ