Site icon Vistara News

Simbu Birthday: ನಟ ಸಿಂಬುಗೆ ಜನುಮದಿನದ ಸಂಭ್ರಮ; ಫಸ್ಟ್‌ ಲುಕ್‌ ಹಂಚಿಕೊಂಡ ಕಮಲ್‌ ಹಾಸನ್‌!

Kamal Haasan unveils Simbu's 'STR 48'

ಬೆಂಗಳೂರು: ಕಾಲಿವುಡ್‌ ನಟ ಸಿಂಬು (Simbu Birthday), ಅವರ ನಿಜವಾದ ಹೆಸರು ಸಿಲಂಬರಸನ್ ಥೆಸಿಂಗು ರಾಜೇಂದರ್ (Silambarasan Thesingu Rajendar). ತಮಿಳು ಚಿತ್ರರಂಗದಲ್ಲಿ ನಟನಾಗಿ, ಕಥೆಗಾರ, ಸಂಗೀತ ನಿರ್ದೇಶಕ, ಬರಹಗಾರ, ಗಾಯಕ, ನೃತ್ಯಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇಂದು (ಫೆ.2) ಸಿಂಬು ಅವರ ಜನುಮದಿನ. ನಟ ಕಮಲ್‌ ಹಾಸ್‌ ಅವರು ಸಿಂಬು ಅವರ ‘STR 48’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ವನ್ನು ಅನಾವರಣಗೊಳಿಸಿದ್ದಾರೆ. ದೇಸಿಂಗ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘STR 48’ ಎಂದು ಶೀರ್ಷಿಕೆ ನೀಡಲಾಗಿದೆ.

‘STR 48’ ಸಿನಿಮಾದಲ್ಲಿ ಸಿಂಬು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್‌ ಹಾಸನ್ ಅವರು ಸಿನಿಮಾದ ಫಸ್ಟ್‌ ಲುಕ್‌ ಹಂಚಿಕೊಂಡು ‘ಬ್ಲಡ್ ಅಂಡ್ ಬ್ಯಾಟಲ್’ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ʻʻನನ್ನ ಪ್ರೀತಿಯ ಸಹೋದರ ಸಿಂಬುಗೆ ಜನ್ಮದಿನದ ಶುಭಾಶಯಗಳುʼʼಎಂದು ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ದೇಸಿಂಗ್ ಪೆರಿಯಸಾಮಿ ಅವರು ಸಿಂಬು ಅವರಿಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕೀತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರಕ್ಕಿದೆ.

ವಿವಾದಲ್ಲಿದ್ದ ಸಿಂಬು

ಚೆನ್ನೈನಲ್ಲಿರುವ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು (Tamil Producers Council) ನಿರ್ಮಾಪಕರೊಂದಿಗಿನ ದುರ್ವರ್ತನೆಗಾಗಿ ನಾಲ್ವರು ಪ್ರಮುಖ ನಟರಿಗೆ ರೆಡ್ ಕಾರ್ಡ್ ನೀಡಿತ್ತು. ಸಿಂಬುಗೆ ಕೂಡ ರೆಡ್ ಕಾರ್ಡ್ ನೀಡಿದ್ದು, ಕಠಿಣ ಕ್ರಮದ ಒಮ್ಮತದ ನಿರ್ಧಾರವನ್ನು ನಿರ್ಮಾಪಕರ ಮಂಡಳಿಯು ತೆಗೆದುಕೊಂಡಿತ್ತು. ಅಪಾರ ಜನಪ್ರಿಯತೆ ಹೊಂದಿರುವ ನಟರು ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ಮುಂಗಡ ಹಣ ಪಡೆದು ಸೂಕ್ತ ಡೇಟ್ಸ್ ನೀಡದೇ ಇರುವ ಅಭ್ಯಾಸ ಹೊಂದಿರುತ್ತಾರೆ. ಕೆಲವು ನಟರು ಈ ಮುಂಗಡಗಳನ್ನು ಹಿಂದಿರುಗಿಸಿದರೂ, ಎಷ್ಟೋ ಪ್ರಾಜೆಕ್ಟ್‌ಗಳು ಕಾರ್ಯರೂಪಕ್ಕೆ ಬರದಿದ್ದರೂ ಸಹ, ಈ ಪ್ರಮುಖ ನಟರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕೆಂದು ಹಣವನ್ನು ಮರಳಿ ಕೇಳುವುದನ್ನೇ ನಿರ್ಮಾಪಕರು ಬಿಟ್ಟುಬಿಡುತ್ತಾರೆ. ಈ ಬಗ್ಗೆ ನಿರ್ಮಾಪಕರ ಸಂಘ ಅಸಮಾಧಾನ ವ್ಯಕ್ತಪಡಿಸಿ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು.

Exit mobile version