Aadujeevitham Box Office: ಮೊದಲ ದಿನವೇ ಒಳ್ಳೆಯ ಗಳಿಕೆ ಕಂಡ 'ʻಆಡು ಜೀವಿತಂ'! - Vistara News

ಮಾಲಿವುಡ್

Aadujeevitham Box Office: ಮೊದಲ ದಿನವೇ ಒಳ್ಳೆಯ ಗಳಿಕೆ ಕಂಡ ‘ʻಆಡು ಜೀವಿತಂ’!

Aadujeevitham Box Office: ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ‘ಆಡು ಜೀವಿತಂ’ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

VISTARANEWS.COM


on

Aadujeevitham box office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ (Aadujeevitham box office) ಅಭಿನಯದ ‘ಆಡು ಜೀವಿತಂ’ (Aadujeevitham Box Office) ಮೊದಲ ದಿನವೇ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿದೆ. ಆರಂಭಿಕ ಅಂದಾಜಿನ ಪ್ರಕಾರ, ಮೊದಲ ದಿನದಲ್ಲಿ ಭಾರತದಲ್ಲಿ 7.45 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಚಿತ್ರದ ಮಲಯಾಳಂ ಆವೃತ್ತಿಯು 6.50 ಕೋಟಿ ರೂ. ಗಳಿಸಿದರೆ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಆವೃತ್ತಿಗಳು ಚಿತ್ರದ ಮೊದಲ ದಿನದ ಒಟ್ಟು 1 ಕೋಟಿ ರೂ. ಗಳಿಕೆ ಕಂಡಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ʻಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

ಇದನ್ನೂ ಓದಿ: Aadujeevitham Movie : ಆಡು ಜೀವಿತಂ‌ ನಿರೀಕ್ಷೆಗೂ ಮೊದಲೇ ತೆರೆಗೆ; ರಿಲೀಸ್‌ ಡೇಟ್‌ ಫಿಕ್ಸ್‌

‘ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Parvathi Menon: ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು. ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

VISTARANEWS.COM


on

Parvathi Menon secretly marry prashant murali
Koo

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಮೆನನ್ (Parvathi Menon) ಸದ್ದಿಲ್ಲದೇ ಮದುವೆಯಾದರಾ ಅನ್ನುವ ಅನುಮಾನ ನಟಿಯ ಅಭಿಮಾನಿಗಳನ್ನು ಕಾಡುತ್ತಿದೆ.

ಪಾರ್ವತಿ ಇನ್ನೂ ಮದುವೆಯಾಗಿಲ್ಲ. ಈ ನಡುವೆ ಪಾರ್ವತಿ ಮೆನನ್ ಗುಟ್ಟುಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಕಾರಣ ವೈರಲ್‌ ಆಗಿರುವ ಫೋಟೊ. ಆದರೆ ಸತ್ಯ ಸಂಗತಿ ಏನೆಂದರೆ ವೈರಲ್ ಆದ ಈ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಪಾರ್ವತಿ ಮೆನನ್ ”ಉಲ್ಲೋಜುಕ್ಕು” ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಈ ಸಿನಿಮಾ ಪ್ರೋಮೊ ಈ ಮದುವೆ ಸೀನ್‌. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ವೈರಲ್ ಆಗಿವೆ.

ಪುನೀತ್ ರಾಜ್ ಕುಮಾರ್ ಅಭಿನಯದ ”ಮಿಲನ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ”ಮಳೆ ಬರಲಿ ಮಂಜೂ ಇರಲಿ’,. ”ಪೃಥ್ವಿ”, ”ಅಂದರ್ ಬಾಹರ್‌” ಚಿತ್ರಗಳಲ್ಲಿ ನಟಿಸಿದರು.

Continue Reading

ಮಾಲಿವುಡ್

All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

All We Imagine As Light : ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು.

VISTARANEWS.COM


on

All We Imagine As Light actor rejected audition call by The Kerala Story
Koo

ಬೆಂಗಳೂರು: ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಪಾಯಲ್ ಕಪಾಡಿಯಾ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು. ಕಣಿ ಕುಸರುತಿ ನೀಡಿದ ಸಂದರ್ಶನದಲ್ಲಿ, ʻʻಕಡಿಮೆ ಸಿನಿಮಾಗಳು ನನಗೆ ಆಫರ್‌ ಬಂದಿದ್ದವು. ಹಾಗೇ ನಿರ್ದೇಶಕ ಸುದೀಪ್ತೋ ಸೇನ್ ಅವರ ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ಕರೆ ಬಂದಿತ್ತು. ಅದನ್ನು ಕೂಡ ರಿಜೆಕ್ಟ್‌ ಮಾಡಿದ್ದೆʼʼಎಂದು ಹೇಳಿಕೊಂಡಿದ್ದಾರೆ.

ನಟಿ ಮಾತನಾಡಿ ʻʻನನಗೆ ಬಂದ ಸಿನಿಮಾಗಳನ್ನು ಮಾತ್ರ ನಾನು ಮಾಡಬಲ್ಲೆ. ಸಜಿನ್ ಬಾಬು ಅವರ 2019 ರ ಬಿಡುಗಡೆಯಾದ ʻಬಿರಿಯಾನಿʼ ಸಿನಿಮಾ ನಟನೆಗೆ ಕೇರಳ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದೆ. ಆದರೆ ನನಗೆ ಹೊಂದಿಕೆಯಾಗದ ಚಿತ್ರಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ ಕಳೆದ ವರ್ಷ ಬ್ಲಾಕ್‌ ಬಸ್ಟರ್‌ ಹಿಟ್‌ ಆದ ʻದಿ ಕೇರಳ ಸ್ಟೋರಿʼ ಸಿನಿಮಾ. ನಿರ್ದೇಶಕ ಸುದೀಪ್ತೋ ಸೇನ್ ಅವರು ಆಡಿಷನ್‌ಗೆ ಕರೆದಿದ್ದರು. ಆದರೆ ನಾನು ರಿಜೆಕ್ಟ್‌ ಮಾಡಿದ್ದೆʼʼ ಎಂದು ಬಹಿರಂಗಪಡಿಸಿದರು.

ಈ ಹಿಂದೆ ʻಬಿರಿಯಾನಿʼ ಸಿನಿಮಾದಲ್ಲಿ ಕಣಿ ಕುಸರುತಿ ಸಾಕಷ್ಟು ವಿವಾದಗಳನ್ನು ಎದುರಿಸಿದ್ದರು. ಈ ಬಗ್ಗೆಯೂ ನಟಿ ಹೇಳಿಕೊಂಡಿದ್ದಾರೆ. ʻʻಬಿರಿಯಾನಿ ಸಿನಿಮಾ ವೇಳೆ ನಾನು ಆ ಸ್ಕ್ರಿಪ್ಟ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ನಾನು ನಿರ್ದೇಶಕ ಸಜಿನ್‌ಗೆ ಹೇಳಿದ್ದೆ. ಸಜಿನ್ ಹಿಂದುಳಿದ ಮುಸ್ಲಿಂ ಸಮುದಾಯದಿಂದ ಬಂದವರು. ಅವರು ಅವರ ಸ್ಥಾನದಲ್ಲಿಯೇ ಯೋಚಿಸುತ್ತಿದ್ದರು. ಅವರ ರಾಜಕೀಯವನ್ನು ಮಾತ್ರ ಮಾತನಾಡುತ್ತಿದ್ದರುʼʼಎಂದರು.

ಇದನ್ನೂ ಓದಿ: Kendall Jenner: ತಿಂಗಳಲ್ಲಿ ಎರಡು ಬಾರಿ ಟಾಪ್‌ಲೆಸ್‌ ಆದ ಹಾಲಿವುಡ್‌ ಬ್ಯೂಟಿ ಕೆಂಡಲ್‌ ಜೆನ್ನರ್‌!

ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ( Grand Prix At Cannes) ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .77ನೇ ಆವೃತ್ತಿಯ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿತ್ತು. ಸಿನಿಮಾ ಕಾನ್​ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿತ್ತು.

ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ. ಕನಿ ಕುಸರುತಿ ಮುಂದೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನಾಗೇಂದ್ರ ಅವರ ಮಲಯಾಳಂ ಸಿರೀಸ್‌ ಹನಿಮೂನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

South Cinema

 L2 Empuraan: ಮೋಹನ್‌ಲಾಲ್ ಬರ್ತ್‌ಡೇ; L2E-ಎಂಪುರಾನ್‌ ಲುಕ್‌ ಔಟ್‌!

 L2 Empuraan: ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು.

VISTARANEWS.COM


on

L2 Empuraan first look poster shared by Prithviraj Sukumaran
Koo

ಬೆಂಗಳೂರು: ಇಂದು ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್ (Mohanlal as Khureshi Abraam ) ಅವರ 64ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಟ ಪೃಥ್ವಿರಾಜ್ ಸುಕುಮಾರನ್ ʻL2 ಎಂಪುರಾನ್‌ʼ (L2 Empuraan) ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಅವರ ನಿರ್ದೇಶನದಲ್ಲಿ, ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ 2019ರ ಬ್ಲಾಕ್‌ಬಸ್ಟರ್ ಚಲನಚಿತ್ರ ʻಲೂಸಿಫರ್‌ʼನ ಮುಂದುವರಿದ ಭಾಗವಾಗಿದೆ.

ʻL2 ಎಂಪುರಾನ್‌ʼಗಾಗಿ ಮೋಹನ್‌ಲಾಲ್‌ನ ಜಾಕೆಟ್ ಮತ್ತು ಪ್ಯಾಂಟ್‌ ಧರಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ನಡುವೆ ಖಡಕ್‌ ಆಗಿ ನಡೆದುಕೊಂಡು ಹೋಗುತ್ತಿರುವ ಪೋಸ್ಟರ್‌ ಇದು. ಲೂಸಿಫರ್ ಪೃಥ್ವಿರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಅದಾದ ಬಳಿಕ ʻಬ್ರೋ ಡ್ಯಾಡಿʼ ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಮತ್ತೆ ಈ ಜೋಡಿ L2E-ಎಂಪುರಾನ್‌ ಮೂಲಕ ಒಂದಾಗಿದೆ.

ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು. ಮೋಹನ್‌ಲಾಲ್ ಅವರಲ್ಲದೆ, ಚಿತ್ರದಲ್ಲಿ ವಿವೇಕ್ ಒಬೆರಾಯ್, ಮಂಜು ವಾರಿಯರ್, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್, ಸಾನಿಯಾ ಐಯಪ್ಪನ್, ಸಾಯಿ ಕುಮಾರ್, ಜಾನ್ ವಿಜಯ್, ಸಚಿನ್ ಖೇಡೇಕರ್, ಬೈಜು ಸಂತೋಷ್, ಕಲಾಭವನ್ ಶಾಜೋನ್, ಫಾಜಿಲ್, ಸುರೇಶ್ ಚಂದ್ರ ಮೆನನ್ ಮತ್ತು ನೈಲಾ ಉಷಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೋಹನ್ ಲಾಲ್ ಕೊನೆಯದಾಗಿ ಕಾಣಿಸಿಕೊಂಡದ್ದು ಫ್ಯಾಂಟಸಿ ನಾಟಕ ಮಲೈಕೊಟ್ಟೈ ವಾಲಿಬನ್ (2024), ಇದನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ.

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಮಾಲಿವುಡ್

Mohan Lal: ಅಣ್ಣಾವ್ರ ಹಾಡನ್ನು ಎಂಜಾಯ್‌ ಮಾಡಿದ ಮೋಹನ್ ಲಾಲ್; ವಿಡಿಯೊ ವೈರಲ್‌!

Mohan Lal: ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್.

VISTARANEWS.COM


on

Mohan Lal watching dr rajkumars super hit song
Koo

ಬೆಂಗಳೂರು: ಕನ್ನಡದ ಕುಲಪುತ್ರ ದಿವಂಗತ ಡಾ. ರಾಜ್ ಕುಮಾರ್ (Dr. Rajkumar) ಎಂದರೆ ಅದು ಕೇವಲ ವ್ಯಕ್ತಿಯಲ್ಲ. ಅವರು ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಸಾರ್ವಭೌಮ ಬಣ್ಣ ಹಚ್ಚಿದ್ದರು. ರಾಜ್‌ಕುಮಾರ್‌ ಅವರನ್ನು ಇಷ್ಟ ಪಡದವರೇ ಇಲ್ಲ. ಇನ್ನು ಮಾಲಿವುಡ್ ನಟ ಮೋಹನ್ ಲಾಲ್‌ಗೂ (Mohan Lal) ರಾಜ್‌ ಅಂದರೆ ಪ್ರೀತಿ. ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. 50 ವರ್ಷಗಳ ಹಿಂದೆ ತೆರೆಕಂಡಿದ್ದ ‘ಎರಡು ಕನಸು’ ಚಿತ್ರಕ್ಕೆ ದೊರೆ- ಭಗವಾನ್ ಆಕ್ಷನ್ ಕಟ್ ಹೇಳಿದ್ದರು. ವಾಣಿ ಅವರು ಬರೆದ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬಂದಿತ್ತು.30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ‘ಎರಡು ಕನಸು’ ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು. ಇದೀಗ ಮೋಹನ್‌ಲಾಲ್‌ ತಮ್ಮ ಮೊಬೈಲ್ ನಲ್ಲಿ ರಾಜ್ ಕುಮಾರ್ ಹಾಡು ಕೇಳುತ್ತ ಅದೇ ರೀತಿ ಹಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Actor Mohanlal: 56ನೇ ಬಾರಿಗೆ ಮೋಹನ್ ಲಾಲ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಈ ಫೇಮಸ್‌ ನಟಿ!

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading
Advertisement
IND vs PAK
ಕ್ರಿಕೆಟ್3 mins ago

IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

Bangalore Rain
ಪ್ರಮುಖ ಸುದ್ದಿ11 mins ago

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Stock Market
ವಾಣಿಜ್ಯ22 mins ago

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Dharwad Lok Sabha Constituency
ಧಾರವಾಡ30 mins ago

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Anant Ambani Radhika Merchant Pre Wedding
ಫ್ಯಾಷನ್44 mins ago

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

Vijaypur Lok Sabha Constituency
ವಿಜಯಪುರ49 mins ago

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

IND vs PAK
ಕ್ರಿಕೆಟ್1 hour ago

IND vs PAK: ಸ್ನೈಪರ್ ಗನ್​ ಕಣ್ಗಾವಲಿನಲ್ಲಿ ಭಾರತ-ಪಾಕ್ ಟಿ20​ ವಿಶ್ವಕಪ್​ ಪಂದ್ಯ

Lok Sabha Election Result 2024
ದೇಶ1 hour ago

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Maldives
ವಿದೇಶ1 hour ago

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Cow including lineman dies of electric shock
ಉಡುಪಿ2 hours ago

Electric shock : ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌