ಬೆಂಗಳೂರು: ಬಹುಭಾಷಾ ನಟಿ ಪೂನಂ ಕೌರ್ (Poonam Kaur) ನಟನೆ ಮಾತ್ರವಲ್ಲದೇ ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಶಿವರಾಜಕುಮಾರ್ ಅಭಿನಯದ `ಬಂಧು ಬಳಗ’ ಮತ್ತು ರವಿಚಂದ್ರನ್‌ರವರ `ಮಂಜಿನ ಹನಿ’ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ಇದೀಗ ಸಂಕಷ್ಟದಲ್ಲಿದ್ದಾರೆ. ತಮಗಿರುವ ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆ ಕುರಿತು ಅವರು ನೋವು ತೋಡಿಕೊಂಡಿದ್ದಾರೆ.
ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಲ್ಲದೆ, ನಟಿ ಪೂನಂ ಕೌರ್ ಅವರು ಪವನ್ ಕಲ್ಯಾಣ್ ವಿರುದ್ಧ ಹಲವು ಪೋಸ್ಟ್‌ಗಳನ್ನು ಮಾಡಿ ಸುದ್ದಿಯಾದವರು. ಇತ್ತೀಚಿನ ದಿನಗಳಲ್ಲಿ, ಅವರು ವಿವಿಧ ಸೆಲೆಬ್ರಿಟಿಗಳ ವಿರುದ್ಧ ಕೆಲವು ವಿವಾದಾತ್ಮಕ ಪೋಸ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಕಳೆದ ಮೂರು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಪೂನಂ ಕೌರ್ ಬಹಿರಂಗಪಡಿಸಿದ್ದಾರೆ. ತನಗೆ ಬಂದಿರುವ ಕಾಯಿಲೆಯಿಂದ ಬಟ್ಟೆ ತೊಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಫೈಬ್ರೊಮ್ಯಾಲ್ಜಿಯಾ ಕಾಯಿಲೆ ಕುರಿತು ನಟಿ ಇದೀಗ ಹೇಳಿಕೊಂಡಿದ್ದಾರೆ. ಇದು ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ರೋಗವಾಗಿದೆ. ಈ ಲಕ್ಷಣ ಇರುವವರಿಗೆ ಸಾಮಾನ್ಯವಾಗಿ ದೈಹಿಕ ಮತ್ತು ಮಾನಸಿಕ ಒತ್ತಡ ಇದ್ದೇ ಇರುತ್ತದೆ. ಇದೀಗ ಪೂನಂ ಅವರು ಈ ಬಗ್ಗೆ ಹೇಳಿಕೊಂಡಿದ್ದು, ʻತಮಗೆ ಮೂರು ವರ್ಷಗಳಿಂದ ಈ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಸಮಸ್ಯೆಯಿಂದ ಬದುಕುವುದು ನರಕಕ್ಕೆ ಸಮಾನ. ಫೈಬ್ರೊಮ್ಯಾಲ್ಜಿಯಾ ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತದೆʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Poonam Pandey: ಪೂನಂ ಪಾಂಡೆ ‘ಸತ್ತದ್ದು’ ಸರಿ ಎಂದ ರಾಮ್ ಗೋಪಾಲ್ ವರ್ಮಾ!
నేచురోపతి లెజెండ్ డా.మంతెనగారిని కలవడం ఎంతో ఆనందం కలిగించింది. ఫైబ్రోమైయాల్జియా వైద్యానికి సంబంధించి ఆయన ఇచ్చిన సూచనలు అమూల్యం. మంచి మనసుగల వ్యక్తితో ఒక ఎపిసోడ్ లో పాలు పంచుకునే అవకాశం కలగడం నిజంగా నా అదృష్టం. pic.twitter.com/XiQwJvtyh7
— पूनम कौर ❤️ poonam kaur (@poonamkaurlal) February 1, 2024
ಈ ಕಾಯಿಲೆಗೆ ತುತ್ತಾದರೆ ಬಟ್ಟೆ ಮೈಗೆ ಸೋಕಿದರೆ ತುಂಬಾ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ 2-3 ವರ್ಷಗಳಿಂದ ಸಡಿಲವಾದ ಬಟ್ಟೆಗಳನ್ನು ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪೂನಂ ಕೌರ್ ಈ ಹಿಂದೆ ಕೇರಳದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಪೂನಂ ಅವರು ಈ ಹಿಂದೆ ತೆಲಂಗಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿಯ ಫೋಟೊ ಕುರಿತಾಗಿ ಸಾಕಷ್ಟು ಚರ್ಚೆಯಲ್ಲಿದ್ದರು. ಆಗ ಇವರು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರ ಜತೆ ಕೈ ಹಿಡಿದಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಟ್ರೋಲ್‌ಗೆ ಗುರಿಯಾಗಿದ್ದರು.