Site icon Vistara News

Lal Salaam Movie: ಮಾಜಿ ಪತ್ನಿ ನಿರ್ದೇಶನದ ಸಿನಿಮಾ ಬಿಡುಗಡೆ; ರಜನಿಗೆ ವಿಶ್‌ ಮಾಡಿದ ಧನುಷ್‌!

Dhanush shout out to Aishwarya Rajinikanth Lal Salaam

ಬೆಂಗಳೂರು: ರಜನಿಕಾಂತ್, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ʻಲಾಲ್ ಸಲಾಂʼ (Lal Salaam Movie) ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್‌ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಅವರ ಮಾಜಿ ಪತಿ ಮತ್ತು ನಟ ಧನುಷ್ ಸಿನಿಮಾಗೆ ವಿಶ್‌ ಮಾಡಿದ್ದಾರೆ. ಇನ್ನೂ ವಿಶೇಷ ಅಂದರೆ ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಒಟಿಟಿಯಲ್ಲಿ ಬಿಡುಗಡೆ ಆದರೆ, ಐಶ್ವರ್ಯಾ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರಮಂದಿರದಲ್ಲಿ ಬಿಡುಗಡೆ ಕಂಡಿದೆ.

‘ಲಾಲ್ ಸಲಾಂ’ ಸಿನಿಮಾಗೆ ಐಶ್ವರ್ಯಾ ನಿರ್ದೇಶನವಿದೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯ ಬಾಲಕೃಷ್ಣನ್, ವಿವೇಕ್ ಪ್ರಸನ್ನ, ಮತ್ತು ಕೆಎಸ್ ರವಿಕುಮಾರ್ ತಾರಾ ಬಳಗ. ಧನುಷ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ “ಇಂದಿನಿಂದ ಲಾಲ್ ಸಲಾಂ ” ಎಂದು ಬರೆದಿಕೊಂಡಿದ್ದಾರೆ.

ಇದಕ್ಕೂ ಮೊದಲು ಫೆಬ್ರವರಿ 5ರಂದು, ಧನುಷ್ ‘ಲಾಲ್ ಸಲಾಂ’ ಚಿತ್ರದ ಟ್ರೈಲರ್‌ ಹಂಚಿಕೊಂಡು ತಂಡಕ್ಕೆ ಶುಭಾಶಯ ತಿಳಿಸಿದ್ದರು. ಜತೆಗೆ ರಜನಿಕಾಂತ್‌ ಅವರ ಹೆಸರನ್ನು ಮೆನ್ಷನ್‌ ಮಾಡಿದ್ದರು, ಆದರೆ ಮಾಜಿ ಪತ್ನಿಯ ಹೆಸರು ಎಲ್ಲಿಯೂ ಉಲ್ಲೇಖ ಮಾಡಿರಲಿಲ್ಲ.

ಕ್ಯಾಪ್ಟನ್ ಮಿಲ್ಲರ್ ಅಮೇಜಾನ್ ಪ್ರೈಮ್ ವಿಡಿಯೊದಲ್ಲಿ

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಜನವರಿ 12ರಂದು ಥಿಯೇಟರ್​ನಲ್ಲಿ ಬಿಡುಗಡೆ ಆಯಿತು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರಮಂದಿರದಲ್ಲಿ ಇಂದು ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ತೆರೆಮೇಲೆ ಸುಮಾರು 40 ನಿಮಿಷ ಕಾಣಿಸಿಕೊಳ್ಳಲಿದ್ದಾರಂತೆ. ರಜನಿಕಾಂತ್ ಅವರನ್ನು ಕಂಡರೆ ಧನುಷ್​ಗೆ ಅಪಾರ ಗೌರವ ಇದೆ ಎಂಬುದಕ್ಕೆ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ಗಳೇ ಸಾಕ್ಷಿ.

ಇದನ್ನೂ ಓದಿ: Lal Salaam: ಬೈಂದೂರಿನ ಕಾಡಿನಲ್ಲಿ ನಕ್ಸಲರಿಂದ ಲಾಲ್ ಸಲಾಂ ಕಾರ್ಯಕ್ರಮ, ವಿಕ್ರಂ ಗೌಡ ಭಾಗಿ?

ಇನ್ನು ಐಶ್ವರ್ಯಾ ರಜನಿಕಾಂತ್‌ ಅವರು ತಂದೆಯ ಜತೆ ಸಿನಿಮಾ ಮಾಡಿರುವ ಬಗ್ಗೆ ಸಂದರ್ಶನನದಲ್ಲಿ ಹೇಳಿಕೊಂಡಿದ್ದಾರೆ, ಈ ಬಗ್ಗೆ ಮಾತನಾಡಿ ʻʻನನ್ನ ತಂದೆಗೆ ನಾನು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ, ಇದು ನನಗೆ ಒಂದು ಆಶೀರ್ವಾದ. ಅವರೊಂದಿಗೆ ಕೆಲಸ ಮಾಡುವ ಪ್ರತಿಯೊಂದು ದಿನವೂ ಮಿನಿ ಮಾಸ್ಟರ್‌ಕ್ಲಾಸ್ ಆಗಿತ್ತು. ಸೆಟ್‌ನಲ್ಲಿ ಮತ್ತು ವೃತ್ತಿಪರರಾಗಿ, ಅವರು ಉತ್ತಮ ಕಲಾವಿದʼʼ ಎಂದಿದ್ದರು.

ಲಾಲ್ ಸಲಾಂ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಎ ಸುಬಾಸ್ಕರನ್ ಪ್ರಸ್ತುತಪಡಿಸಿದ್ದಾರೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಅವರ ಕೊನೆಯ ನಿರ್ದೇಶನದ ಪ್ರಾಜೆಕ್ಟ್ ತಮಿಳು ಆ್ಯಕ್ಷನ್-ಥ್ರಿಲ್ಲರ್ ʻವೈ ರಾಜಾ ವೈʼ. ಇದರಲ್ಲಿ ಧನುಷ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Exit mobile version