Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್‌ ನಟರ ಚಿತ್ರಗಳಿವು - Vistara News

South Cinema

Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್‌ ನಟರ ಚಿತ್ರಗಳಿವು

Year Ender 2023: ದಕ್ಷಿಣ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕೆಜಿಎಫ್‌ ಚಾಪ್ಟರ್ 2 ಕೊಡುಗೆಯೇ ಸುಮಾರು ಶೇಕಡ 50ರಷ್ಟಿದೆ. ಆದರೆ ಈ ವರ್ಷ ದಕ್ಷಿಣ ಭಾರತದ ಕೊಡುಗೆ ಶೇಕಡ 44ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. 2023ರಲ್ಲಿ ಹಿಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.

VISTARANEWS.COM


on

star actors who won this 2023 year
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2023ರಲ್ಲಿ (Year Ender 2023) ಹಲವಾರು ಸಿನಿಮಾಗಳು ಬಿಡುಗಡೆಯಾಗಿವೆ. 2022ರಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ನಮ್ಮ ಚಂದನವನದ ಕೊಡುಗೆ ಅಪಾರವಾಗಿದೆ. ಅದಕ್ಕೆ ಮುಖ್ಯ ಕಾರಣ ಕೆಜಿಎಫ್ ಚಾಪ್ಟರ್ 2 ಆಗಿದೆ. ದಕ್ಷಿಣ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್ ಹಾಗೂ ಕೆಜಿಎಫ್‌ ಚಾಪ್ಟರ್ 2 ಕೊಡುಗೆಯೇ ಸುಮಾರು ಶೇಕಡ 50ರಷ್ಟಿದೆ. ಆದರೆ ಈ ವರ್ಷ ದಕ್ಷಿಣ ಭಾರತದ ಕೊಡುಗೆ ಶೇಕಡ 44ಕ್ಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. 2023ರಲ್ಲಿ ಹಿಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.

ಜವಾನ್‌

2023ರಲ್ಲಿ, ಶಾರುಖ್ ಖಾನ್ “ಪಠಾಣ್‌” ಮತ್ತು “ಜವಾನ್” ಎರಡು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆದವು. ನಿರ್ದೇಶಕ ಅಟ್ಲೀ ಅವರು ಕಿಂಗ್ ಖಾನ್ ಅವರನ್ನು ಮಾಸ್ ಅವತಾರದಲ್ಲಿ ಜವಾನ್‌ ಮೂಲಕ ಪ್ರಸ್ತುತಪಡಿಸಿದ್ದರಿಂದ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಚಿತ್ರವು ವಿಶ್ವಾದ್ಯಂತ ಅಂದಾಜು 1150 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಹಿಂದಿ ಆವೃತ್ತಿಯು 590 ಕೋಟಿ ರೂ.ಗಳಷ್ಟು ನಿವ್ವಳ ಆದಾಯ ಸಂಗ್ರಹಿಸಿತು. ಸೆಪ್ಟಂಬರ್‌ 7ರಂದು ಬಿಡುಗಡೆಯಾದ ʼಜವಾನ್‌ʼ ಚಿತ್ರವನ್ನು ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ದ ಹೋರಾಡುವ ಪಾತ್ರದಲ್ಲಿ ಕಿಂಗ್‌ ಖಾನ್‌ ಕಾಣಿಸಿಕೊಂಡಿದ್ದು, ದ್ವಿಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಪಠಾಣ್

ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್‌ʼ ಸಿನಿಮಾ (Pathaan Movie) ವಿಶ್ವಾದ್ಯಂತ 1000 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿತ್ತು. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯಶ್​ ಚೋಪ್ರಾ ಅವರ ಯಶ್​ ರಾಜ್​ ಫಿಲ್ಮ್ಸ್​ ಪ್ರೊಡಕ್ಷನ್​ ಹೌಸ್ ಪ್ರಕಾರ ಪಠಾಣ್​ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್​ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.

ಇದನ್ನೂ ಓದಿ: Year Ender 2023: ಈ ವರ್ಷ ಹೀನಾಯವಾಗಿ ಸೋತ ಸ್ಟಾರ್‌ ನಟರ ಚಿತ್ರಗಳಿವು!

ಅನಿಮಲ್‌

ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ (Animal Box Office Collection) ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಕಲೆಕ್ಷನ್‌ನಲ್ಲಿ ದಿನದಿಂದ ದಿನಕ್ಕೆ ಮುನ್ನುಗ್ಗುತ್ತಲೇ ಇದೆ. ಭಾರತದಲ್ಲಿ 500 ಕೋಟಿ ರೂ. ಒಟ್ಟು ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಹಿಂದಿ ಪ್ರದರ್ಶನ ಶೇ. 19.86 ಆಕ್ಯುಪೆನ್ಸಿ ಇದ್ದರೆ, ತಮಿಳು ಪ್ರದರ್ಶನಗಳಿಗೆ ಇದೇ ರೀತಿಯ ಪ್ರತಿಕ್ರಿಯೆಯನ್ನು ಹೊಂದಿದೆ. ತೆಲುಗು ಪ್ರದರ್ಶನಗಳ ಆಕ್ಯುಪೆನ್ಸಿ ಶೇಕಡಾ 20.95 ರಷ್ಟಿತ್ತು ಎನ್ನಲಾಗಿದೆ.ರಣಬೀರ್ ಜತೆಗೆ ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.

‘ಗದರ್ 2’

ಸನ್ನಿ ಡಿಯೋಲ್ (Sunny Deol) ಅಭಿನಯದ ‘ಗದರ್ 2’ ಚಿತ್ರ (Gadar 2 Movie) ಬಾಕ್ಸ್ ಆಫೀಸ್ ನಲ್ಲಿ  500 ಕೋಟಿ ರೂ. ಹೆಚ್ಚು ಕಲೆಕ್ಷನ್‌ ಮಾಡಿತ್ತು. 2001 ರ ವಾರ್​ ಡ್ರಾಮಾದ ಮುಂದುವರಿದ ಎರಡನೇ ಭಾಗವೇ ಈ ಸಿನಿಮಾ. ಅನಿಲ್ ಶರ್ಮಾ ( Anil Sharma) ನಿರ್ದೇಶನದ ಈ ಚಿತ್ರವು ಈಗ ಕೆಜಿಎಫ್ 2 ಹಿಂದಿಯ ಕಲೆಕ್ಷನ್ (435 ಕೋಟಿ ರೂ.) ಅನ್ನು ಹಿಂದಿಕ್ಕಿ ಮೂರನೇ ಅತಿ ಗಳಿಕೆಯ ಚಿತ್ರ (ಹಿಂದಿ ಭಾಷೆ) ಎನಿಸಿಕೊಂಡಿತ್ತು.

ಲಿಯೋ

ಅಕ್ಟೋಬರ್ 19ರಂದು ಬಿಡುಗಡೆಯಾದ ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಡೀ ಪ್ರಪಂಚದ ಲೆಕ್ಕಾಚಾರ ನೋಡಿದರೆ ಲಿಯೋ ಮೊದಲ ದಿನವೇ 140 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ 550 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.ಮೊದಲ ದಿನ ಲಿಯೋ ಭಾರತದಲ್ಲಿ 64.8 ಕೋಟಿ ಗಳಿಸಿತ್ತು. ತಮಿಳು ಭಾಷೆಯಲ್ಲಿ 48.96 ಕೋಟಿ ರೂ, ತೆಲುಗಿನಲ್ಲಿ 12.9 ಕೋಟಿ ರೂ.; ಹಿಂದಿಯಲ್ಲಿ 2.8 ಕೋಟಿ ರೂ; ಕನ್ನಡ: 1.4 ಕೋಟಿ ರೂ ಸಂಗ್ರಹಿಸಿದೆ.ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದರು.

ಜೈಲರ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅಭಿನಯದ ಜೈಲರ್‌ ಸಿನಿಮಾವು ಭಾರತ ಸೇರಿ ಜಗತ್ತಿನಾದ್ಯಂತ ಹಿಟ್‌ ಆಗಿದೆ. ಗಳಿಕೆಯಲ್ಲೂ ಜೈಲರ್‌ ಸಿನಿಮಾ ಹಲವು ದಾಖಲೆ ಮಾಡಿದೆ. ಸಿನಿಮಾ ಹಿಟ್‌ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್‌ ಅವರು ರಜನಿಕಾಂತ್‌ ಅವರಿಗೆ ಸಂಭಾವನೆ ಜತೆಗೆ ಲಾಭದ ಭಾಗವಾಗಿ 100 ಕೋಟಿ ರೂಪಾಯಿಯನ್ನು ಕೂಡ ಕೊಟ್ಟಿದ್ದಾರೆ. ಜೈಲರ್‌ ಸಿನಿಮಾ ಜಗತ್ತಿನಾದ್ಯಂತ ಹಿಟ್‌ ಆಗಿ, 500 ಕೋಟಿ ರೂ.ಗಿಂತ ಹೆಚ್ಚು ಹಣ ಗಳಿಸಿದೆ. ಭಾರತದಲ್ಲಿಯೇ 300 ಕೋಟಿ ರೂ.ಗಿಂತ ಹೆಚ್ಚು ಹಣ ಬಾಚಿದೆ.

ʼಟೈಗರ್‌ 3ʼ

ಮೊದಲ ದಿನ ಸಲ್ಮಾನ್‌ ಖಾನ್‌ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಓಪನಿಂಗ್‌ ಪಡೆದುಕೊಂಡಿದ್ದ ʼಟೈಗರ್‌ 3ʼ ಚಿತ್ರ ನವೆಂಬರ್‌ 13ರಂದು ಅಂದರೆ ಎರಡನೇ ದಿನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು 57.50 ಕೋಟಿ ರೂ. ಸಂಗ್ರಹಿಸಿತ್ತು. ಆ ಮೂಲಕ ಎರಡನೇ ದಿನಗಳಲ್ಲಿ ಸುಮಾರು 102 ಕೋಟಿ ರೂ. ಗಳಿಸಿದಂತಾಗಿತ್ತು. ಮನೀಷ್‌ ಶರ್ಮಾ ನಿರ್ದೇಶನದ ಈ ಆ್ಯಕ್ಷನ್​ ಥ್ರಿಲ್ಲರ್‌ನಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್‌ ಕಾಣಿಸಿಕೊಂಡಿದ್ದು, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 500 ಕೋಟಿ ರೂ. ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದೆ.

ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ

ಕರಣ್‌ ಜೋಹರ್‌ ನಿರ್ದೇಶನದ `ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ‘(Rocky aur Rani Kii Prem Kahaani) ಸಿನಿಮಾ ಮೊದಲ ವಾರಾಂತ್ಯದ ಅಂತ್ಯಕ್ಕೆ ಒಟ್ಟಾರೆಯಾಗಿ 46 ಕೋಟಿ ರೂ. ಗಳಿಸಿಕೊಂಡಿತ್ತುರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಇದರಲ್ಲಿ ಟೋಟಾ ರಾಯ್ ಚೌಧರಿ, ಚೂರ್ನಿ ಗಂಗೂಲಿ ಮತ್ತು ಅಮೀರ್ ಬಶೀರ್ ಕೂಡ ಬಣ್ಣ ಹಚ್ಚಿದ್ದಾರೆ.

ದಿ ಕೇರಳ ಸ್ಟೋರಿ

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿತ್ತು.ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು.

2018

ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್​ ಬಸ್ಟರ್​ ಸಿನಿಮಾ ಎಂಬ ಖ್ಯಾತಿಗೆ ‘2018’ ಒಳಗಾಗಿದೆ. ಟೊವಿನೋ ಥಾಮಸ್​ ಜತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ದಸರಾ

ನ್ಯಾಚುರಲ್ ಸ್ಟಾರ್ ನಾನಿ (Actor Nani) ಹಾಗೂ ಕೀರ್ತಿ ಸುರೇಶ್ ನಟನೆಯ ʻದಸರಾʼ ಸಿನಿಮಾ ಕಲೆಕ್ಷನ್‌ ಭಾರಿ ಮಾಡಿತ್ತು. ನಾನಿ ರಗಡ್ ಲುಕ್ ನಲ್ಲಿ ಜಾದು ಮಾಡಿದ್ದಾರೆ. ಕೀರ್ತಿ ಡಿಗ್ಲಾಮರ್ ಲುಕ್ ನಲ್ಲಿ ಬಲು ಸೊಗಸಾಗಿ ನಟಿಸಿದ್ದು,. ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾಕರ್ ಚೆರಕೂರಿ ನಿರ್ಮಿಸಿರುವ ದಸರಾಗೆ ಸಂತೋಷ್ ನಾರಾಯಣ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶೈನ್ ಟಾಮ್ ಚಾಕೋ, ಸಮುದ್ರಖನಿ, ಸಾಯಿಕುಮಾರ್, ಜಾನ್ಸಿ, ಶಮಾ ಖಾಸೀಂ, ರಾಜಶೇಖರ್ ಅನಿಂಗಿ, ರವಿ ತೇಜ ನನ್ನಿಮಾಲಾ ಮುಂತಾದ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: Thalaivar 170 Title: ʼತಲೈವರ್ 170ʼ ಸಿನಿಮಾ ಟೈಟಲ್‌ ರಿವೀಲ್; ಮತ್ತೊಮ್ಮೆ ಪೊಲೀಸ್‌ ಗೆಟಪ್‌ನಲ್ಲಿ ರಜನಿಕಾಂತ್

ಕಣ್ಣೂರು ಸ್ಕ್ವಾಡ್

ಮಮ್ಮುಟ್ಟಿ ಅಭಿನಯಿಸಿದ ರಾಬಿ ವರ್ಗೀಸ್ ರಾಜ್ ನಿರ್ದೇಶನದ ಮಾಲಿವುಡ್ ಸಿನಿಮಾ ಚಿತ್ರ ʼಕಣ್ಣೂರು ಸ್ಕ್ವಾಡ್ʼ 100 ಕೋಟಿ ಕ್ಲಬ್ ಪ್ರವೇಶಿಸಿದೆ. ಜಾಗತಿಕ ವ್ಯಾಪಾರದ ಮೂಲಕ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಭಿಷ್ಮ ಪರ್ವಂ, ಮಧುರರಾಜ ಮತ್ತು ಮಾಮಾಂಗಂ ನಂತರ ಮಮ್ಮುಟ್ಟಿ ಅಭಿನಯದ ʼಕಣ್ಣೂರು ಸ್ಕ್ವಾಡ್ʼ 100 ಕೋಟಿ ಕ್ಲಬ್ ಸೇರಿದ ಮೊದಲ ಮಮ್ಮುಟ್ಟಿ ಚಿತ್ರವಾಗಿದೆ.

ವಾರಿಸು-ತುನಿವು

ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻವಾರಿಸುʼ ಸಿನಿಮಾ ಜನವರಿ 11ರಂದು ತೆರೆ ಕಂಡಿದೆ. ವಿಜಯ್‌ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ವರದಿ ಪ್ರಕಾರ ಭಾರತದಾದ್ಯಂತ 21-23 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಅಜಿತ್‌ ಅಭಿನಯದ ʻತುನಿವುʼ ಸಿನಿಮಾ ಕೂಡ ಒಂದೇ ದಿನ ರಿಲೀಸ್‌ ಆಗಿದ್ದರೂ, ʻವಾರಿಸುʼ ಸಿನಿಮಾ (Thala-Thalapathy Fans War) ಗಳಿಕೆಯಲ್ಲಿ ಮುನ್ನುಗ್ಗಿತ್ತು. ತುನಿವುʼ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ʻವಾರಿಸುʼ ಸಿನಿಮಾ ಗಳಿಕೆಯಲ್ಲಿ ಯಶಸ್ವಿಯಾಗಿತ್ತು.

ಕ್ರಾಂತಿ

ಜನವರಿ 26ಕ್ಕೆ ಬಿಡುಗಡೆಯಾಗಿದ್ದ ವಿ. ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ‘ಕಬ್ಜ’ ಫಲಿತಾಂಶ ಕೂಡ ಇದೇ ರೀತಿ ಇತ್ತು. ದರ್ಶನ್ ‘ಕ್ರಾಂತಿ’ ಚಿತ್ರಕ್ಕೆ ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಇನ್ನು ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದಲ್ಲಿ ಉಪ್ಪಿ, ಕಿಚ್ಚನ ಜತೆ ಶಿವಣ್ಣ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Kantara Movie: ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

VISTARANEWS.COM


on

Kantara Movie Massive Set Constructed In Kundapura
Koo

ಬೆಂಗಳೂರು: ʼಕಾಂತಾರʼ ಪ್ಯಾನ್‌ (Kantara Movie) ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಒಂದು ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದ್ದು, 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

ಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading

ಒಟಿಟಿ

Movie Release: ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು; ಟ್ರೈಲರ್‌ಗಳನ್ನು ಇಲ್ಲಿ ನೋಡಿ

Movie Release: ಹಾಸ್ಯದಿಂದ ಥ್ರಿಲ್ಲರ್‌ಗಳವರೆಗೆ, ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳು, ಸರಣಿಗಳು ಒಟಿಟಿಗೆ ಕಾಲಿಟ್ಟಿದ್ದು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Movie Release
Koo

ಈ ಬಾರಿ ವಿಭಿನ್ನ ಪ್ರಕಾರದ ಚಲನಚಿತ್ರಗಳು (Movie Release) ಒಟಿಟಿಯಲ್ಲಿ (OTT) ಬಿಡುಗಡೆಗೆ ಸಿದ್ಧವಾಗಿದೆ. ಹಾಸ್ಯದಿಂದ (Comedy) ಆಕ್ಷನ್ (Action), ಥ್ರಿಲ್ಲರ್‌ಗಳವರೆಗೆ ( Thriller), ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಹೀಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಹೆಚ್ಚು ಇಷ್ಟಪಡುವ ಕೆಲವು ಹೊಸ ಚಲನಚಿತ್ರಗಳು ಮತ್ತು ಸರಣಿಗಳು ಈ ವಾರ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.

ಫಿಯಾಸ್ಕೋ

ಇಗೊರ್ ಗೋಟ್ಸ್‌ಮನ್ ಬರೆದು ನಿರ್ದೇಶಿಸಿರುವ ಫ್ರೆಂಚ್ ಹಾಸ್ಯ ಸರಣಿ ಫಿಯಾಸ್ಕೋ. ಇದರಲ್ಲಿ ನೈನಿ, ಫ್ರಾಂಕೋಯಿಸ್ ಸಿವಿಲ್, ಗೋಟ್ಸ್‌ಮನ್, ಜೆರಾಲ್ಡಿನ್ ನಕಾಚೆ, ಲೂಯಿಸ್ ಕೋಲ್ಡೆಫಿ, ಲೆಸ್ಲಿ ಮೆಡಿನಾ, ಪಾಸ್ಕಲ್ ಡೆಮೊಲನ್, ಜೂಲಿಯೆಟ್ ಗ್ಯಾಸ್ಕೆಟ್, ಡಿಜಿಮೊ, ಮೇರಿ-ಕ್ರಿಸ್ಟಿನ್ ಬರಾಲ್ಟ್ ಮತ್ತು ವಿನ್ಸೆಂಟ್ ಕ್ಯಾಸೆಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


2024ರ ಏಪ್ರಿಲ್ 8ರಂದು ಕ್ಯಾನೆಸರೀಸ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ಫಿಯಾಸ್ಕೋ ಸರಣಿಯು ಅಜ್ಜಿಗೆ ಗೌರವ ಸಲ್ಲಿಸಲು ರಾಫೆಲ್ ವಾಲಾಂಡೆ ಅವರ ನಿರ್ದೇಶಿಸುವ ಚೊಚ್ಚಲ ಸಿನಿಮಾದ ಸುತ್ತ ಸುತ್ತುತ್ತದೆ. ತಂಡದ ಸದಸ್ಯರು ಚಲನಚಿತ್ರವನ್ನು ಹಾಳುಮಾಡಲು ಪ್ರಯತ್ನಿಸಿದಾಗ ಅದು ದುಃಸ್ವಪ್ನವಾಗುತ್ತದೆ. ನೆಟ್‌ಫ್ಲಿಕ್ಸ್ ಈ ಸರಣಿಯು ಏಪ್ರಿಲ್ 30ರಿಂದ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ: Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!


ಅಕಾಪುಲ್ಕೊ ಸೀಸನ್ 3

ಅಮೆರಿಕನ್ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಯ ಹಾಸ್ಯ ಸರಣಿ ಅಕಾಪುಲ್ಕೊದ ಮೂರನೇ ಸರಣಿ ಒಟಿಟಿ ಪ್ಲಾಟ್‌ಫಾರ್ಮ್ ಮೇಲೆ ಬರಲು ಸಜ್ಜಾಗಿದೆ. ಇದನ್ನು ಆಸ್ಟಿನ್ ವಿನ್ಸ್‌ಬರ್ಗ್, ಎಡ್ವರ್ಡೊ ಸಿಸ್ನೆರೋಸ್ ಮತ್ತು ಜೇಸನ್ ಶುಮನ್ ರಚಿಸಿದ್ದಾರೆ. ಈ ಸರಣಿಯು ಹೌ ಟು ಬಿ ಎ ಲ್ಯಾಟಿನ್ ಲವರ್ (2017) ನಿಂದ ಸ್ಫೂರ್ತಿ ಪಡೆದಿದೆ. ಇದರ ಮೊದಲ ಸೀಸನ್ 2021ರ ಅಕ್ಟೋಬರ್ 8ರಂದು ಬಿಡುಗಡೆಯಾಗಿತ್ತು. ಅನಂತರ ಎರಡನೇ ಸೀಸನ್ 2022ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಯಿತು. ಈಗ ಮೂರನೇ ಸೀಸನ್ ಬಿಡುಗಡೆಗೆ ಸಿದ್ಧವಾಗಿದೆ. Apple TV+ ನಲ್ಲಿ ಈ ಸರಣಿ ಮೇ 1ರಿಂದ ಪ್ರದರ್ಶನ ಕಾಣಲಿದೆ.


T・P ಬಾನ್

T・P BON ಎಂಬುದು ಬಾನ್ ಮೇಲೆ ಕೇಂದ್ರೀಕರಿಸುವ ನಾಮಸೂಚಕ ಮಂಗಾದ ಅನಿಮೆ ರೂಪಾಂತರ. ಬಾನ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಟೈಮ್ ಪ್ಯಾಟ್ರೋಲ್ ಎಂದು ಕರೆಯಲ್ಪಡುವ ಟೈಮ್-ಟ್ರಾವೆಲಿಂಗ್ ಸ್ಕ್ವಾಡ್‌ನ ಸದಸ್ಯರಾಗಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಸಮಯ ಮತ್ತು ಸ್ಥಳಗಳ ಮೂಲಕ ಜನರನ್ನು ಪ್ರಮುಖ ಐತಿಹಾಸಿಕ ಕ್ಷಣಗಳಿಂದ ರಕ್ಷಿಸುವ ಮೂಲಕ ಇದು ನೋಡಲು ಆಹ್ಲಾದಕರವಾದ ಆದರೆ ಪ್ರಮುಖವಾದ ಮಿಷನ್ ಅನ್ನು ನಿರೂಪಿಸುತ್ತದೆ. ಬಾನ್ ಮತ್ತು ಅವನ ಸಂಗಡಿಗರು ಸಮಯ ಪ್ರಯಾಣದ ಜಟಿಲತೆಗಳನ್ನು ಪರಿಶೀಲಿಸಿದಾಗ ಅವರು ತಮ್ಮ ನಿರ್ಣಯವನ್ನು ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಇತಿಹಾಸದ ಬಗ್ಗೆ ಅವರ ಒಳನೋಟವನ್ನು ಆಳವಾಗಿಸುತ್ತಾರೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಸರಣಿ ಮೇ 2ರಿಂದ ತೆರೆ ಕಾಣಲಿದೆ.


ದಿ ಐಡಿಯಾ ಆಫ್ ಯು

2024ರ ಅಮೇರಿಕನ್ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ದಿ ಐಡಿಯಾ ಆಫ್ ಯು. ಇದನ್ನು ಮೈಕೆಲ್ ಶೋಲ್ಟರ್ ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ಜೆನ್ನಿಫರ್ ವೆಸ್ಟ್‌ಫೆಲ್ಡ್ ಜೊತೆ ಸಹ-ಬರೆದಿದ್ದಾರೆ ಮತ್ತು ಚಲನಚಿತ್ರವು ರಾಬಿನ್ನೆ ಲೀ ಅವರ ಅದೇ ಹೆಸರನ್ನು ಆಧರಿಸಿದೆ. ಇದು ಅನ್ನಿ ಹ್ಯಾಥ್‌ವೇ ಮತ್ತು ನಿಕೋಲಸ್ ಗ್ಯಾಲಿಟ್‌ಜಿನ್ ಒಬ್ಬ ತಾಯಿ ಮತ್ತು ಜನಪ್ರಿಯ ಬಾಯ್ ಬ್ಯಾಂಡ್‌ನ ಪ್ರಮುಖ ಗಾಯಕ ಮತ್ತು ಪ್ರಮುಖ ಗಾಯಕ ನಡುವಿನ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಪ್ರಧಾನ ವಿಡಿಯೋ ನಲ್ಲಿ ಮಾರ್ಚ್ 16ರಿಂದ ಚಿತ್ರ ತೆರೆ ಕಾಣುತ್ತಿದೆ.


ಶೈತಾನ್

ಶೈತಾನ್ 2024ರ ಭಾರತೀಯ ಹಿಂದಿ ಭಾಷೆಯ ಅಲೌಕಿಕ ಹಾರರ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ, ಅಂಗದ್ ರಾಜ್ ಮತ್ತು ಜಾಂಕಿ ಬೋಡಿವಾಲಾ ನಟಿಸಿದ್ದಾರೆ. ತಮ್ಮ ಹಿರಿಯ ಮಗಳು ಮಾಟಮಂತ್ರದ ಮಾಟಕ್ಕೆ ಸಿಲುಕಿದಾಗ ಅವರ ಜೀವನವು ಅಸ್ತವ್ಯಸ್ತವಾಗಿರುವ ಕುಟುಂಬದ ಸುತ್ತ ಚಲನಚಿತ್ರವು ಸುತ್ತುತ್ತದೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಚಿತ್ರ ಮೇ 3ರಿಂದ ತೆರೆ ಕಾಣಲಿದೆ.


ಟಿಲ್ಲು 2

ಟಿಲ್ಲು ಸ್ಕ್ವೇರ್ ಭಾರತೀಯ ತೆಲುಗು ಭಾಷೆಯ ರೋಮ್ಯಾಂಟಿಕ್ ಕ್ರೈಮ್ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗ ವಂಶಿ ನಿರ್ಮಿಸಿದ್ದಾರೆ. 2022 ರ ಡಿ.ಜೆ. ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿದ್ದು, ಸಿದ್ದು ಜೊನ್ನಲಗಡ್ಡ ಅವರು ಹಿಂದಿನ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರೆ, ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಚ್ 26ರಿಂದ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.


ಭೀಮಾ

ಆಕ್ಸನ್ ಚಿತ್ರವಾಗಿರುವ ಭೀಮಾದಲ್ಲಿ ಗೋಪಿಚಂದ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ, ಭವಾನಿ ಶಂಕರ್, ಮಾಳವಿಕಾ ಶರ್ಮ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿ ಕಂಡಿಸಿಕೊಂಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರವನ್ನು ಕೆ.ಕೆ. ರಾಧಾಮೋಹನ್ ನಿರ್ಮಿಸಿದ್ದಾರೆ. 28 ಕೋಟಿ ಬಜೆಟ್‌ನ ಈ ಚಿತ್ರ ಹಾಟ್ ಸ್ಟಾರ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿದೆ.


ಕುಂಗ್ ಫು ಪಂಡಾ 4

ಅಮೆರಿಕನ್ ಅನಿಮೇಷನ್ ಚಿತ್ರ ಕುಂಗ್ ಫು ಪಂಡಾ 4 ಅನ್ನು ಡ್ರೀಮ್ ವರ್ಕ್ ಅನಿಮೇಷನ್ ನಿರ್ದೇಶಿಸಿದೆ. ಜೇಮ್ಸ್ ಹಾಂಗ್, ಬ್ರಯಾನ್ ಕ್ರೇನ್ಸ್ಟೋನ್, ಡುಸ್ಟಿನ್ ಹಾಫ್ಮ್ಯಾನ್, ಜೇಮ್ಸ್ ಹೊಂಗ್ ಸೇರಿದಂತೆ ಹಲವು ಪಾತ್ರಗಳು ಹಿಂದಿನ ಸರಣಿಯಂತೆ ಈ ಬಾರಿಯ ಸರಣಿಯಲ್ಲೂ ಕಾಣಿಸಿಕೊಳ್ಳಲಿದೆ. ಇದು ಬುಕ್ ಮೈ ಶೋ ನಲ್ಲಿ ಮಾರ್ಚ್ 26 ರಿಂದ ತೆರೆ ಕಾಣಲಿದೆ.


ದಿ ಫಿಲಂ ಸ್ಟಾರ್

ಅಮೆಜಾನ್ ಪ್ರೈಮ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ವಿಜಯ್ ದೇವರಕೊಂಡ ಅಭಿನಯದ ಕೌಟುಂಬಿಕ ಪ್ರಧಾನ ಚಿತ್ರ ದಿ ಫಿಲಂ ಸ್ಟಾರ್. ಉತ್ತಮ ಜೀವನ ನಿರ್ವಹಣೆಗಾಗಿ ಮಾಡುವ ಸಾಹಸ ಚಿತ್ರದ ಮುಖ್ಯ ಕಥೆಯಾಗಿದೆ.


ಡೆಡ್ ಬಾಡಿ ಡಿಟೆಕ್ಟಿವ್

ನೆಟ್ ಫ್ಲಿಕ್ಸ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ಈ ಸರಣಿ ಸ್ಟೀವ್ ಯೊಕೆಯ್ ನಿರ್ದೇಶಿಸಿದ್ದಾರೆ. ಕ್ರೈಮ್ ನ ಕಾರಣಗಳನ್ನು ಹುಡುಕಿ ಕುತೂಹಲ ವಿಚಾರಗಳನ್ನು ವಿಶೇಷ ರೀತಿಯಲ್ಲಿ ತೆರೆದಿಡುವ ಸರಣಿ ಇದಾಗಿದೆ.

Continue Reading

ಸ್ಯಾಂಡಲ್ ವುಡ್

Manvita Kamath: ಅರುಣ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ʼಟಗರು ಪುಟ್ಟಿʼ

Manvita Kamath: ಅರುಣ್‌ ಕೂಡ ಮಾನ್ವಿತಾ ಅವರು ಮದುವೆ ಬಳಿಕ ಸಿನಿಮಾ ಮಾಡಿದರೂ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಅರುಣ್ ಎಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ.ಮಾನ್ವಿತಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಜೋಡಿ ಹಸೆಮಣೆ ಏರಿದೆ.

VISTARANEWS.COM


on

Manvita Kamath marriage with arun Pics are here
Koo

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರು ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು (ಮೇ 1) ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗಿದೆ.

ಇದನ್ನೂ ಓದಿ: Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

ಮಾನ್ವಿತಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಜೋಡಿ ಹಸೆಮಣೆ ಏರಿದೆ.

ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದೆ ಜೋಡಿ.

ಮಾನ್ವಿತಾ ಅವರು ಮದುವೆ ಬಳಿಕ ಸಿನಿಮಾದಲ್ಲಿ ನಟಿಸಿದರೂ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ ಅರುಣ್‌. ಮೈಸೂರಿನಲ್ಲಿ ಅರುಣ್ ಎಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ.

ʼಕೆಂಡಸಂಪಿಗೆ‘ (kendasampige Cinema Kannada) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸೆಸ್‌ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್ (Manvita Kamath). ಆರ್ ಜೆಯಾಗಿದ್ದ ಮಾನ್ವಿತಾ ಅವರು ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು.

Continue Reading

ಸಿನಿಮಾ

Duniya Vijay: ಕೊಲ್ಲೂರಿನಲ್ಲಿ ʼಸ್ಯಾಂಡಲ್‌ವುಡ್‌ ಸಲಗʼವನ್ನು ಮುತ್ತಿಕೊಂಡ ಅಭಿಮಾನಿಗಳು!

Duniya Vijay: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ದುನಿಯಾ ವಿಜಯ್ (Duniya Vijay) ಅವರು ಕೊಲ್ಲೂರು ಮೊಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ದುನಿಯಾ ವಿಜಯ್ ಅವರು ‘ಭೀಮ’ ಸಿನಿಮಾದಲ್ಲಿ ನಟಿಸುವುದ ಜತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ನಿಖಿಲ್ ಕುಮಾರ್ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದಾರೆ.

VISTARANEWS.COM


on

Duniya Vijay Visited Kolluru Shri Mookambika Devi Temple
Koo

ದುನಿಯಾ ವಿಜಯ್ (Duniya Vijay) ಅವರು ಕೊಲ್ಲೂರು ಮೊಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ದುನಿಯಾ ವಿಜಯ್ ಅವರನ್ನು ನೋಡಲು ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಎಲ್ಲರೂ ಬಂದು ದುನಿಯಾ ವಿಜಯ್ ಬಳಿ ಸೆಲ್ಫಿ ಕೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಇದಾದ ಬಳಿಕ ಚಿತ್ರರಂಗದ ಸ್ಟಾರ್ ನಟ ಮೋಹನ್‌ಲಾಲ್ ಭೇಟಿ ನೀಡಿ, ಮುಂಜಾನೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದರು.

ದುನಿಯಾ ವಿಜಯ್ ಅವರು ‘ಭೀಮ’ ಸಿನಿಮಾದಲ್ಲಿ ನಟಿಸುವುದ ಜತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ನಿಖಿಲ್ ಕುಮಾರ್ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಕೆಲವು ದಿನಗಳ ಹಿಂದೆಯಷ್ಟೇ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ.

Continue Reading
Advertisement
Dina Bhavishya
ಭವಿಷ್ಯ3 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

Benefits of Tender Coconut
ಆರೋಗ್ಯ3 mins ago

Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

Bhajanotsava
ಬೆಂಗಳೂರು3 hours ago

Bhajanotsava: ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವ ಸಂಪನ್ನ

Shata Chandika Yaga
ಚಿಕ್ಕಬಳ್ಳಾಪುರ4 hours ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ5 hours ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ5 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Bangalore University
ಕರ್ನಾಟಕ5 hours ago

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Prajwal Revanna
ಕರ್ನಾಟಕ5 hours ago

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

CSK vs PBKS
ಕ್ರೀಡೆ6 hours ago

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

Neha Murder Case
ಕರ್ನಾಟಕ6 hours ago

Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 mins ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌