Site icon Vistara News

Karthi next film: ಇಂದು ನಟ ಕಾರ್ತಿ ಬರ್ತ್‌ಡೇ: ತಮ್ಮನ ಚಿತ್ರಕ್ಕೆ ಅಣ್ಣ ಸೂರ್ಯ ಬಂಡವಾಳ!

Karthi next film Suriya to produce Meiyazhagan

ಬೆಂಗಳೂರು: ಇಂದು ನಟ ಸೂರ್ಯ ಅವರ ಸಹೋದರ ಕಾರ್ತಿ ಜನುಮದಿನ. ನಟ ಸೂರ್ಯ ತನ್ನ ಸಹೋದರ, ನಟ ಕಾರ್ತಿ ಅವರಿಗೆ ಒಂದು ದಿನ ಮುಂಚಿತವಾಗಿ ವಿಶ್‌ ಮಾಡಿದ್ದಾರೆ. ಜತೆಗೆ ಕಾರ್ತಿ ಅವರ ಮುಂಬರುವ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದರು. ಪ್ರೇಮ್ ಕುಮಾರ್ ನಿರ್ದೇಶಿಸಿರುವ ಮತ್ತು ಸೂರ್ಯ ಅವರೇ ಸ್ವತಃ ನಿರ್ಮಿಸಿದ, ʻಮೇಯಳಗನ್ʼ (Meiyazhagan ) ಸಿನಿಮಾದಲ್ಲಿ ಕಾರ್ತಿ (Karthi next film) ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿ ಮತ್ತು ಅರವಿಂದ್ ಸ್ವಾಮಿ (Arvind Swamy) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪೋಸ್ಟರ್ ಒಂದರಲ್ಲಿ ಅರವಿಂದ್ ಅವರು ಸೈಕಲ್ ಮೇಲೆ ಕುಳಿತಿದ್ದಾರೆ. ಹಿಂದೆ ಕಾರ್ತಿ ಕೂತ್ತಿದ್ದಾರೆ. ಸವಾರಿ ಮಾಡುವಾಗ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಕಾಣಬಹುದು. ಎರಡನೇ ಪೋಸ್ಟರ್‌ನಲ್ಲಿ, ಕಾರ್ತಿ ಅವರು ಎತ್ತಿನ ಎದುರು ನಿಂತಿದ್ದಾರೆ. ಅವರು ನಗುತ್ತಿದ್ದಾರೆ. ಇದು ಹಳ್ಳಿಯ ಕಥೆ ಇರಬಹುದು ಎನ್ನಲಾಗುತ್ತಿದೆ.

ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘96’ ಚಿತ್ರವನ್ನು ಪ್ರೇಮ್ ಕುಮಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ‘96’ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು.  ‘96’ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಗೋವಿಂದ್ ವಸಂತ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 96 ಸಿನಿಮಾಗೆ ಸ್ಟಂಟ್‌ ಮಾಸ್ಟರ್‌ ಇರಲಿಲ್ಲ. ಈ ಚಿತ್ರಕ್ಕೂ ಇಲ್ಲ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ಕಂಗುವ ಸಿನಿಮಾ

ಸೂರ್ಯ ಸದ್ಯ ಕಂಗುವ ಸಿನಿಮಾದಲ್ಲಿ ನಟಿಸಲಿದ್ದಾರೆ, ಅವರು ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ತಮಿಳು ಚಿತ್ರರಂಗದ (Tamil Cinema) ಖ್ಯಾತ ನಟ ಸೂರ್ಯ (Actor Surya) ಅವರ ಬಹು ನಿರೀಕ್ಷಿತ `ಕಂಗುವ’ (Kanguva Film) ಚಿತ್ರದ ಟೀಸರ್ ಔಟ್‌ ಆಗಿತ್ತು. ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಹೊಸ ಅವತಾರ ತಾಳಿದ್ದರು. ಬಾಬಿ ಡಿಯೋಲ್ ಒಳಗೊಂಡಿರುವ ಬೃಹತ್ ಯುದ್ಧದ ದೃಶ್ಯವನ್ನು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿತ್ತು. ವರದಿಯ ಪ್ರಕಾರ ಬರೋಬ್ಬರಿ 10,000 ಜನರನ್ನು ಈ ದೃಶ್ಯದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.

ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದರು. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದರು.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version