Site icon Vistara News

Nayanthara and Vignesh: ಅವಳಿ ಮಕ್ಕಳೊಂದಿಗೆ ಇರುವ ಕ್ಯೂಟ್‌ ಫೋಟೊ ಹಂಚಿಕೊಂಡ ನಯನತಾರಾ!

Nayanthara and Vignesh

ಬೆಂಗಳೂರು: ವಿಘ್ನೇಶ್ ಶಿವನ್ ಮತ್ತು ನಯನತಾರಾ (Nayanthara and Vignesh) ಅಕ್ಟೋಬರ್ 9ರಂದು ಅವಳಿ ಮಕ್ಕಳನ್ನು ಪಡೆದರು. ನಟಿ ನಯನತಾರಾ ಇತ್ತೀಚೆಗೆ ತಮ್ಮ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಯನತಾರಾ ಮತ್ತು ಶಿವನ್ ಇಬ್ಬರೂ ತಮ್ಮ ಅವಳಿ ಪುತ್ರರನ್ನು ತೋಳಿನಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಂಡಿರುವ ಕ್ಯೂಟ್‌ ಫೋಟೊವನ್ನು ಹಂಚಿಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ನಯನತಾರಾ ಈ ಅವಳಿ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದರು. ಈವೆಂಟ್‌ನಲ್ಲಿ ʻʻನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಳಗ್ ದೈವಿಗ್ ಎನ್ ಶಿವನ್ʼʼಎಂದು ಹೇಳಿಕೊಂಡಿದ್ದರು. ನಯನತಾರಾ ಮಕ್ಕಳ ಆರೈಕೆಗಾಗಿ ನಟನೆಯಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡಿದ್ದವು. ನಟನೆ ಹಾಗೂ ಮಕ್ಕಳ ಜವಾಬ್ದಾರಿ ಎರಡನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆ ಮಕ್ಕಳ ಜೊತೆ ಸಮಯ ಕಳೆಯಲು ಕೆಲ ಕಾಲ ನಟಿ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಕೇಳಿ ಹರಿದಾಡಿತ್ತು. ಆದರೆ ನಟಿ ʻಜವಾನ್‌ʼ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆದರು.

ಇತ್ತೀಚೆಗೆ ಥಿಯೇಟರ್‌ಗಳಲ್ಲಿ ತೆರೆಕಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅಭಿನಯದ ʼಅನ್ನಪೂರ್ಣಿʼ (Annapoorani) ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಮಾಡಿತ್ತು. ಇನ್‌ಸ್ಟಾ ಮೂಲಕ ನಟಿ ಕ್ಷಮೆ ಕೂಡ ಕೇಳಿದ್ದರು.

ಇದನ್ನೂ ಓದಿ: Actress Nayanthara: ರಾಮನ ಕುರಿತಾದ ಸಂಭಾಷಣೆ ಮೂಲಕ ವಿವಾದದ ಕಿಡಿ ಹೊತ್ತಿಸಿದ ನಯನತಾರಾ ಚಿತ್ರ

ವಿಘ್ನೇಶ್ ಶಿವನ್ ಪ್ರಸ್ತುತ ʻಲವ್ ಇನ್ಶುರೆನ್ಸ್ ಕಾರ್ಪೊರೇಶನ್‌ʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರದೀಪ್ ರಂಗನಾಥನ್, ಎಸ್.ಜೆ.ಸೂರ್ಯ ಮತ್ತು ಕೃತಿ ಶೆಟ್ಟಿ ಮನರಂಜನಾ ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Exit mobile version