Site icon Vistara News

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Tamannaah Bhatia Summoned in Illegal IPL Streaming Case

ಮುಂಬೈ: ಫೇರ್‌ಪ್ಲೇ ಆ್ಯಪ್‌ನಲ್ಲಿ ಅಕ್ರಮ ಐಪಿಎಲ್ ಪಂದ್ಯಗಳ ಸ್ಟ್ರೀಮಿಂಗ್ (Illegal IPL Streaming Case) ಪ್ರಕರಣದಲ್ಲಿ ಟಾಲಿವುಡ್‌ ನಟಿ ತಮನ್ನಾ ಭಾಟಿಯಾ (Tamannaah Bhatia) ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಮಹಾರಾಷ್ಟ್ರ ಸೈಬರ್ ಸೆಲ್ (Maharashtra Cyber Cell ) ವಿಚಾರಣೆಗೆ ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಹೆಸರು ಕೂಡ ಈ ಮುಂಚೆ ಕೇಳಿಬಂದಿತ್ತು.

ಫೇರ್‌ಪ್ಲೇ ಆ್ಯಪ್‌ನಲ್ಲಿ (Fairplay App) ಐಪಿಎಲ್ 2023ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಯಾಕಾಮ್‌ಗೆ ಕೋಟ್ಯಂತರ ರೂ. ನಷ್ಟ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್‌ ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್‌ಗೆ ಹಾಜರಾಗುವಂತೆ ನಟಿಗೆ ತಿಳಿಸಲಾಗಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು.

ಇದನ್ನೂ ಓದಿ: Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಬೆಟ್ಟಿಂಗ್‌ ಅಪ್ಲಿಕೇಶನ್‌ ಆಗಿದೆ. ವಯಾಕಾಮ್‌ 18 ಐಪಿಎಲ್‌ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಬೆಟ್ಟಿಂಗ್ ಅಪ್ಲಿಕೇಶನ್ ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಅಕ್ರಮವಾಗಿ ಪಂದ್ಯಗಳನ್ನು ಸ್ಟ್ರೀಮ್ ಮಾಡುತ್ತಿದೆ ಎಂದು ವಯಾಕಾಮ್‌ ಎಫ್‌ಐಆರ್‌ ದಾಖಲಿಸಿತ್ತು . ವಯಾಕಾಮ್‌ 18ಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ಬಾದ್‌ಶಾ, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ತಮನ್ನಾ ಸೇರಿದಂತೆ ಹಲವಾರು ತಾರೆಯರನ್ನು ವಿಚಾರಣೆಗೆ ಕರೆಯಲಾಯಿದೆ ಎಂದು ವರದಿಯಾಗಿದೆ. ಡಿಸೆಂಬರ್ 2023 ರಲ್ಲಿ, ಬೆಟ್ಟಿಂಗ್ ಅಪ್ಲಿಕೇಶನ್‌ನ ಉದ್ಯೋಗಿಯನ್ನು ಬಂಧಿಸಲಾಯಿತ್ತು.

Exit mobile version