ಬೆಂಗಳೂರು: ತಮಿಳು ಹಾಗೂ ಮಲಯಾಳಂನ ಜನಪ್ರಿಯ ನಟಿ ಅರುಂಧತಿ ನಾಯರ್ (Arundhathi Nair) ಬೈಕ್ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಯಾಗಿತ್ತು. ಮಾರ್ಚ್ 14ರಂದು ನಟಿ ಅಪಘಾತಕ್ಕೀಡಾಗಿದ್ದರು. ಸಹೋದರಿ ಆರತಿ ಈಗ ಸೋಮವಾರ (ಮಾರ್ಚ್ 18) ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ʻʻಈ ಘಟನೆಯಲ್ಲಿ ನಟಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿರುವ ಆಸ್ಪತ್ರೆಗೆ (Arundhathi Nair met with a bike accident) ದಾಖಲಾಗಿದ್ದು, ಅರುಂಧತಿ ಸ್ಥಿತಿ ಗಂಭೀರವಾಗಿದೆ. ಸದ್ಯ ಅರುಂಧತಿ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ “ತಮಿಳುನಾಡಿನ ಪತ್ರಿಕೆಗಳು ಮತ್ತು ದೂರದರ್ಶನ ಚಾನೆಲ್‌ಗಳಲ್ಲಿ ವರದಿಯಾದ ಸುದ್ದಿಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ. ಮೂರು ದಿನಗಳ ಹಿಂದೆ ನನ್ನ ಸಹೋದರಿ ಅರುಂಧತಿ ನಾಯರ್ ಅಪಘಾತಕ್ಕೀಡಾಗಿರುವುದು ನಿಜ. ತೀವ್ರವಾಗಿ ಗಾಯಗೊಂಡಿದ್ದು, ತಿರುವನಂತಪುರಂನ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವಳ ಚೇತರಿಕೆಗೆ ನಿಮ್ಮ ಬೆಂಬಲ ಬೇಕು.”ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ನಟಿಯ ಸ್ನೇಹಿತೆ ಗೋಪಿಕಾ ಅನಿಲ್ ಅವರು ಪೋಸ್ಟ್‌ನಲ್ಲಿ ʻʻನಾವು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಆದರೆ ಇದೀಗ ಆಕೆಯ ಚಿಕಿತ್ಸೆಗೆ ಇದು ಸಾಕಾಗುವುದಿಲ್ಲ. ಆಕೆಯ ಕುಟುಂಬಕ್ಕೆ ತುಂಬ ಸಹಕಾರಿಯಾಗಲು ನೀವೂ ಸಹಾಯ ಮಾಡಿದರೆ, ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ’ ಎಂದು ಇನ್‌ಸ್ಟಾ ಪೋಸ್ಟ್‌ನಲ್ಲಿ ಬ್ಯಾಂಕ್ ಮತ್ತು ಫೋನ್ ಸಂಖ್ಯೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Actor Dhanush: ರಾಜ್‌ಕುಮಾರ್ ಪೆರಿಯಸಾಮಿ ಹೊಸ ಸಿನಿಮಾಗೆ ಈ ಸೂಪರ್‌ಸ್ಟಾರ್ ನಾಯಕ?
ಕೋವಲಂ ಬೈಪಾಸ್‌ನಲ್ಲಿ ಅಪಘಾತ ಸಂಭವಿಸಿದ್ದು, ಅರುಂಧತಿ ಅವರ ತಲೆಗೆ ಗಾಯವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ನಟಿ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಯಾರು ಈ ನಟಿ?
ಅರುಂಧತಿ 2014ರಲ್ಲಿ ತಮಿಳು ಚಿತ್ರ ʻಪೊಂಗಿ ಎಜು ಮನೋಹರʼ ( Pongi Ezhu Manohara) ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2018ರಲ್ಲಿ ಮಲಯಾಳಂಗೆ ʻಒಟ್ಟಕೋರು ಕಾಮುಕನ್ʼ (Ottakoru Kaamukan) ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಕೊನೆಯದಾಗಿ 2023ರ ಚಲನಚಿತ್ರ ಆಯಿರಂ ಪೊರ್ಕಾಸುಕಲ್’ ನಲ್ಲಿ ( Aayiram Porkaasukal) ಕಾಣಿಸಿಕೊಂಡರು. 2021 ರಲ್ಲಿ ಮಲಯಾಳಂ ವೆಬ್-ಸರಣಿ ಪದ್ಮಿನಿ ಮತ್ತು ತಮಿಳು ಶೋ `ಡೋಂಟ್ ಥಿಂಕ್’ನಲ್ಲಿ ನಟಿಸಿದ್ದರು.