ಬೆಂಗಳೂರು: ಕಾಲಿವುಡ್ ನಟ ಚಿಯಾನ್ ವಿಕ್ರಮ್ (Chiyaan Vikram) ಅವರಿಗೆ ಇಂದು (ಏ.17) 58ನೇ ಜನುಮದಿನದ ಸಂಭ್ರಮ. ಇದೀಗ ʻʻತಂಗಲಾನ್ʼʼ (Thangalaan)ಚಿತ್ರತಂಡ ಏಪ್ರಿಲ್ 17ರಂದು ಸಣ್ಣ ವಿಡಿಯೊ ಗ್ಲಿಂಪ್ಸ್ ಔಟ್ ಮಾಡಿದೆ. ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್ ವಿಕ್ರಮ್.
ʻʻಅಪ್ರತಿಮ ಪ್ರತಿಭೆ, ವೈಭವದೊಂದಿಗೆ ವಿಸ್ಮಯವನ್ನು ಪ್ರೇರೇಪಿಸುತ್ತದೆ. ಜನ್ಮದಿನದ ಶುಭಾಶಯಗಳು ಚಿಯಾನ್ ವಿಕ್ರಮ್. ದೊಡ್ಡ ಪರದೆ ನಿಮ್ಮ ಉಪಸ್ಥಿತಿಗಾಗಿ ಕಾಯುತ್ತಿದೆ!ʼʼಎಂದು ವಿಡಿಯೊ ಪೋಸ್ಟ್ ಮಾಡಿದೆ ಚಿತ್ರತಂಡ. ವಿಡಿಯೊದಲ್ಲಿ, ಚಿಯಾನ್ ರಗಡ್ ಲುಕ್‌ನಲ್ಲಿ ಕಂಡಿದ್ದಾರೆ. ವಿಡಿಯೊದಲ್ಲಿ ವಿವಿಧ ರೀತಿಯ ಆಯುಧಗಳನ್ನು ಹಿಡಿದು, ಒರಟಾದ ಅವತಾರದಲ್ಲಿ ಕಂಡಿದ್ದಾರೆ.
ಪಾ ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತಂಗಲಾನ್‌ನಲ್ಲಿನ ಈ ಪಾತ್ರಕ್ಕಾಗಿಯೇ ವಿಕ್ರಮ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್ʼʼ ಹೇಳುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್, ಮಾಳವಿಕಾ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್‌ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೂಲಕ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ರಂಜಿತ್.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಲಿದೆ.
ಇದನ್ನೂ ಓದಿ: Chiyaan Vikram: ಸಿನಿಮಾ ರಿಹರ್ಸಲ್ ವೇಳೆ ಚಿಯಾನ್ ವಿಕ್ರಮ್ ಪಕ್ಕೆಲುಬು ಮುರಿತ: ಶೂಟಿಂಗ್ ಸ್ಥಗಿತ
ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಡೇನಿಯಲ್ ಕಾಲ್ಟಗಿರೋನ್ ಮತ್ತು ಇನ್ನೂ ಅನೇಕರು ಇದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತವನ್ನು ರಚಿಸಿದ್ದಾರೆ.
ಚಿಯಾನ್ ವಿಕ್ರಮ್ ಅವರ ಮುಂಬರುವ ಚಿತ್ರಗಳು
ಅಣ್ಣಿಯಾನ್ ನಟ ಚಿತ್ರನಿರ್ಮಾಪಕ ಎಸ್‌ಯು ಅರುಣ್ ಕುಮಾರ್ ಅವರೊಂದಿಗೆ ತಾತ್ಕಾಲಿಕವಾಗಿ ʻಚಿಯಾನ್ 62ʼ ಎಂಬ ಯೋಜನೆಯಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ಎಸ್ ಜೆ ಸೂರ್ಯ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಭಾಗಗಳಲ್ಲಿದ್ದಾರೆ.
ಈ ಚಿತ್ರವನ್ನು HR ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಶಿಬು ಥಮೀನ್ಸ್ ಮತ್ತು ರಿಯಾ ಶಿಬು ನಿರ್ಮಿಸಿಲಿದ್ದಾರೆ.