ಬೆಂಗಳೂರು: ಅಮಲಾ ಪೌಲ್ (Amala Paul ) ಮತ್ತು ಆಸಿಫ್ ಅಲಿ ಇತ್ತೀಚೆಗೆ ಕೊಚ್ಚಿಯ ಎರ್ನಾಕುಲಂನಲ್ಲಿರುವ ಸೇಂಟ್ ಆಲ್ಬರ್ಟ್ ಕಾಲೇಜಿನಲ್ಲಿ ತಮ್ಮ ಮುಂಬರುವ ಚಿತ್ರವಾದ ʻಲೆವೆಲ್ ಕ್ರಾಸ್ʼ (Level Cross) ಪ್ರಚಾರ ಮಾಡಲು ಬಂದಿದ್ದರು. ನಟಿ ಈ ಸಮಯಲ್ಲಿ ಅತ್ಯಂತ ಚಿಕ್ಕ ಉಡುಗೆಯನ್ನು ಧರಿಸಿ ಬಂದಿದ್ದರು. ಬಳಿಕ ನಟಿಯನ್ನು ಸಖತ್ ಟ್ರೋಲ್ ಮಾಡಿದ್ದಾರೆ ನೆಟ್ಟಿಗರು. ಇದೀಗ ನಟಿ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʻಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಮೆನ್‌ಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲʼʼಎಂದು ಹೇಳಿದ್ದಾರೆ.
ಈ ಬಗ್ಗೆ ನಟಿ ಮಾತನಾಡಿ ʻʻನನಗೆ ಯಾವ ಬಟ್ಟೆ ಆರಾಮದಾಯಕವಾಗುತ್ತೋ ಅದನ್ನು ಮಾತ್ರ ಧರಿಸುವೆ. ಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲ. ನಾನು ಎಲ್ಲ ರೀತಿಯ ಡ್ರೆಸ್ನ ಹಾಕುತ್ತೇನೆ. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.
ʻʻನನ್ನ ಬಟ್ಟೆಯಿಂದಾಗಿ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿಲ್ಲ. ನಾನು ಸಾಂಪ್ರದಾಯಿಕ ಅಥವಾ ಪಾಶ್ಚಿಮಾತ್ಯ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ಆತ್ಮವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ”ಎಂದು ಅವರು ಹೇಳಿದರು.
ಇದನ್ನೂ ಓದಿ: Actor Yash: ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾ ವಿರುದ್ಧ ದೂರು ದಾಖಲು
ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ ಅಮಲಾ ಅವರು ತಮ್ಮ ಮಲಯಾಳಂ ಚಿತ್ರ ಲೆವೆಲ್ ಕ್ರಾಸ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಥಿಯೇಟರ್‌ಗೆ ಬಂದಿದೆ. ನಟಿ ಇಂತಹ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಡ್ರೆಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದ ಒಂದು ಕಮೆಂಟ್ ಹೀಗಿದೆ, “ಇದು ಪ್ರಚಾರದ ಭಾಗವಾಗಿರಲಿ ಅಥವಾ ಯಾವುದೇ ಕಾರ್ಯವಾಗಲಿ, ಶಿಕ್ಷಣ ಸಂಸ್ಥೆಯಲ್ಲಿ ನೀವು ಧರಿಸುವ ಉಡುಪಿಗೆ ಕನಿಷ್ಠ ಅರ್ಥವಿರಬೇಕು.” ಎಂದು ಕಮೆಂಟ್ ಮಾಡಿದ್ದಾರೆ ಇನ್ನೊಬ್ಬರು, “ಶಿಕ್ಷಣ ಸಂಸ್ಥೆಗೆ ಹೋಗುವಾಗ ಯೋಗ್ಯವಾದ ಉಡುಗೆ ಧರಿಸಿ” ಎಂದು ಬರೆದಿದ್ದಾರೆ. ಅಮಲಾ ಪೌಲ್ ಅವರು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾದಲ್ಲಿ ನಟಿಸಿದ್ದಾರೆ.