ಬೆಂಗಳೂರು: ಧನುಷ್ ಅವರ ‘ರಾಯನ್’ ಸಿನಿಮಾ ಎಂಟು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋ ರೂ. ಗಳಿಕೆ ಕಂಡಿದೆ. ‘ಮಹಾರಾಜ’ ಮತ್ತು ‘ಇಂಡಿಯನ್ 2’ ನಂತರ ಜಾಗತಿಕವಾಗಿ ಒಳ್ಳೆಯ ಕಲೆಕ್ಷನ್ ಮಾಡಿದ ವರ್ಷದ ಮೂರನೇ ತಮಿಳು ಚಿತ್ರವಾಗಿದೆ.
ತಮಿಳು ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಯಾವುದೇ ಸ್ಪರ್ಧೆಯಿಲ್ಲ. ಚಿತ್ರವುಭಾರತದಲ್ಲಿ ಸುಮಾರು ರೂ 72.75 ಕೋಟಿ ಗಳಿಕೆ ಮಾಡಿದೆ. ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾದ ಕಲೆಕ್ಷನ್‌ವನ್ನು ವಿಶ್ವದಾದ್ಯಂತ ಮೀರಿಸಲಿದೆ ಎಂದು ವರದಿಯಾಗಿದೆ. ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಸಿನಿಮಾ 145.53 ಕೋಟಿ ರೂ. ಗಳಿಸಿದೆ.
‘ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 50 ಕೋಟಿ ರೂ.ಗಳ ಗಡಿ ದಾಟುವ ಹಂತದಲ್ಲಿದೆ. ಆಗಸ್ಟ್ 3ರ ಎರಡನೇ ಶನಿವಾರದ ಅಂತ್ಯದ ವೇಳೆಗೆ ಚಿತ್ರ ಈ ಸಾಧನೆ ಮಾಡಲಿದೆ. ‘ತಿರುಚಿತ್ರಂಬಲಂ’ ಮತ್ತು ‘ವಾತಿ’ ನಂತರ ‘ರಾಯನ್’ ಧನುಷ್ ಅವರ 100 ಕೋಟಿ ರೂ. ಗಳಿಕೆ ಕಂಡ ಸಿನಿಮಾವಿದು.
ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.
ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಕೂಡ ಇದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇದು ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ A ಸರ್ಟಿಫಿಕೇಟ್ ಪಡೆದುಕೊಂಡಿದೆ.
ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಔಟ್; ಸೋನು ಗೌಡ ನಾಯಕಿ!
ಧನುಷ್ (Actor Dhanush) ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ ಭಾರತದಲ್ಲಿ 50 ಕೋಟಿ ರೂ, ಕಲೆಕ್ಷನ್ ಮಾಡಿದೆ.ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಸಿನಿಮಾ ಭರ್ಜರಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.