Site icon Vistara News

Indian 2 Movie: ಇದೇ ಜೂನ್‌ನಲ್ಲಿ ಕಮಲ್ ಹಾಸನ್ ಅಭಿನಯದ ʻಇಂಡಿಯನ್‌ 2ʼ ಸಿನಿಮಾ ತೆರೆಗೆ!

Kamal Haasan Indian 2

ಬೆಂಗಳೂರು: ʻಇಂಡಿಯನ್ʼ (Indian 2 Movie) ಸಿನಿಮಾದಲ್ಲಿ ಕಮಲ್ ಹಾಸನ್ (kamal haasan) ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿ ‘ಇಂಡಿಯನ್ 2’ ಹೊಸ ಪೋಸ್ಟರ್‌ ಜತೆಗೆ ಸಿನಿಮಾ ಡೇಟ್‌ ಅನೌನ್ಸ್‌ ಮಾಡಿದೆ. ಶಂಕರ್ ನಿರ್ದೇಶನದ ʻಇಂಡಿಯನ್ 2ʼ ಇದೇ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಹೊಸ ಪೋಸ್ಟರ್‌ನಲ್ಲಿ ಕಮಲ್‌ ಗುರುತೇ ಸಿಗದಷ್ಟು ಲುಕ್‌ ಬದಲಾಯಿಸಿಕೊಂಡಿದ್ದಾರೆ.

ಚಿತ್ರತಂಡ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದು, ಯಾವ ದಿನ ಎಂಬುದನ್ನು ಬಹಿರಂಗಪಡಿಸಿಲ್ಲ. ಹೊಸ ಪೋಸ್ಟರ್‌ನಲ್ಲಿ, ಕಮಲ್ ಬಿಳಿ ಅಂಗಿ ಧರಿಸಿ, ಕೈಯನ್ನು ಕೈಕೋಳದಲ್ಲಿ ಕಟ್ಟಿರುವುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಸೇನಾಪತಿ ಪಾತ್ರದಲ್ಲಿ ಕಮಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಸೇನಾಪತಿಯ ಹೋರಾಟದ ಕಥೆ ಇರಲಿದೆ ಎನ್ನಲಾಗಿದೆ.

ಪೋಸ್ಟರ್ ಅನ್ನು ಹಂಚಿಕೊಂಡ ಕಮಲ್ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ. “ಸೇನಾಪತಿಯ ಪುನರಾಗಮನಕ್ಕೆ ಸಿದ್ಧರಾಗಿ! ʻಇಂಡಿಯನ್‌ 2ʼ ಜೂನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿರುಗಾಳಿ ಎಬ್ಬಿಸಲು ಸಿದ್ಧವಾಗಿದೆʼʼ ಎಂದು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸಿದ್ಧಾರ್ಥ್ ʻಇಂಡಿಯನ್ 2ʼ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವರದಿ ಇದೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಇದನ್ನೂ ಓದಿ: Kamal Haasan: ಇಂಡಿಯನ್ 2 ಚಿತ್ರೀಕರಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಕಮಲ್‌ ಹಾಸನ್‌: ವಿಡಿಯೊ ವೈರಲ್‌!

ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ 2ಗೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಛಾಯಾಗ್ರಹಣವಿದೆ.

Exit mobile version