ಬೆಂಗಳೂರು: ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ಇದೀಗ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಲೋಕೇಶ್ ಕನಕರಾಜ್. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (RKFI) ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ನಿರ್ದೇಶನ ಮಾಡಿದ್ದಾರೆ. ಅದೇ ರೀತಿ ಈ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಣ ಮಾಡಿದ್ದರು. ಇದೀಗ ಶ್ರುತಿ ಅವರಿಗೆ ಲೋಕೇಶ್ ಅವರು ನಿರ್ದೇಶನ ಮಾಡುತ್ತಿದ್ದು, ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ಶ್ರುತಿ ಮತ್ತು ಲೋಕೇಶ್ ಕನಕರಾಜ್ ಜತೆಯಿರುವ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೊ ಹಂಚಿಕೊಂಡು, ಇಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ. ಶ್ರುತಿ ಹಾಸನ್ ಅವರ ಚಿತ್ರಕ್ಕೆ ಇದೇ ಮೊದಲು ಕಮಲ್ ಹಾಸನ್ ಅವರು ನಿರ್ಮಿಸುತ್ತಿದ್ದಾರೆ. ಶ್ರುತಿ ಹಾಸನ್ ಅವರು ತಂದೆಯ ಚಿತ್ರಗಳಿಗೆ ಅನೇಕ ಹಾಡುಗಳನ್ನು ಹಾಡಿದ್ದರು.
2023ರಲ್ಲಿ ಸಲಾರ್, ವಾಲ್ತೇರ್ ವೀರಯ್ಯ, ವೀರ ಸಿಂಹ ರೆಡ್ಡಿಯಂತಹ ಸೂಪರ್‌ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು ಶ್ರತಿ ಹಾಸನ್. ಅಡವಿ ಶೇಷ್ ಜತೆ ʻಡಕಾಯತ್ʼ ಎಂಬ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೆ, ‘ಚೆನ್ನೈ ಸ್ಟೋರಿ’ ಶೀರ್ಷಿಕೆಯ ಚಿತ್ರದಲ್ಲಿ ಶ್ರುತಿ ಹಾಸನ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Shruti Haasan: ಬಾಯ್‌ಫ್ರೆಂಡ್‌ಗೆ ಧನ್ಯವಾದ ಅರ್ಪಿಸಿದ್ದೇಕೆ ನಟಿ ಶ್ರುತಿ ಹಾಸನ್?
ನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ ಎಂದಿದ್ದ ಶ್ರುತಿ
ದಕ್ಷಿಣ ಭಾರತದ ಖ್ಯಾತ ನಟಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Actress Shruti Haasan) ನೆಪೋಟಿಸಂ (ಸ್ವಜನ ಪಕ್ಷಪಾತ) ಬಗ್ಗೆ ಈ ಮುಂಚೆ ಮೌನ ಮುರಿದಿದ್ದರು.
ʻʻನಾನು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವಾಗ ಒಬ್ಬರನ್ನೂ ನೋಡಿ ಕಲಿತಿಲ್ಲ. ನನಗೆ ಇವರಂತೆ ನಟಿಸಬೇಕು ಎಂದೂ ಆಸೆ ಪಟ್ಟವಳು ಅಲ್ಲ. ನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿಯಬೇಕಿತ್ತು. ಕ್ಯಾಮೆರಾ ಕಂಡರೆ ಹೇಗಿರಬೇಕು, ಜನರಿದ್ದರೆ ಹೇಗಿರಬೇಕು, ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿ ಇವೆಲ್ಲ ನನಗೆ ಚಾಲೆಂಜಿಂಗ್ ಆಗಿತ್ತು. ಜೀವನದಲ್ಲಿ ಈ ಸ್ಥಾನಕ್ಕೆ ಬರಲು ನಡೆದುಕೊಂಡು ಬಂದ ಹಾದಿಯನ್ನು ಮರೆಯುವುದಿಲ್ಲʼʼ ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದರು.
ʻʻನನಗೆ ಒಂದು ವಿಚಾರದ ಬಗ್ಗೆ ಹೆಮ್ಮೆ ಇದೆ. ನನ್ನ ತಂದೆ-ತಾಯಿ ಚಿತ್ರರಂಗದವರಿಗೆ ಕರೆ ಮಾಡಿ ಅವಕಾಶ ಕೊಡಿ ಎಂದು ಕೇಳಿಲ್ಲ. ಸ್ಟಾರ್ ಮಕ್ಕಳಾಗಿ ಹುಟ್ಟಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂದು ಅವಕಾಶ ಕೊಡುತ್ತಾರೆ. ಆದರೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನನ್ನ ಸಿನಿ ರಂಗದ ಜರ್ನಿ ರೋಚಕವಾಗಿತ್ತು. ಪ್ರತಿ ಹಂತದಲ್ಲಿ ಪೋಷಕರು ಸಪೋರ್ಟ್ ಮಾಡುತ್ತಾರೆʼʼ ಎಂದಿದ್ದರು.