Site icon Vistara News

The Greatest of All Time: ʻವಿಸಿಲ್‌ ಪೋಡುʼ ಸಾಂಗ್‌ ಔಟ್‌: ದಳಪತಿ ವಿಜಯ್‌, ಪ್ರಭುದೇವ ಮಾಸ್‌ ಸ್ಟೆಪ್ಸ್‌!

The Greatest of All Time song Whistle Podu

ಬೆಂಗಳೂರು: ವೆಂಕಟ್ ಪ್ರಭು ಅವರ ಮುಂಬರುವ ಚಿತ್ರ,` ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‘ (ದಿ ಗೋಟ್)ಸಿನಿಮಾದಿಂದ (The Greatest of All Time) ʻವಿಸಿಲ್‌ ಪೋಡುʼ (Whistle Podu) ಎಂಬ ಶೀರ್ಷಿಕೆಯ ಮೊದಲ ಹಾಡು ಬಿಡುಗಡೆಯಾಗಿದೆ. ವಿಜಯ್ (Thalapathy Vijay) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 4-ನಿಮಿಷ-47-ಸೆಕೆಂಡ್‌ಗಳ ಲಿರಿಕಲ್ ವಿಡಿಯೊವನ್ನು ಯುವನ್ ಸಂಯೋಜಿಸಿದ್ದಾರೆ. ವಿಜಯ್, ವೆಂಕಟ್ ಪ್ರಭು, ಯುವನ್ ಶಂಕರ್ ರಾಜ ಮತ್ತು ಪ್ರೇಮ್ಗಿ ಅಮರೇನ್ ಅವರ ಗಾಯನ ಮತ್ತು ಮದನ್ ಕರ್ಕಿ ಅವರ ಸಾಹಿತ್ಯವಿದೆ. ಈ ಹಾಡಿನಲ್ಲಿ ಪ್ರಭುದೇವ, ಪ್ರಶಾಂತ್ ಮತ್ತು ಅಜ್ಮಲ್ ಅಮೀರ್ ಕೂಡ ವಿಜಯ್‌ ಜತೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಪ್ರಭುದೇವ ಅವರ ಸಹೋದರ ರಾಜು ಸುಂದರಂ ಅವರು ʻವಿಸಿಲ್‌ ಪೋಡುʼ ಹಾಡಿನ ನೃತ್ಯ ನಿರ್ದೇಶಕರು.

ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್‌ ಅವರು ಸದ್ಯ ‘ಗ್ರೇಟೆಸ್ಟ್ ಆಫ್ ಆಲ್​ ಟೈಮ್’ ((‘Greatest Of All Time (GOAT)’) ) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿಶಾ ನಾಯಕಿ. ಈ ಸಿನಿಮಾದಲ್ಲಿ ಪ್ರಭುದೇವ ಮೊದಲಾದವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮೀನಾಕ್ಷಿ ಚೌಧರಿ, ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಸ್ನೇಹಾ ಮತ್ತು ಲೈಲಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ರಿಲೀಸ್‌ ಡೇಟ್‌ ಅನೌನ್ಸ್‌!

ಗೋಟ್’ ಅನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್‌ನಿಂದ ಕಲ್ಪತಿ ಎಸ್ ಅಘೋರಂ, ಕಲ್ಪತಿ ಎಸ್ ಗಣೇಶ್ ಮತ್ತು ಕಲ್ಪತಿ ಎಸ್ ಸುರೇಶ್ ಅವರು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆ. ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಮತ್ತು ವೆಂಕಟ್ ರಾಜೇನ್ ಅವರ ಸಂಕಲನವಿದೆ. ದಿ ಗೋಟ್ ಮೇಲೆ ನಿರೀಕ್ಷೆ ಹೆಚ್ಚಿದೆ. ಸೆಪ್ಟೆಂಬರ್ 5 ರಂದು ಗಣೇಶ ಚತುರ್ಥಿಯಂದು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಮತ್ತು ಇತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಎಂದು ವರದಿಯಾಗಿದೆ.

“ಗೋಟ್’ ನಿರ್ಮಾಣದ ಕೊನೆಯ ಹಂತದಲ್ಲಿದ್ದು, ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಜಯ್ ಕೊನೆಯದಾಗಿ ಲೋಕೇಶ್ ಕನಕರಾಜ್ ಅವರ ʻಲಿಯೋʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ವೃತ್ತಿಜೀವನಕ್ಕೆ ದಳಪತಿ ವಿಜಯ್‌ (Thalapathy Vijay) ಅವರು ವಿದಾಯ ಹೇಳಲು ಸಜ್ಜಾಗುತ್ತಿದ್ದಾರೆ. ದಳಪತಿ ವಿಜಯ್‌ ಅವರ 69ನೇ ಸಿನಿಮಾ ಘೋಷಣೆ ಆಗಲಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ತಮಿಳು ಚಿತ್ರ ನಟ ದಳಪತಿ ವಿಜಯ್‌ (Thalapathy Vijay) ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದು ಗೊತ್ತೇ ಇದೆ. ಪಕ್ಷಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನು ಈಗಾಗಲೇ ಘೋಷಿಸಿದ್ದಾರೆ ನಟ. ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ 2026ರ ರಾಜ್ಯ ಚುನಾವಣೆಯಲ್ಲಿ ವಿಜಯ್‌ ಅವರು ಕಣಕ್ಕೆ ಇಳಿಯಲಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ 2026ರಲ್ಲಿ ಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ.

Exit mobile version