Site icon Vistara News

Bigg Boss Telugu 6 | ತೆಲುಗು ಬಿಗ್‌ ಬಾಸ್‌ ಸೀಸನ್‌ 6ರ ವಿಜೇತ ಯಾರು?

Bigg Boss Telugu 6

ಬೆಂಗಳೂರು: ತೆಲುಗು ಬಿಗ್‌ ಬಾಸ್‌ ಸೀಸನ್‌ 6ರಲ್ಲಿ (Bigg Boss Telugu 6) ಎಲ್‌ ವಿ ರೇವಂತ್‌ ವಿಜೇತರಾಗಿ ಹೊರಹೊಮ್ಮಿದ್ದಾರೆ. ಭಾನುವಾರ ಡಿಸೆಂಬರ್‌ 18ರಂದು ನಡೆದ ಫಿನಾಲೆಯಲ್ಲಿ ನಟ ನಾಗಾರ್ಜುನ ಅವರು ಸೀಸನ್‌ 6ರ ವಿಜೇತರನ್ನು ಘೋಷಿಸಿದ್ದಾರೆ. ಫಿನಾಲೆಗೆ ಗಾಯಕ ಶ್ರಿಹಾನ್, ಆದಿ ರೆಡ್ಡಿ, ಕೀರ್ತಿ ಭಟ್, ರೋಹಿತ್ ಶನಿ ಹಾಗೂ ರೇವಂತ್ ಬಂದಿದ್ದರು. ಕೊನೆಗೆ ಉಳಿದಿದ್ದು ಗಾಯಕ ಶ್ರಿಹಾನ್ ಹಾಗೂ ರೇವಂತ್. ಆಗ 25 ಲಕ್ಷ ರೂ. ಇದ್ದ ಗೋಲ್ಡನ್ ಸೂಟ್‌ಕೇಸ್ ತಂದ ನಿರೂಪಕ ನಾಗಾರ್ಜುನ, ಇಬ್ಬರನ್ನು ಯಾರು ಗೇಮ್ ಬಿಡುತ್ತೀರೊ ಅವರು ಇದನ್ನು ತೆಗೆದುಕೊಂಡು ಹೋಗಬಹುದು ಎಂದರು.

ಸೂಟ್‌ಕೇಸನಲ್ಲಿನ ಮೊತ್ತವನ್ನು 25 ಲಕ್ಷದಿಂದ 35 ಲಕ್ಷಕ್ಕೆ, ಬಳಿಕ 40 ಲಕ್ಷಕ್ಕೆ ಹೆಚ್ಚಿಸಲಾಯ್ತು. ಗಾಯಕ ಶ್ರಿಹಾನ್ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಆಟವನ್ನು ಬಿಟ್ಟರು. ಆ ಮೂಲಕ ರೇವಂತ್ ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದರು.

ಇದನ್ನೂ ಓದಿ | Bigg Boss Telugu | ಇಂದಿನಿಂದ ತೆಲುಗು ಬಿಗ್ ಬಾಸ್ ಆಟ ಶುರು!

ರೇವಂತ್‌ ಅವರಿಗೆ 10 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಸೈಟ್‌ ಸೇರಿದಂತೆ ಐಶಾರಾಮಿ ಕಾರನ್ನು ನೀಡಲಾಗಿದೆ. ನಾಗಾರ್ಜುನ ಹೇಳಿದಂತೆ ಅತಿ ಹೆಚ್ಚು ಮತಗಳನ್ನು ಪಡೆದದ್ದು ಗಾಯಕ ಶ್ರಿಹಾನ್‌. ಒಂದು ವೇಳೆ ಸೂಟ್‌ ಕೇಸ್‌ ತೆಗೆದುಕೊಳ್ಳದೇ ಇದ್ದರೆ ಅವರೇ ವಿನ್ನರ್‌ ಆಗುತ್ತಿದ್ದರು.

ಇದನ್ನೂ ಓದಿ | Bigg Boss Hindi | ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ: ಅಖಾಡಕ್ಕೆ ಇಳಿಯಲಿದ್ದಾರಾ ಹಿಂದಿ ಬಿಗ್ ಬಾಸ್?

Exit mobile version