Site icon Vistara News

Thalapathy Vijay: ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ತಮಿಳು ಖ್ಯಾತ ನಟ!

Thalapathy Vijay

ಬೆಂಗಳೂರು: ಸಿನಿಮಾ ವೃತ್ತಿಜೀವನಕ್ಕೆ ದಳಪತಿ ವಿಜಯ್‌ (Thalapathy Vijay) ಅವರು ವಿದಾಯ ಹೇಳಲು ಸಜ್ಜಾಗುತ್ತಿದ್ದಾರೆ. ದಳಪತಿ ವಿಜಯ್‌ ಅವರ 69ನೇ ಸಿನಿಮಾ ಘೋಷಣೆ ಆಗಲಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ತಮಿಳು ಚಿತ್ರ ನಟ ದಳಪತಿ ವಿಜಯ್‌ (Thalapathy Vijay) ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದು ಗೊತ್ತೇ ಇದೆ. ಪಕ್ಷಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನು ಈಗಾಗಲೇ ಘೋಷಿಸಿದ್ದಾರೆ ನಟ. ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ 2026ರ ರಾಜ್ಯ ಚುನಾವಣೆಯಲ್ಲಿ ವಿಜಯ್‌ ಅವರು ಕಣಕ್ಕೆ ಇಳಿಯಲಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ 2026ರಲ್ಲಿ ಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಇದೀಗ ದಳಪತಿ ವಿಜಯ್ (Thalapathy Vijay constructed Sai Baba temple) ಅವರು ಚೆನ್ನೈನಲ್ಲಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಇದು ಅವರ ತಾಯಿಗಾಗಿ.

ವರದಿಯ ಪ್ರಕಾರ ಚೆನ್ನೈನಲ್ಲಿ ವಿಜಯ್ ಅವರಿಗೆ ತಾಯಿ ಶೋಭಾ ಅವರಿಗಾಗಿ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಈಡೇರಿದೆ. ಚೆನ್ನೈನ ಕೊರಟ್ಟೂರ್​ನಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ಈ ವರ್ಷ ಫೆಬ್ರುವರಿಯಲ್ಲಿ ಈ ದೇವಸ್ಥಾನ ಕಾರ್ಯ ಪೂರ್ಣಗೊಂಡಿದೆ ಎಂದು ವರದಿಯಾಗಿದೆ. ಸದ್ಯ ದಳಪತಿ ವಿಜಯ್‌ ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವ ಫೋಟೊ ವೈರಲ್‌ ಆಗಿದೆ.

ಇದನ್ನೂ ಓದಿ: Thalapathy Vijay: 14 ವರ್ಷಗಳ ಬಳಿಕ ದಳಪತಿ ವಿಜಯ್‌ ಕೇರಳಕ್ಕೆ; ಕಾರಿನ ಗ್ಲಾಸ್ ಪೀಸ್ ಪೀಸ್!

ವಿಜಯ್‌ ಅವರ ತಂದೆ ಎಸ್‌ಎ ಚಂದ್ರಶೇಖರ್ ನಿರ್ಮಾಪಕರಾದರೆ, ತಾಯಿ ಶೋಭಾ ಅವರು ನಿರ್ದೇಶಕಿ-ಹಿನ್ನೆಲೆ ಗಾಯಕಿಯಾಗಿದ್ದರು. ವಿಜಯ್‌ ಪೋಷಕರದ್ದು ಅಂತರ್‌ ಧರ್ಮೀಯ ವಿವಾಹ. ಚಂದ್ರಶೇಖರ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಕುಟುಂಬದಿಂದ ಬಂದವರು ಮತ್ತು ಶೋಭಾ ಹಿಂದೂ ಆಗಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್‌ ಅವರು ಸದ್ಯ ‘ಗ್ರೇಟೆಸ್ಟ್ ಆಫ್ ಆಲ್​ ಟೈಮ್’ ((‘Greatest Of All Time (GOAT)’) ) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿಶಾ ನಾಯಕಿ. ಈ ಸಿನಿಮಾದಲ್ಲಿ ಪ್ರಭುದೇವ ಮೊದಲಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಸ್ನೇಹಾ ಮತ್ತು ಲೈಲಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ.

‘ಗೋಟ್’ ಅನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್‌ನಿಂದ ಕಲ್ಪತಿ ಎಸ್ ಅಘೋರಂ, ಕಲ್ಪತಿ ಎಸ್ ಗಣೇಶ್ ಮತ್ತು ಕಲ್ಪತಿ ಎಸ್ ಸುರೇಶ್ ಅವರು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆ. ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಮತ್ತು ವೆಂಕಟ್ ರಾಜೇನ್ ಅವರ ಸಂಕಲನವಿದೆ.

“ಗೋಟ್’ ನಿರ್ಮಾಣದ ಕೊನೆಯ ಹಂತದಲ್ಲಿದ್ದು, ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ವಿಜಯ್ ಕೊನೆಯದಾಗಿ ಲೋಕೇಶ್ ಕನಕರಾಜ್ ಅವರ ʻಲಿಯೋʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

Exit mobile version