Site icon Vistara News

Ilayaraja Daughter: ಅಪ್ಪ-ಮಗಳ ಸವಿನೆನಪು; ಫೋಟೊ ಹಂಚಿಕೊಂಡು ಇಳಯರಾಜ ಭಾವುಕ!

Ilaiyaraaja Remembers Daughter Bhavatharini

ಬೆಂಗಳೂರು: ಸಂಗೀತ ಮಾಂತ್ರಿಕ ಇಳಯರಾಜ (Ilayaraja Daughter) ಅವರ ಪುತ್ರಿ ಜನಪ್ರಿಯ ಗಾಯಕಿ ಭವತಾರಿಣಿ (Bhavatharini) ಅನಾರೋಗ್ಯದಿಂದ ಜ.25ರಂದು ನಿಧನರಾದರು. ಇದೀಗ ಇಳಯರಾಜ ಅವರು ಮಗಳನ್ನು ನೆನೆಪಿಸಿಕೊಂಡು ಮಗಳ ಬಾಲ್ಯದ ದಿನಗಳ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಫೋಟೊದಲ್ಲಿ ಇಳಯರಾಜ ಅವರು ಮಗಳಿಗೆ ಪುಸ್ತಕವನ್ನು ತೋರಿಸುವುದು ಕಂಡುಬಂದಿದೆ. ಫೋಟೊದಲ್ಲಿ ಇಳಯರಾಜ ಅವರು ಹೆಡ್‌ಫೋನ್‌ ಹಾಕಿಕೊಂಡಿದ್ದಾರೆ.

ಇಳಯರಾಜ (Ilayaraja Daughter) ಅವರ ಪುತ್ರಿ ಜನಪ್ರಿಯ ಗಾಯಕಿ ಭವತಾರಿಣಿ (Bhavatharini) ಅನಾರೋಗ್ಯದಿಂದ ನಿಧನ ಹೊಂದಿದ್ದರು. ಅವರಿಗೆ 47 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿದ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಯ ಪ್ರಕಾರ, ಭವತಾರಿಣಿ ಚಿಕಿತ್ಸೆಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಐದು ತಿಂಗಳ ಕಾಲ ಆಯುರ್ವೇದ ಚಿಕಿತ್ಸೆಗೆ ಒಳಗಾದರೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಜ.25ರ ಸಂಜೆ 5:20ಕ್ಕೆ ನಿಧನರಾದರು.

ಭವತಾರಿಣಿ 30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಲವಾರು ಜನಪ್ರಿಯ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದರು. ಅವರ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು. ಭವತಾರಿಣಿ ಬಹುಮುಖ ಕಲಾವಿದೆಯಾಗಿ, ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯಾಗಿ ಹೆಸರು ಮಾಡಿದ್ದರು. ತಂದೆ ಮತ್ತು ಸಹೋದರರೊಂದಿಗೆ ಹಲವಾರು ಸಿನಿಮಾಗಳಿಗೆ ಸಂಗೀತ ಯೋಜನೆಗೆ ಸಾಥ್‌ ಕೂಡ ಕೊಟ್ಟಿದ್ದರು.

ಇದನ್ನೂ ಓದಿ: Ilayaraja Daughter: ಸಂಗೀತ ಮಾಂತ್ರಿಕ ಇಳಯರಾಜ ಪುತ್ರಿ ʻಭವತಾರಿಣಿʼ ಇನ್ನಿಲ್ಲ

ಭಾರತಿ’ ಸಿನಿಮಾದ ಹಾಡಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಗಳಿಸಿದ್ದರು. ಈ ಸಿನಿಮಾ ಸುಬ್ರಹ್ಮಣ್ಯ ಭಾರತಿ ಅವರ ಜೀವನದ ಮೇಲೆ ಆಧಾರಿತವಾಗಿತ್ತು. “ರಸಯ್ಯ” ಚಿತ್ರದಲ್ಲಿ ಹಿನ್ನಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ತಮಿಳು ಮಾತ್ರವಲ್ಲದೆ, ಅವರು ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ವಿವಿಧ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಕಮಲ್ ಹಾಸನ್ ಸಹ ಭವತಾರಿಣಿಗೆ ಗೌರವ ಸಲ್ಲಿಸಿದರು. ನನ್ನ ಪ್ರೀತಿಯ ಸಹೋದರ ಇಳಯರಾಜರನ್ನು ಹೇಗೆ ಸಾಂತ್ವನಗೊಳಿಸಬೇಕೆಂದು ನನಗೆ ತಿಳಿದಿಲ್ಲ. ಭವತಾರಿಣಿಯ ಅಗಲಿಕೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭವತಾರಿಣಿ ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ”ಎಂದು ನಟ ಎಕ್ಸ್‌ನಲ್ಲಿ ತಮಿಳಿನಲ್ಲಿ ಬರೆದಿಕೊಂಡಿದ್ದರು.

Exit mobile version