ಬೆಂಗಳೂರು: ಜ್ಞಾನವೇಲ್ ರಾಜ್ ನಿರ್ಮಾಣದ, ಪಾ ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ಅಭಿನಯದ ‘ತಂಗಲಾನ್ʼ ಚಿತ್ರವು (Thangalaan Movie) ಆಗಸ್ಟ್ 15 ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸ್ಟುಡಿಯೋ ಗ್ರೀನ್ ಫಿಲ್ಮ್ಸ್ ಮತ್ತು ನೀಲಂ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ನಿರ್ಮಿಸಿದ ಈ ಸಿನಿಮಾ ಸೀಕ್ವೆಲ್ ಕೂಡ ಶೀರ್ಘದಲ್ಲಿ ಬರುತ್ತಿದೆ. ಈ ಬಗ್ಗೆ ಚಿಯಾನ್ ವಿಕ್ರಮ್ ಅವರೇ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
“ಪಾ ರಂಜಿತ್ ಅವರಿಗೆ ನನ್ನ ಮೇಲೆ ಅಪಾರ ನಂಬಿಕೆ ಇತ್ತು, ಇದರಿಂದಾಗಿ ಈ ಚಿತ್ರ ಸಾಧ್ಯವಾಯಿತು. ತಂಗಲಾನ್ ಮುಂದಿನ ಭಾಗಕ್ಕೆ ಅರ್ಹವಾಗಿದೆ. ನೀವೆಲ್ಲರೂ ತುಂಬಾ ಇಷ್ಟಪಟ್ಟಿದ್ದೀರಿ. ತಂಗಲಾನ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪೊನ್ನಿಯಿನ್ ಸೆಲ್ವನ್ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಕ್ಕೆ ಖುಷಿ ಇದೆʼʼಎಂದರು.
2011 ರಲ್ಲಿ ನಟ ವಿಕ್ರಮ್ ಅಭಿನಯದ ‘ದೈವತಿರುಮಗಳು’ ಚಿತ್ರದ ನಂತರ ಗುಣಮಟ್ಟದ ಬ್ರೇಕ್ ನೀಡುವ ಚಿತ್ರಗಳು ಬಂದಿಲ್ಲ. ಏಕೆಂದರೆ ಈ ಚಿತ್ರದ ನಂತರ ಬಿಡುಗಡೆಯಾದ ಐ, ಇರುಮುಗನ್, ಕೋಬ್ರಾ, ಸಾಮಿ ಸ್ಕ್ವೇರ್ ಮುಂತಾದ ಬಿಗ್ ಬಜೆಟ್ ಚಿತ್ರಗಳು ಮಿಶ್ರ ವಿಮರ್ಶೆಗಳನ್ನು ಕಂಡವು. ಆದರೆ, ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ತೆರೆಕಂಡ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ವಿಕ್ರಮ್ ಗೆ ಮತ್ತೆ ಹಿಟ್ ಆಯಿತು.ಇದೀಗ ‘ತಂಗಾಲನ್’ ಅದ್ಭುತವಾದ ಸಿನಿಮಾ, ಕೆಲವು ಅದ್ಭುತ ದೃಶ್ಯಗಳನ್ನು ಪಾ ರಂಜಿತ್ ಕಟ್ಟಿಕೊಟ್ಟಿದ್ದಾರೆ’
ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!
ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!
ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಗೌರಿ’, ತೆಲುಗಿನಲ್ಲಿ ‘ಮಿಸ್ಟರ್ ಬಚ್ಚನ್’ ಮತ್ತು ‘ಡಬಲ್ ಇಸ್ಮಾರ್ಟ್’ ಇನ್ನು ತಮಿಳಿನಲ್ಲಿ ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ತೆರೆಗೆ ಬಂದಿದೆ.
ಈ ಚಿತ್ರದ ಪಾತ್ರಕ್ಕಾಗಿ ವಿಕ್ರಮ್ ಆರು ತಿಂಗಳ ತಯಾರಿ ನಡೆಸಿದ್ದಾರಂತೆ ಹಾಗೂ ತುಂಬಾ ತೂಕವನ್ನು ಕಳೆದುಕೊಂಡಿದ್ದಾರಂತೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲ್ಕೈದು ಗಂಟೆಗಳ ಕಾಲ ಮೇಕಪ್ ಹಾಕಿಕೊಳ್ಳಬೇಕಿತ್ತು ಎಂದು ಚಿತ್ರೀಕರಣ ಸಮಯದ ಅನುಭವವನ್ನು ವಿಕ್ರಮ್ ಈ ಹಿಂದೆ ಹಂಚಿಕೊಂಡಿದ್ದರು.