Site icon Vistara News

Thalapathy Vijay: ಕಲಾವಿದರ ಸಂಘವೊಂದಕ್ಕೆ ಬರೋಬ್ಬರಿ ಒಂದು ಕೋಟಿ ರೂ. ದೇಣಿಗೆ ನೀಡಿದ ನಟ ವಿಜಯ್!

Thalapathy Vijay donates Rs 1 crore for South Indian Artistes Association

ಬೆಂಗಳೂರು: ತಮಿಳು ಚಿತ್ರ ನಟ ದಳಪತಿ ವಿಜಯ್‌ (Thalapathy Vijay) ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನು ಘೋಷಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ವಿಜಯ್ ಕಣಕ್ಕೆ ಇಳಿಸಲಿದ್ದಾರೆ. ತಮಿಳುನಾಡಿನ ʻನಡಿಗರ್ ಸಂಘಂʼ (ಕಲಾವಿದರ ಸಂಘ) Nadigar Sangam ಕಟ್ಟಡವೊಂದು ನಿರ್ಮಾಣ ಆಗುತ್ತಿದೆ. ಈ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ ಒಂದು ಕೋಟಿ ರೂ. ದೇಣಿಗೆಯನ್ನು ನಟ ವಿಜಯ್ ನೀಡಿದ್ದಾರೆ.

ಈ ಸುದ್ದಿಯನ್ನು ನಟ ವಿಶಾಲ್ ಅವರು ಹಂಚಿಕೊಂಡಿದ್ದಾರೆ. ಅವರ ಕೊಡುಗೆಗಾಗಿ ದಳಪತಿ ವಿಜಯ್‌ ಅವರಿಗೆ ಧನ್ಯವಾದ ಹೇಳಿದ್ದಾರೆ. ವಿಶಾಲ್ ಎಕ್ಸ್‌ನಲ್ಲಿ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ, ʻʻನಡಿಗರ್ ಸಂಘಂ ಕಟ್ಟಡದ ಕೆಲಸಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಿದ ನನ್ನ ನೆಚ್ಚಿನ ನಟ ಸಹೋದರ ದಳಪತಿ ವಿಜಯ್‌. ದೇವರು ನಿಮಗೆ ಒಳ್ಳೆಯದು ಮಾಡಲಿʼʼಎಂದು ಬರೆದುಕೊಂಡಿದ್ದಾರೆ. ಸಂಘದ ಅಧ್ಯಕ್ಷರಾಗಿರುವ ನಟ, ನಿರ್ಮಾಪಕ ವಿಶಾಲ್, ವಿಜಯ್ ಮಾಡಿರುವ ಸಹಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ವಿಜಯ್ ಜತೆಗಿನ ತಮ್ಮ ಚಿತ್ರವನ್ನು ಸಹ ವಿಶಾಲ್ ಹಂಚಿಕೊಂಡಿದ್ದಾರೆ.

68 ಚಿತ್ರಗಳಲ್ಲಿ ನಟಿಸಿರುವ ವಿಜಯ್ ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಆಹಾರದ ಉಚಿತ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿವೇತನಗಳು, ಗ್ರಂಥಾಲಯಗಳು, ಸಂಜೆಯ ತರಗತಿಗಳು, ಕಾನೂನು ಸಹಾಯ ಸೇರಿದಂತೆ ಹಲವಾರು ಚಾರಿಟಿ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ವಿಜಯ್ ಅವರ ತಂದೆ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಚಂದ್ರಶೇಖರ್.

ಇದನ್ನೂ ಓದಿ: Actor Rajinikanth: ರಾಜಕೀಯಕ್ಕೆ ಧುಮುಕಿದ ನಟ ದಳಪತಿ ವಿಜಯ್‌; ರಜನಿಕಾಂತ್‌ ರಿಯಾಕ್ಷನ್‌ ಏನು?

ವಿಜಯ್ ಅವರ ಚಲನಚಿತ್ರಗಳು ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಪ್ರಮುಖ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಸ್ಪರ್ಶಿಸುತ್ತವೆ. ರಾಜ್ಯದಲ್ಲಿ ಭಾರಿ ಅಭಿಮಾನಿ ಬಳಗ ವಿಜಯ್‌ಗೆ ಇದೆ. ವಿಜಯ್ ಅವರ ಕೆಲವು ಚಲನಚಿತ್ರಗಳು ಸರ್ಕಾರಗಳನ್ನು ಹಾಗೂ ರಾಜಕಾರಣಿಗಳು ವಿಡಂಬಿಸಿದ್ದು, ವಿವಾದಕ್ಕೆ ಗುರಿಯಾಗಿವೆ.

ದಳಪತಿ ವಿಜಯ್ ಪ್ರಸ್ತುತ ತಮ್ಮ 68ನೇ ಚಿತ್ರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನು ವೆಂಕಟ್ ಪ್ರಭು ನಿರ್ದೇಶಿಸಲಿದ್ದು, ಅರ್ಚನಾ ಕಲ್ಪಾತಿ ನಿರ್ಮಿಸಲಿದ್ದಾರೆ.

Exit mobile version