Site icon Vistara News

Lal Salaam Movie: ಪ್ರೇಕ್ಷಕರೇ ಇಲ್ಲದೇ ಪ್ರದರ್ಶನ ರದ್ದು; ಗೆಲ್ಲಲ್ಲಿಲ್ಲ ರಜನಿಕಾಂತ್‌ ‘ಲಾಲ್​ ಸಲಾಂ’!

Rajinikanth Starrer Lal Salaam Movie Shows Reportedly Cancelled

ಬೆಂಗಳೂರು: ರಜನಿಕಾಂತ್, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ʻಲಾಲ್ ಸಲಾಂʼ (Lal Salaam Movie) ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಲಾಲ್ ಸಲಾಂ ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿಲ್ಲ. ಪ್ರೇಕ್ಷಕರ ಕೊರತೆಯ ಕಾರಣಕ್ಕೆ ಅನೇಕ ಕಡೆ ಚಿತ್ರದ ಪ್ರದರ್ಶನವನ್ನ ರದ್ದು ಮಾಡಲಾಗಿದೆ. ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆಯಿಂದಾಗಿ ‘ಲಾಲ್​ ಸಲಾಂ’ ಸಿನಿಮಾದ ಶೋ ಕ್ಯಾನ್ಸಲ್​ ಮಾಡಲಾಗಿದೆ ಎಂದು ವರದಿ ಆಗಿದೆ. ರಜನಿಕಾಂತ್​ ನಟನೆಯ ಸಿನಿಮಾಗೆ ಈ ರೀತಿ ಆಗಿದೆ ಎಂದರೆ ನಂಬಲಾಗುತ್ತಿಲ್ಲ ಎನ್ನುತ್ತಿದ್ದಾರೆ ಪ್ರೇಕ್ಷಕರು.

ತಮಿಳುನಾಡಿನಲ್ಲಿ ಉತ್ತಮವಾದ ಆರಂಭ ಪಡೆದ ಚಿತ್ರಕ್ಕೆ, ಆಂಧ್ರದಲ್ಲಿ ಹಿನ್ನಡೆಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅನೇಕ ಕಡೆ ʻಲಾಲ್ ಸಲಾಂʼ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ರದ್ದು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಹೈದ್ರಾಬಾದ್ ನ ಅನೇಕ ಕಡೆ ʻಲಾಲ್ ಸಲಾಂʼ ಚಿತ್ರದ ತೆಲುಗು ಪ್ರದರ್ಶನ ರದ್ದಾಗಿವೆ. ಮುಂಗಡ ಟಿಕೆಟ್ ಖರೀದಿಸಿದ್ದ ಬೆರಳಣಿಕೆಯಷ್ಟು ಜನಕ್ಕೆ ಹಣವನ್ನೂ ಮರುಪಾವತಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ಸೂಪರ್‌ಸ್ಟಾರ್ ರಜಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೇವಲ 10-15 ನಿಮಿಷದ ಪಾತ್ರ ಅಲ್ಲ. ಹೆಚ್ಚು ಕಡಿಮೆ 40 ನಿಮಿಷಗಳ ಅವಧಿಯ ಪಾತ್ರದಲ್ಲಿ ರಜನಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

ತೆಲುಗಿಗೆ ಡಬ್​ ಆದ ‘ಜೈಲರ್​’ ಸಿನಿಮಾಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಒಟ್ಟು 47 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಅದೇ ರೀತಿ ಈ ಸಿನಿಮಾಗೂ ಇಂಥಹದ್ದೇ ರಿಯಾಕ್ಷನ್‌ ಸಿಗಬಹುದು ಎಂದು ಊಹಿಸಲಾಗಿತ್ತು. ರಜನಿ ಜತೆಗೆ ಐಶ್ವರ್ಯಾ ರಜನಿಕಾಂತ್‌ ಅವರಿಗೂ ಮುಖಭಂಗ ಆಗಿದೆ.

ಇದನ್ನೂ ಓದಿ: Lal Salaam Movie: ಮಾಜಿ ಪತ್ನಿ ನಿರ್ದೇಶನದ ಸಿನಿಮಾ ಬಿಡುಗಡೆ; ರಜನಿಗೆ ವಿಶ್‌ ಮಾಡಿದ ಧನುಷ್‌!

ಸಿನಿ ಇಂಡಸ್ಟ್ರಿಯ ಮತ್ತೊಂದು ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿನ ಪ್ರಕಾರ, ‘ಲಾಲ್ ಸಲಾಂ’ ಭಾರತದಾದ್ಯಂತ ಸರಿಸುಮಾರು 4 ಕೋಟಿ ರೂ. ಗಳಿಸಲಿದೆಯಂತೆ. ಲಾಲ್ ಸಲಾಮ್ ತನ್ನ ಮೊದಲ ದಿನಕ್ಕೆ ಒಟ್ಟಾರೆ ಶೇ.24.25ರಷ್ಟು ಆಕ್ಯುಪೆನ್ಸಿ ಹೊಂದಿತ್ತು.

ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಯ ಮೂಲಕ ನಿರ್ಮಾಣ ಆಗಿರುವ ‘ಲಾಲ್​ ಸಲಾಂ’ ಸಿನಿಮಾಗೆ ರಜನಿಕಾಂತ್​ ಅವರ ಮಗಳು ಐಶ್ವರ್ಯಾ ರಜನಿಕಾಂತ್​ ನಿರ್ದೇಶನ ಮಾಡಿದ್ದಾರೆ.

‘ಲಾಲ್ ಸಲಾಂ’ ಸಿನಿಮಾಗೆ ಐಶ್ವರ್ಯಾ ನಿರ್ದೇಶನವಿದೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯ ಬಾಲಕೃಷ್ಣನ್, ವಿವೇಕ್ ಪ್ರಸನ್ನ, ಮತ್ತು ಕೆಎಸ್ ರವಿಕುಮಾರ್ ತಾರಾ ಬಳಗ.ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಂಡಿದ್ದಾರೆ.

Exit mobile version