Site icon Vistara News

Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌!

Thalapathy Vijay

ಬೆಂಗಳೂರು: ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಚಿತ್ರ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್)’ (‘Greatest Of All Time (GOAT)’) ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಬಿಡುಗಡೆಗೂ ಮುನ್ನ, ಅದರ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ನಟ ಕೇರಳಕ್ಕೆ ಭೇಟಿ ನೀಡಿದ್ದಾರೆ. 14 ವರ್ಷಗಳ ಸುದೀರ್ಘ ಅವಧಿಯ ನಂತರ ಅವರು ಕೇರಳ ರಾಜ್ಯಕ್ಕೆ ಮರಳಿದ್ದರು. ಸೋಮವಾರ (ಮಾ.18), ನೂರಾರು ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಇದೀಗ ಈ ವಿಡಿಯೊ ವೈರಲ್‌ ಆಗಿದೆ.

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾ ಇದು ಎನ್ನಲಾಗುತ್ತಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹಲವಾರು ವೀಡಿಯೊಗಳಲ್ಲಿ, ವಿಜಯ್ ಅವರ ಅಭಿಮಾನಿಗಳು ನಟನಿಗಾಗಿ ಕಾದಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮಹತ್ವದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲ, ‘ವಿಜಯ್ ಸ್ಟಾರ್ಮ್ ಹಿಟ್ಸ್ ಕೇರಳ’ ಮತ್ತು ‘ಗೋಟ್’ ಎಂಬ ಹ್ಯಾಶ್‌ಟ್ಯಾಗ್‌ಗಳು ಎಕ್ಸ್‌ನಲ್ಲಿ ಟ್ರೆಂಡ್‌ ಆಗಿವೆ.

ನಟ ಕೇರಳದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹಿಂದಿನ ಚಿತ್ರ, ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ‘ಲಿಯೋ’, ಕೇರಳದ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು. ಥಿಯೇಟರ್ ಗಳಿಕೆಯಲ್ಲಿ 60 ಕೋಟಿ ರೂ. ಗಳಿಸಿತು.

ಇದನ್ನೂ ಓದಿ: Actor Rajinikanth: ರಾಜಕೀಯಕ್ಕೆ ಧುಮುಕಿದ ನಟ ದಳಪತಿ ವಿಜಯ್‌; ರಜನಿಕಾಂತ್‌ ರಿಯಾಕ್ಷನ್‌ ಏನು?

‘GOAT’ ಸಿನಿಮಾದಲ್ಲಿ ವಿಜಯ್ ಜೊತೆ ಪ್ರಭುದೇವ, ಪ್ರಶಾಂತ್, ವಿನಯ್, ಮೀನಾಕ್ಷಿ ಚೌಧರಿ ಮೊದಲಾದವರು ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತ್ರಿಷಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗೋಟ್’ ಅನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್‌ನಿಂದ ಕಲ್ಪತಿ ಎಸ್ ಅಘೋರಂ, ಕಲ್ಪತಿ ಎಸ್ ಗಣೇಶ್ ಮತ್ತು ಕಲ್ಪತಿ ಎಸ್ ಸುರೇಶ್ ಅವರು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆ. ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಮತ್ತು ವೆಂಕಟ್ ರಾಜೇನ್ ಅವರ ಸಂಕಲನವಿದೆ.

‘ಗೋಟ್’ ನಿರ್ಮಾಣದ ಕೊನೆಯ ಹಂತದಲ್ಲಿದ್ದು, ಚೆನ್ನೈ, ಥೈಲ್ಯಾಂಡ್, ಹೈದರಾಬಾದ್ ಮತ್ತು ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

Exit mobile version