Site icon Vistara News

Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್‌ ನಟರ ಚಿತ್ರಗಳಿವು

star actors who won this 2023 year

ಬೆಂಗಳೂರು: 2023ರಲ್ಲಿ (Year Ender 2023) ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. 2022ರಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ನಮ್ಮ ಚಂದನವನದ ಕೊಡುಗೆ ಅಪಾರವಾಗಿದೆ. ಅದಕ್ಕೆ ಮುಖ್ಯ ಕಾರಣ ಕೆಜಿಎಫ್ ಚಾಪ್ಟರ್ 2 ಆಗಿದೆ. ದಕ್ಷಿಣ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕೆಜಿಎಫ್‌ ಚಾಪ್ಟರ್ 2 ಕೊಡುಗೆಯೇ ಸುಮಾರು ಶೇಕಡ 50ರಷ್ಟಿದೆ. ಆದರೆ ಈ ವರ್ಷ ದಕ್ಷಿಣ ಭಾರತದ ಕೊಡುಗೆ ಶೇಕಡ 44ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. 2023ರಲ್ಲಿ ಹಿಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.

ಜವಾನ್‌

2023ರಲ್ಲಿ, ಶಾರುಖ್ ಖಾನ್ “ಪಠಾಣ್‌” ಮತ್ತು “ಜವಾನ್” ಎರಡು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆದವು. ನಿರ್ದೇಶಕ ಅಟ್ಲೀ ಅವರು ಕಿಂಗ್ ಖಾನ್ ಅವರನ್ನು ಮಾಸ್ ಅವತಾರದಲ್ಲಿ ಜವಾನ್‌ ಮೂಲಕ ಪ್ರಸ್ತುತಪಡಿಸಿದ್ದರಿಂದ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಚಿತ್ರವು ವಿಶ್ವಾದ್ಯಂತ ಅಂದಾಜು 1150 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಹಿಂದಿ ಆವೃತ್ತಿಯು 590 ಕೋಟಿ ರೂ.ಗಳಷ್ಟು ನಿವ್ವಳ ಆದಾಯ ಸಂಗ್ರಹಿಸಿತು. ಸೆಪ್ಟಂಬರ್‌ 7ರಂದು ಬಿಡುಗಡೆಯಾದ ʼಜವಾನ್‌ʼ ಚಿತ್ರವನ್ನು ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ದ ಹೋರಾಡುವ ಪಾತ್ರದಲ್ಲಿ ಕಿಂಗ್‌ ಖಾನ್‌ ಕಾಣಿಸಿಕೊಂಡಿದ್ದು, ದ್ವಿಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಪಠಾಣ್

ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್‌ʼ ಸಿನಿಮಾ (Pathaan Movie) ವಿಶ್ವಾದ್ಯಂತ 1000 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿತ್ತು. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯಶ್​ ಚೋಪ್ರಾ ಅವರ ಯಶ್​ ರಾಜ್​ ಫಿಲ್ಮ್ಸ್​ ಪ್ರೊಡಕ್ಷನ್​ ಹೌಸ್ ಪ್ರಕಾರ ಪಠಾಣ್​ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್​ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.

ಇದನ್ನೂ ಓದಿ: Year Ender 2023: ಈ ವರ್ಷ ಹೀನಾಯವಾಗಿ ಸೋತ ಸ್ಟಾರ್‌ ನಟರ ಚಿತ್ರಗಳಿವು!

ಅನಿಮಲ್‌

ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ (Animal Box Office Collection) ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಕಲೆಕ್ಷನ್‌ನಲ್ಲಿ ದಿನದಿಂದ ದಿನಕ್ಕೆ ಮುನ್ನುಗ್ಗುತ್ತಲೇ ಇದೆ. ಭಾರತದಲ್ಲಿ 500 ಕೋಟಿ ರೂ. ಒಟ್ಟು ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಹಿಂದಿ ಪ್ರದರ್ಶನ ಶೇ. 19.86 ಆಕ್ಯುಪೆನ್ಸಿ ಇದ್ದರೆ, ತಮಿಳು ಪ್ರದರ್ಶನಗಳಿಗೆ ಇದೇ ರೀತಿಯ ಪ್ರತಿಕ್ರಿಯೆಯನ್ನು ಹೊಂದಿದೆ. ತೆಲುಗು ಪ್ರದರ್ಶನಗಳ ಆಕ್ಯುಪೆನ್ಸಿ ಶೇಕಡಾ 20.95 ರಷ್ಟಿತ್ತು ಎನ್ನಲಾಗಿದೆ.ರಣಬೀರ್ ಜತೆಗೆ ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.

‘ಗದರ್ 2’

ಸನ್ನಿ ಡಿಯೋಲ್ (Sunny Deol) ಅಭಿನಯದ ‘ಗದರ್ 2’ ಚಿತ್ರ (Gadar 2 Movie) ಬಾಕ್ಸ್ ಆಫೀಸ್ ನಲ್ಲಿ  500 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿತ್ತು. 2001 ರ ವಾರ್​ ಡ್ರಾಮಾದ ಮುಂದುವರಿದ ಎರಡನೇ ಭಾಗವೇ ಈ ಸಿನಿಮಾ. ಅನಿಲ್ ಶರ್ಮಾ ( Anil Sharma) ನಿರ್ದೇಶನದ ಈ ಚಿತ್ರವು ಈಗ ಕೆಜಿಎಫ್ 2 ಹಿಂದಿಯ ಕಲೆಕ್ಷನ್ (435 ಕೋಟಿ ರೂ.) ಅನ್ನು ಹಿಂದಿಕ್ಕಿ ಮೂರನೇ ಅತಿ ಗಳಿಕೆಯ ಚಿತ್ರ (ಹಿಂದಿ ಭಾಷೆ) ಎನಿಸಿಕೊಂಡಿತ್ತು.

ಲಿಯೋ

ಅಕ್ಟೋಬರ್ 19ರಂದು ಬಿಡುಗಡೆಯಾದ ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಡೀ ಪ್ರಪಂಚದ ಲೆಕ್ಕಾಚಾರ ನೋಡಿದರೆ ಲಿಯೋ ಮೊದಲ ದಿನವೇ 140 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.ಮೊದಲ ದಿನ ಲಿಯೋ ಭಾರತದಲ್ಲಿ 64.8 ಕೋಟಿ ಗಳಿಸಿತ್ತು. ತಮಿಳು ಭಾಷೆಯಲ್ಲಿ 48.96 ಕೋಟಿ ರೂ, ತೆಲುಗಿನಲ್ಲಿ 12.9 ಕೋಟಿ ರೂ.; ಹಿಂದಿಯಲ್ಲಿ 2.8 ಕೋಟಿ ರೂ; ಕನ್ನಡ: 1.4 ಕೋಟಿ ರೂ ಸಂಗ್ರಹಿಸಿದೆ.ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದರು.

ಜೈಲರ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅಭಿನಯದ ಜೈಲರ್‌ ಸಿನಿಮಾವು ಭಾರತ ಸೇರಿ ಜಗತ್ತಿನಾದ್ಯಂತ ಹಿಟ್‌ ಆಗಿದೆ. ಗಳಿಕೆಯಲ್ಲೂ ಜೈಲರ್‌ ಸಿನಿಮಾ ಹಲವು ದಾಖಲೆ ಮಾಡಿದೆ. ಸಿನಿಮಾ ಹಿಟ್‌ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್‌ ಅವರು ರಜನಿಕಾಂತ್‌ ಅವರಿಗೆ ಸಂಭಾವನೆ ಜತೆಗೆ ಲಾಭದ ಭಾಗವಾಗಿ 100 ಕೋಟಿ ರೂಪಾಯಿಯನ್ನು ಕೂಡ ಕೊಟ್ಟಿದ್ದಾರೆ. ಜೈಲರ್‌ ಸಿನಿಮಾ ಜಗತ್ತಿನಾದ್ಯಂತ ಹಿಟ್‌ ಆಗಿ, 500 ಕೋಟಿ ರೂ.ಗಿಂತ ಹೆಚ್ಚು ಹಣ ಗಳಿಸಿದೆ. ಭಾರತದಲ್ಲಿಯೇ 300 ಕೋಟಿ ರೂ.ಗಿಂತ ಹೆಚ್ಚು ಹಣ ಬಾಚಿದೆ.

ʼಟೈಗರ್‌ 3ʼ

ಮೊದಲ ದಿನ ಸಲ್ಮಾನ್‌ ಖಾನ್‌ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಓಪನಿಂಗ್‌ ಪಡೆದುಕೊಂಡಿದ್ದ ʼಟೈಗರ್‌ 3ʼ ಚಿತ್ರ ನವೆಂಬರ್‌ 13ರಂದು ಅಂದರೆ ಎರಡನೇ ದಿನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು 57.50 ಕೋಟಿ ರೂ. ಸಂಗ್ರಹಿಸಿತ್ತು. ಆ ಮೂಲಕ ಎರಡನೇ ದಿನಗಳಲ್ಲಿ ಸುಮಾರು 102 ಕೋಟಿ ರೂ. ಗಳಿಸಿದಂತಾಗಿತ್ತು. ಮನೀಷ್‌ ಶರ್ಮಾ ನಿರ್ದೇಶನದ ಈ ಆ್ಯಕ್ಷನ್​ ಥ್ರಿಲ್ಲರ್‌ನಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್‌ ಕಾಣಿಸಿಕೊಂಡಿದ್ದು, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 500 ಕೋಟಿ ರೂ. ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದೆ.

ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ

ಕರಣ್‌ ಜೋಹರ್‌ ನಿರ್ದೇಶನದ `ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ‘(Rocky aur Rani Kii Prem Kahaani) ಸಿನಿಮಾ ಮೊದಲ ವಾರಾಂತ್ಯದ ಅಂತ್ಯಕ್ಕೆ ಒಟ್ಟಾರೆಯಾಗಿ 46 ಕೋಟಿ ರೂ. ಗಳಿಸಿಕೊಂಡಿತ್ತುರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಇದರಲ್ಲಿ ಟೋಟಾ ರಾಯ್ ಚೌಧರಿ, ಚೂರ್ನಿ ಗಂಗೂಲಿ ಮತ್ತು ಅಮೀರ್ ಬಶೀರ್ ಕೂಡ ಬಣ್ಣ ಹಚ್ಚಿದ್ದಾರೆ.

ದಿ ಕೇರಳ ಸ್ಟೋರಿ

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿತ್ತು.ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು.

2018

ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್​ ಬಸ್ಟರ್​ ಸಿನಿಮಾ ಎಂಬ ಖ್ಯಾತಿಗೆ ‘2018’ ಒಳಗಾಗಿದೆ. ಟೊವಿನೋ ಥಾಮಸ್​ ಜತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ದಸರಾ

ನ್ಯಾಚುರಲ್ ಸ್ಟಾರ್ ನಾನಿ (Actor Nani) ಹಾಗೂ ಕೀರ್ತಿ ಸುರೇಶ್ ನಟನೆಯ ʻದಸರಾʼ ಸಿನಿಮಾ ಕಲೆಕ್ಷನ್‌ ಭಾರಿ ಮಾಡಿತ್ತು. ನಾನಿ ರಗಡ್ ಲುಕ್ ನಲ್ಲಿ ಜಾದು ಮಾಡಿದ್ದಾರೆ. ಕೀರ್ತಿ ಡಿಗ್ಲಾಮರ್ ಲುಕ್ ನಲ್ಲಿ ಬಲು ಸೊಗಸಾಗಿ ನಟಿಸಿದ್ದು,. ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾಕರ್ ಚೆರಕೂರಿ ನಿರ್ಮಿಸಿರುವ ದಸರಾಗೆ ಸಂತೋಷ್ ನಾರಾಯಣ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: Thalaivar 170 Title: ʼತಲೈವರ್ 170ʼ ಸಿನಿಮಾ ಟೈಟಲ್‌ ರಿವೀಲ್; ಮತ್ತೊಮ್ಮೆ ಪೊಲೀಸ್‌ ಗೆಟಪ್‌ನಲ್ಲಿ ರಜನಿಕಾಂತ್

ಕಣ್ಣೂರು ಸ್ಕ್ವಾಡ್

ಮಮ್ಮುಟ್ಟಿ ಅಭಿನಯಿಸಿದ ರಾಬಿ ವರ್ಗೀಸ್ ರಾಜ್ ನಿರ್ದೇಶನದ ಮಾಲಿವುಡ್ ಸಿನಿಮಾ ಚಿತ್ರ ʼಕಣ್ಣೂರು ಸ್ಕ್ವಾಡ್ʼ 100 ಕೋಟಿ ಕ್ಲಬ್ ಪ್ರವೇಶಿಸಿದೆ. ಜಾಗತಿಕ ವ್ಯಾಪಾರದ ಮೂಲಕ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಭಿಷ್ಮ ಪರ್ವಂ, ಮಧುರರಾಜ ಮತ್ತು ಮಾಮಾಂಗಂ ನಂತರ ಮಮ್ಮುಟ್ಟಿ ಅಭಿನಯದ ʼಕಣ್ಣೂರು ಸ್ಕ್ವಾಡ್ʼ 100 ಕೋಟಿ ಕ್ಲಬ್ ಸೇರಿದ ಮೊದಲ ಮಮ್ಮುಟ್ಟಿ ಚಿತ್ರವಾಗಿದೆ.

ವಾರಿಸು-ತುನಿವು

ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻವಾರಿಸುʼ ಸಿನಿಮಾ ಜನವರಿ 11ರಂದು ತೆರೆ ಕಂಡಿದೆ. ವಿಜಯ್‌ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ವರದಿ ಪ್ರಕಾರ ಭಾರತದಾದ್ಯಂತ 21-23 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಅಜಿತ್‌ ಅಭಿನಯದ ʻತುನಿವುʼ ಸಿನಿಮಾ ಕೂಡ ಒಂದೇ ದಿನ ರಿಲೀಸ್‌ ಆಗಿದ್ದರೂ, ʻವಾರಿಸುʼ ಸಿನಿಮಾ (Thala-Thalapathy Fans War) ಗಳಿಕೆಯಲ್ಲಿ ಮುನ್ನುಗ್ಗಿತ್ತು. ತುನಿವುʼ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ʻವಾರಿಸುʼ ಸಿನಿಮಾ ಗಳಿಕೆಯಲ್ಲಿ ಯಶಸ್ವಿಯಾಗಿತ್ತು.

ಕ್ರಾಂತಿ

ಜನವರಿ 26ಕ್ಕೆ ಬಿಡುಗಡೆಯಾಗಿದ್ದ ವಿ. ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ‘ಕಬ್ಜ’ ಫಲಿತಾಂಶ ಕೂಡ ಇದೇ ರೀತಿ ಇತ್ತು. ದರ್ಶನ್ ‘ಕ್ರಾಂತಿ’ ಚಿತ್ರಕ್ಕೆ ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಇನ್ನು ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದಲ್ಲಿ ಉಪ್ಪಿ, ಕಿಚ್ಚನ ಜತೆ ಶಿವಣ್ಣ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು.

Exit mobile version