Site icon Vistara News

Vijay Sethupathi: ವಿಜಯ್ ಸೇತುಪತಿ- ರುಕ್ಮಿಣಿ ವಸಂತ್ ನಟನೆಯ ತಮಿಳು ಸಿನಿಮಾ ಟೀಸರ್‌ ಔಟ್‌!  

Vijay Sethupathi Starrer Tamil Movie Teaser Released

ಬೆಂಗಳೂರು: ವಿಜಯ್ ಸೇತುಪತಿ ನಟನೆಯ ‘ಏಸ್’ (Ace) ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ರಿಲೀಸ್ ಆಗಿದೆ. ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಟನೆಯ ‘ಏಸ್’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶಗಳನ್ನು ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ಟೀಸರ್ ಅನಾವರಣಗೊಳ್ಳಿಸಲಾಗಿದೆ. ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ.

ಏಸ್ ಸಿನಿಮಾದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪಿ.ಎಸ್.ಅವಿನಾಶ್, ದಿವ್ಯಾ ಪಿಳ್ಳೈ, ಬಬ್ಲು, ರಾಜಕುಮಾರ್ ಮತ್ತು ಅನೇಕ ಪ್ರಮುಖ ನಟರು ತಾರಾಬಳಗದಲ್ಲಿದ್ದಾರೆ. ಆರ್ಮುಗ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಬಹದ್ದೂರ್ ರಾವತ್ ಛಾಯಾಗ್ರಹಣ ಮತ್ತು ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದು, ಗೋವಿಂದರಾಜ್ ಸಂಕಲನ ಒದಗಿಸಿದ್ದಾರೆ.

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾವನ್ನು, 7Cs ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಈ ವರ್ಷವೇ ರಿಲೀಸ್ ಆಗಲಿದೆ.

ಏಸ್’ ಸಿನಿಮಾದಲ್ಲಿ ತಮಿಳಿನ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅವರ ಜೊತೆಗೆ ದಿವ್ಯಾ ಪಿಳ್ಳೈ, ಪಿಎಸ್ ಅವಿನಾಶ್, ರಾಜಕುಮಾರ್, ಬಬ್ಲು ಮತ್ತು ಇನ್ನೂ ಕೆಲವು ಪ್ರಮುಖ ನಟರು ಸಿನಿಮಾದ ಭಾಗವಾಗಿ ಅಭಿನಯ ಮಾಡಿದ್ದಾರೆ.

ಸಿದ್ದರಾಮಯ್ಯ ಜೀವನಾಧರಿತ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗೀಗ ಹಲವಾರು ಬಯೋಪಿಕ್‌ ಸಿನಿಮಾಗಳು ಆಗುತ್ತಿವೆ. ಇದೀಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೀವನಾಧರಿತ (Biopic) ಸಿನಿಮಾ ಆಗುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ತೆರೆಗೆ ಬರುತ್ತಿದೆ. ಇನ್ನು ವಿಶೇಷ ಅಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವನ್ನು ತಮಿಳು ನಟ ವಿಜಯ್ ಸೇತುಪತಿ (Vijay Sethupathi) ನಿಭಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಸಿನಿಮಾಗಾಗಿ ನಟನನ್ನು ಅಪ್ರೋಚ್‌ ಮಾಡಲಾಗಿದೆ ಎಂತಲೂ ವರದಿಯಾಗಿದೆ.

ಸಿದ್ದರಾಮಯ್ಯ ಅವರು ಬಯೋಪಿಕ್‌ ಸಿನಿಮಾಗೆ ಲೀಡರ್ ರಾಮಯ್ಯ’ ಎಂದು ಹೆಸರಿಡಲಾಗಿದೆ. ಮಾ.30ರಂದು ರಾಮನವಮಿಯಂದು ಸಿದ್ದರಾಮಯ್ಯ ಮನೆಯ ಮುಂದೆಯೇ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಗಿದೆ. ಇದೀಗ ಈ ಪಾತ್ರಕ್ಕೆ ವಿಜಯ್‌ ಸೇತುಪತಿ ಅವರು ವಿಜಯ್ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂತಲೂ ವೈರಲ್‌ ಆಗಿದೆ.

Exit mobile version