ಬೆಂಗಳೂರು: ಕಳೆದ ವರ್ಷ ಬಿಡುಗಡೆಗೊಂಡಿದ್ದ ’ʻವಿಡುತಲೈʼ ’ ಚಿತ್ರವು ಯಶಸ್ಸು ಕಂಡು ಕಲಾವಿದರು ಸೇರಿದಂತೆ ತಂತ್ರಜ್ಞರುಗಳಿಗೆ ಅವಕಾಶಗಳು ಒಲಿದು ಬಂದವು. ಇದರಿಂದ ಸ್ಪೂರ್ತಿಗೊಂಡ ನಿರ್ದೇಶಕ ವೆಟ್ರಿ ಮಾರನ್ ಮತ್ತು ನಿರ್ಮಾಪಕ ಎಲ್ರಡ್ ಕುಮಾರ್ ಭಾಗ-2 ಬರುವುದಾಗಿ (Vijay Sethupathi) ಘೋಷಣೆ ಮಾಡಿದ್ದರು. ಬಹುತೇಕ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದವರು ಇದರಲ್ಲೂ ಮುಂದುವರೆದಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಫಸ್ಟ್ ಲುಕ್‌ನ ಎರಡು ಪೋಸ್ಟರ್‌ನ್ನು ಅನಾವರಣಗೊಳಿಸಲಿದ್ದಾರೆ. ಎರಡು ಲುಕ್‌ಗಳಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ವಿಜಯ್ ಸೇತುಪತಿ, ಸೂರಿ, ಮಂಜುವಾರಿಯರ್, ಅನುರಾಗ್ ಕಶ್ಯಪ್, ಕಿಶೋರ್, ಗೌತಂ ವಾಸುದೇವ್‌ಮೆನನ್, ರಾಜೀವ್ ಮೆನನ್, ಚೇತನ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಳಯರಾಜ, ಛಾಯಾಗ್ರಹಣ ಆರ್.ವೆಲ್ವರಾಜ್, ಕಲೆ ಜಾಕಿ, ಸಂಕಲನ ರಮರ್, ವಸ್ರ್ತಾಂಲಕಾರ ಉತ್ತರ ಮೆನನ್, ಸಾಹಸ ಪೀಟರ್ ಹೈನ್-ಸ್ವಂಟ್ ಶಿವ, ವಿಎಫ್‌ಎಕ್ಸ್ ಆರ್.ಹರಿಹರಸುಧನ್ ಅವರದಾಗಿದೆ.
ಆರ್‌ಎಸ್ ಇನ್‌ಫರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಲುಕ್ ಯಾವ ರೀತಿ ಇರಬಹುದೆಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಿಕ್ಕಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.
ಇದನ್ನೂ ಓದಿ: Actor Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು
ಈ ಚಿತ್ರಕ್ಕೆ ಎಲ್‌ರೆಡ್ ಕುಮಾರ್ ಬಂಡವಾಳ ಹೂಡಿದ್ದಾರೆ. ಜಿಯಾ ಮೆನನ್ ಬರೆದ ʻತುನೈವನ್ʼ ಸಣ್ಣ ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ.
ದೊಡ್ಡ ಬಜೆಟ್ ಸಿನಿಮಾ ʻವಿಡುತಲೈʼ!
ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿದೆ. ತಮಿಳಿನ ದುಬಾರಿ ಚಿತ್ರಗಳ ಪೈಕಿಗೆ ‘ವಿಡುತಲೈ’ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್ ನಿರ್ಮಾಣ ಮಾಡಲಾಗಿತ್ತು. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್ ನಿರ್ಮಾಣಕ್ಕೂ ಬಳಸಲಾಗಿದೆ ಎನ್ನಲಾಗಿತ್ತು.
ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ವೇಲ್ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್ ಜೈಂಟ್ ಮೂವೀಸ್ ವಹಿಸಿಕೊಂಡಿದೆ.