ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ (Aadujeevitham box office) ಅಭಿನಯದ ‘ಆಡು ಜೀವಿತಂ’ (Aadujeevitham Box Office) ಮೊದಲ ದಿನವೇ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿದೆ. ಆರಂಭಿಕ ಅಂದಾಜಿನ ಪ್ರಕಾರ, ಮೊದಲ ದಿನದಲ್ಲಿ ಭಾರತದಲ್ಲಿ 7.45 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಚಿತ್ರದ ಮಲಯಾಳಂ ಆವೃತ್ತಿಯು 6.50 ಕೋಟಿ ರೂ. ಗಳಿಸಿದರೆ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಆವೃತ್ತಿಗಳು ಚಿತ್ರದ ಮೊದಲ ದಿನದ ಒಟ್ಟು 1 ಕೋಟಿ ರೂ. ಗಳಿಕೆ ಕಂಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ʻಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.
ಇದನ್ನೂ ಓದಿ: Aadujeevitham Movie : ಆಡು ಜೀವಿತಂ ನಿರೀಕ್ಷೆಗೂ ಮೊದಲೇ ತೆರೆಗೆ; ರಿಲೀಸ್ ಡೇಟ್ ಫಿಕ್ಸ್
Hey @PrithviOfficial you've not just grown; you've transformed the act of acting. Over the last decade, your evolution has been unmatched, setting a benchmark for excellence. 🎭 With your latest film #Aadujeevitham is poised go for Oscars, it's clear, you're not just acting;… pic.twitter.com/VSQaucy451
— Annand Kumaar (@iamanandkr) March 29, 2024
‘ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.
🥶🔥#Prithviraj #Aadujeevitham pic.twitter.com/t7irwCXmJp
— amd.vn (@amdvn777) March 29, 2024
ಏನಿದೆ ಆಡುಜೀವಿತಂ ಸಿನಿಮಾ ಕಥೆ?
ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್ GOAT LIFE ಎಂದಿದೆ.
ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.
ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.