Site icon Vistara News

Surya Prakash: ʻಮಾಯಿʼ ಸಿನಿಮಾ ಖ್ಯಾತಿಯ ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ಇನ್ನಿಲ್ಲ

Surya Prakash Maayi director dies

ಬೆಂಗಳೂರು: ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ (Surya Prakash) ಸೋಮವಾರ (ಮೇ 27) ಹೃದಯಾಘಾತದಿಂದ ನಿಧನರಾದರು. ‘ಮಾಯಿ’, ‘ಮಾಣಿಕ್ಕಂ’ ಮತ್ತು ‘ದಿವಾನ್’ ಚಿತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಸೂರ್ಯ ಪ್ರಕಾಶ್ (‘Maayi’ director) ಅವರ ಅಂತಿಮ ವಿಧಿವಿಧಾನಗಳ ಕುರಿತು ಕುಟುಂಬ ಮಾಹಿತಿ ಹಂಚಿಕೊಂಡಿಲ್ಲ.

ನಟ ಶರತ್‌ಕುಮಾರ್ ಮತ್ತು ರಾಧಿಕಾ ಶರತ್‌ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಮೂಲಕ ಸಂತಾಪ ಸೂಚಿಸಿದ್ದಾರೆ. “ಮಾಯಿ ಮತ್ತು ದಿವಾನ್ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ್ ಅವರ ನಿಧನದ ಸುದ್ದಿ ಕೇಳಿ ಆಘಾತ ಮತ್ತು ನೋವಾಯ್ತು. ನಿನ್ನೆಯಷ್ಟೇ ಅವರ ಜತೆ ಮಾತನಾಡಿದ್ದೆ. ಅವರ ಹಠಾತ್ ನಿಧನ ತುಂಬ ದುಃಖ ಉಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼʼಎಂದು ನಟ ಶರತ್‌ಕುಮಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಧಿಕಾ ಶರತ್‌ಕುಮಾರ್ “ಅದ್ಭುತ ಮತ್ತು ಪ್ರತಿಭಾವಂತ ವ್ಯಕ್ತಿ, ಉತ್ತಮ ಬರಹಗಾರ, ಹಾಸ್ಯದ ಅಭಿರುಚಿಯುಳ್ಳ ನಿರ್ದೇಶಕ, ನಟ ಶರತ್‌ಕುಮಾರ್ ಅವರ ಆತ್ಮೀಯ ಸ್ನೇಹಿತ. ಅವರ ಕುಟುಂಬ ಮತ್ತು ಸಿನಿಮಾ ಉದ್ಯಮಕ್ಕೆ ದೊಡ್ಡ ನಷ್ಟʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhadak 2: ‘ಧಡಕ್ 2’ ಸಿನಿಮಾ ಅನೌನ್ಸ್‌ ಮಾಡಿದ ಕರಣ್‌ ಜೋಹರ್: ʻಅನಿಮಲ್‌ʼ ನಟಿ ನಾಯಕಿ!

ಸೂರ್ಯ ಪ್ರಕಾಶ್ ಅವರು ರಾಜ್‌ಕಿರಣ್‌ ಅವರ ‘ಮಾಣಿಕ್ಕಂ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ನಂತರ ಅವರು ಶರತ್‌ಕುಮಾರ್ ಮತ್ತು ಮೀನಾಅವರಿಗೆ ‘ಮಾಯಿ’ ಸಿನಿಮಾಗಾಗಿ ನಿರ್ದೇಶನ ಮಾಡಿದರು. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ತೆಲುಗಿನಲ್ಲಿ ‘ಸಿಂಹರಸಿ’ ಮತ್ತು ಕನ್ನಡದಲ್ಲಿ ‘ನರಸಿಂಹ’ ಎಂದು ಸಿನಿಮಾ ರಿಮೇಕ್ ಆಗಿತ್ತು.

ರಾಜಶೇಖರ್ ಅಭಿನಯದ ‘ಭರತಸಿಂಹ ರೆಡ್ಡಿ’ ಚಿತ್ರದ ಮೂಲಕ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಶರತ್‌ಕುಮಾರ್ ಅವರ ‘ದಿವಾನ್’ ಮತ್ತು ಜೀವನ್ ಅವರ ‘ಅಧಿಬರ್’ ಮೂಲಕ ತಮಿಳಿಗೆ ಮತ್ತೆ ಕಮ್‌ಬ್ಯಾಕ್‌ ಆಗಿದ್ದರು.

Exit mobile version