Site icon Vistara News

Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

Dhanush D51 is titled Kubera intriguing first look

ಬೆಂಗಳೂರು: ಸೂಪರ್ ಸ್ಟಾರ್ ಧನುಷ್ (Actor Dhanush) ಅವರ  ʻಡಿ 51ʼ ಸಿನಿಮಾ ಟೈಟಲ್‌ ರಿವೀಲ್‌ ಆಗಿದೆ. ಮೋಷನ್ ಪೋಸ್ಟರ್ ಕೂಡ ಚಿತ್ರತಂಡ ಮಾ.8ರಂದು ಬಹಿರಂಗಪಡಿಸಿದೆ. ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ. ಸದ್ಯ ಈ ಚಿತ್ರಕ್ಕೆ ‘ಕುಬೇರ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ನಟ ಧನುಷ್ ಗಡ್ಡ ಬಿಟ್ಟು ನಗುತ್ತ ನೋಡುತ್ತಿರುವ ಪೋಸ್ಟರ್‌ ರಿಲೀಸ್ ಮಾಡಲಾಗಿದೆ.

“ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ, ನಾವು ಕುಬೇರನ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದೇವೆʼʼ ಎಂದು ಚಿತ್ರತಂಡ ಪೋಸ್ಟ್‌ ಹಂಚಿಕೊಂಡಿದೆ. ‘ಕುಬೇರ’ ಸಂಪತ್ತಿನ ದೇವರು. ಆದರೆ ಪೋಸ್ಟರ್‌ನಲ್ಲಿ ಧನುಷ್ ಬಡವನಂತೆ ಕಾಣಿಸಿಕೊಂಡಿರುವುದನ್ನು ನೋಡಬಹುದು. ಹಿನ್ನೆಲೆಯಲ್ಲಿ ಶಿವ, ಅನ್ನಪೂರ್ಣೆಯಿಂದ ಭಿಕ್ಷೆ ಪಡೆಯುವಂತಹ ಚಿತ್ರವನ್ನು ನೋಡಬಹುದಾಗಿದೆ. ಮುಂಬೈ ಮಾಫಿಯಾ ಹಿನ್ನೆಲೆಯಲ್ಲಿ ‘ಕುಬೇರ’ ಸಿನಿಮಾ ಕಥೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ತಿರುಪತಿ, ಗೋವಾ ಹಾಗೂ ಹೈದರಾಬಾದ್‌ನಲ್ಲಿ ಸಣ್ಣ ಶೆಡ್ಯೂಲ್ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ತಿರುಪತಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಧನುಷ್ ಭಿಕ್ಷುಕನ ರೀತಿ ಕಾಣಿಸಿಕೊಂಡಿದ್ದರು.

ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ಸಿನಿಮಾ ಇದು.

ಇದನ್ನೂ ಓದಿ: Actor Dhanush: ಧುನುಷ್‌ ಸಿನಿಮಾಗೆ ʻಎಸ್‌ಜೆ ಸೂರ್ಯʼ ವಿಲನ್‌: ರಗಡ್‌ ಲುಕ್‌ ಔಟ್‌!

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.

Exit mobile version