ಬೆಂಗಳೂರು: ಜ್ಯೋತಿಕಾ ಅವರು ಪತಿ ಹಾಗೂ ನಟ ಸೂರ್ಯ (Jyotika and Suriya) ಜತೆ ವರ್ಕೌಟ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಕಾಲಿವುಡ್ನ ಪವರ್ ಕಪಲ್ ಎಂದು ಕರೆಯಲ್ಪಡುವ ಜ್ಯೋತಿಕಾ ಮತ್ತು ಸೂರ್ಯ ಒಟ್ಟಿಗೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವುದು ಕಂಡುಬಂದಿದೆ. ಜ್ಯೋತಿಕಾ ಅವರ ವರ್ಕೌಟ್ ವಿಡಿಯೊ ವೈರಲ್ ಆಗುತ್ತಿರುವುದು ಹೊಸದೇನಲ್ಲ. ಕಳೆದ ವರ್ಷ ಸುಮಾರು 16 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.
ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (15 ವರ್ಷ) ಮಗ ದೇವ್ (12 ವರ್ಷ). ಜ್ಯೋತಿಕಾ ಅವರಿಗೆ 44 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಇಬ್ಬರು ದೊಡ್ಡ ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್ ಆಗಿದ್ದಾರೆ. ಹಿಂದಿನ ಬಾರಿ ಜ್ಯೋತಿಕಾ ವರ್ಕೌಟ್ಗೆ ಸೂರ್ಯ ಅವರು ಪತಿ ಸೂರ್ಯ ʻʻಮೈ ವಂಡರ್ ವುಮೆನ್ʼʼಎಂದು ಇನ್ಸ್ಟಾ ಸ್ಟೋರಿಯಲ್ಲಿ ರಿ ಪೋಸ್ಟ್ ಮಾಡಿಕೊಂಡಿದ್ದರು. ಈಗ ಮತ್ತೊಂದು ಬಾರಿ ನಟಿಯ ಫಿಟ್ನೆಸ್ ವಿಡಿಯೊ ವೈರಲ್ ಆಗಿದೆ.
ಜ್ಯೋತಿಕಾ ತಮ್ಮ ಮುಂದಿನ ಬಾಲಿವುಡ್ ಚಿತ್ರ ʻಶ್ರೀʼಗಾಗಿ ತಯಾರಿ ನಡೆಸುತ್ತಿದ್ದಾರೆ. ಜ್ಯೋತಿಕಾ ಅವರು ಸೀತಾ ಕಲ್ಯಾಣಂ, 36 ವಯಧಿನಿಲೆ, ಮೋಜಿ, ಕಾಕ ಕಾಕ, ಸಿಲ್ಲುನು ಒರು ಕಾದಲ್ ಮತ್ತು ಪಚ್ಚಕಿಲಿ ಮುತ್ತುಚರಂದ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಸೂರ್ಯ ಅವರೊಂದಿಗೆ ಸ್ಟುಡಿಯೋ 2D ಎಂಟರ್ಟೇನ್ಮೆಂಟ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: Manmohan Singh: 33 ವರ್ಷದ ಬಳಿಕ ಮನಮೋಹನ್ ಸಿಂಗ್ ಇಂದು ರಾಜ್ಯಸಭೆಯಿಂದ ನಿವೃತ್ತಿ; ʼಒಂದು ಯುಗ ಮುಗಿಯಿತುʼ
ಈಗಾಗಲೇ ಜ್ಯೋತಿಕಾ ಅವರು ʻಶೈತಾನ್; ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್, ತಮಿಳು ನಟಿ ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್. ಮಾಧವನ್ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಕಾಸ್ ಬಹ್ಲ್ ‘ಶೈತಾನ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ‘ಕ್ವೀನ್’, ‘ಸೂಪರ್ 30’ ಅಂಥ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ಶೈತಾನ್’ ಗುಜರಾತಿ ಭಾಷೆಯ ‘ವಶ್’ ಚಿತ್ರದ ಹಿಂದಿ ರಿಮೇಕ್ ಆಗಿದೆ.
ಸೂರ್ಯ ಅವರು ನಿರ್ದೇಶಕ ಸಿರುತೈ ಶಿವ ಅವರ ‘ಕಂಗುವ’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಏಪ್ರಿಲ್ 5ರಂದು ಥಿಯೇಟರ್ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ. ಕೆಲವು ದಿನಗಳ ಹಿಂದೆಯಷ್ಟೇ ʻಕಂಗುವʼ ಟೀಸರ್ ಔಟ್ ಆಗಿತ್ತು. ಇದರ ಬೆನ್ನಲ್ಲೇ ತಮ್ಮ ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್ ಮಾಡಿದ್ದಾರೆ ಸೂರ್ಯ (Actor Suriya). ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ (Karthik Subbaraj) ಅವರೊಂದಿಗೆ ಕೈಜೋಡಿಸಿರುವುದಾಗಿ ನಟ ಘೋಷಿಸಿದ್ದಾರೆ. ಇದು ಸೂರ್ಯ ಅವರ 44ನೇ ಸಿನಿಮಾ ಆಗಿದೆ. 42ನೇ ಚಿತ್ರ ʻಕಂಗುವʼ ಸಿನಿಮಾ ರಿಲೀಸ್ಗಾಗಿ ಸೂರ್ಯ ಫ್ಯಾನ್ಸ್ ಕಾಯುತ್ತಿದ್ದಾರೆ.