ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್ (Nayanthara-Vignesh Shivan) ಅವರೊಂದಿಗೆ ಕೆಲವು ಸುಂದರವಾದ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ದಂಪತಿ ಟ್ರೆಡಿಷನಲ್ ಲುಕ್‌ನಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ.
ನಯನತಾರಾ ಲ್ಯಾವೆಂಡರ್ ಬಣ್ಣದ ಸೀರೆ ಮತ್ತು ವಿಘ್ನೇಶ್ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ನಯನತಾರಾ ಒಂದು ಫೋಟೊದಲ್ಲಿ ಪತಿ ಕಂಡು ನಾಚಿ ನೀರಾಗಿದ್ದಾರೆ.
ವಿಘ್ನೇಶ್ ಅವರು ಕೂಡ ತಮ್ಮ ಇನ್‌ಸ್ಟಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜೋಡಿ ಉದ್ಯಾನವನದಲ್ಲಿ ಸುಂದರ ಸಮಯ ಕಳೆದಿದೆ.
ಇದನ್ನೂ ಓದಿ: Lady Superstar: ಖ್ಯಾತ ನಿರ್ದೇಶಕರ ಚಿತ್ರದಲ್ಲಿ ನಟಿಸ್ತಾರಾ ನಯನತಾರಾ?
ನಿರ್ದೇಶಕ ಶಂಕರ್ ಅವರ ಪುತ್ರಿ ಐಶ್ವರ್ಯಾ ಮತ್ತು ತರುಣ್ ಕಾರ್ತಿಕೇಯನ್ ಅವರ ಮದುವೆಗೆಂದು ನಯನತಾರಾ ದಂಪತಿ ರೆಡಿಯಾಗಿರುವ ಫೋಟೊಗಳಿವು.
ಈ ಅದ್ಧೂರಿ ವಿವಾಹಕ್ಕೆ ರಜನಿಕಾಂತ್, ಕಮಲ್ ಹಾಸನ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.