Site icon Vistara News

Bigg Boss Telugu 7: ಶುರುವಾಯ್ತು ತೆಲುಗು ಬಿಗ್‌ ಬಾಸ್‌; ಯಾರೆಲ್ಲ ಸ್ಪರ್ಧಿಗಳು ಇದ್ದಾರೆ?

Bigg Boss Telugu 7 List Of Contestants

ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಸೆಪ್ಟೆಂಬರ್ 3ರಂದು ಪ್ರಾರಂಭವಾಗಿದೆ. ನಟ ನಾಗಾರ್ಜುನ (Akkineni Nagarjuna)ಮತ್ತೊಮ್ಮೆ ಬಿಗ್​ಬಾಸ್ ಹೊಸ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಯಾರೆಲ್ಲ ಸ್ಪರ್ಧಿಗಳು ಇದ್ದಾರೆ ಎಂಬುದು ನೋಡೋಣ! (bigg boss telugu 7 contestants list) ಈಗಾಗಲೇ ನಾಗುರ್ಜನ ಪ್ರೋಮೊದಲ್ಲಿ ಹೇಳಿರುವಂತೆ ಈ ಬಾರಿಯ ಬಿಗ್​ಬಾಸ್ ಸಾಮಾನ್ಯವಾಗಿರುವುದಿಲ್ಲ ಎಂದಿದ್ದರು.

ಪ್ರಿಯಾಂಕಾ ಜೈನ್

ಟಿವಿ ನಟಿ ಪ್ರಿಯಾಂಕಾ ಜೈನ್, ಮೌನ ರಾಗಂ ಮತ್ತು ಜಾನಕಿ ಕಲಗನಾಲೆಡು ಧಾರಾವಾಹಿಗಳಿಂದ ಹೆಸರು ಪಡೆದಿರುವ ಅವರು ಬಿಗ್ ಬಾಸ್ ತೆಲುಗು 7 ಗೆ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಬಂದರು.

ಶಿವಾಜಿ

ಶಿವಾಜಿ ಟಾಲಿವುಡ್‌ನ ಜನಪ್ರಿಯ ನಟ. ತೆಲುಗಿನಲ್ಲಿ ಹಲವಾರು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶಿಸಿದರು.

ದಾಮಿನಿ ಭಟ್ಲ

ದಾಮಿನಿ ಜನಪ್ರಿಯ ಹಿನ್ನೆಲೆ ಗಾಯಕಿ. ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಎಂಎಂ ಕೀರವಾಣಿ ಅವರ ನಿರ್ದೇಶನದಲ್ಲಿ ಅವರು ಹಲವಾರು ಗಮನಾರ್ಹ ಸಂಯೋಜನೆಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Bigg Boss Telugu 7: ಬಿಗ್‌ ಬಾಸ್‌ ವೇದಿಕೆಯಲ್ಲಿ ಸಮಂತಾ ಎಲ್ಲಿ?ಎಂದು ಕೇಳಿದ ಮಾಜಿ ಮಾವ ನಾಗಾರ್ಜುನ!

ಪ್ರಿನ್ಸ್ ಯವರ್

ಫಿಟ್‌ನೆಸ್ ಉತ್ಸಾಹಿ, ರೂಪದರ್ಶಿ ಮತ್ತು ನಟ ಪ್ರಿನ್ಸ್ ಯವರ್ ಅವರು ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸಿ ಸೋಲು ಕಂಡು ಚಿತ್ರರಂಗ ತೊರೆದವರು.”ಬಿಗ್ ಬಾಸ್ ತೆಲುಗು ಅವಕಾಶ ನನಗೆ ಬಂದಿದೆ. ಇಂದಿನಿಂದ ನನ್ನ ಜೀವನ ಬದಲಾಗಲಿ ಎಂದು ನಾನು ಭಾವಿಸುತ್ತೇನೆ” ಎಂದು ವೇದಿಕೆಯಲ್ಲಿ ಹೇಳಿಕೊಂಡರು.

ಸುಭಾ ಶ್ರೀ ರಾಯಗುರು

ಸುಭಾ ಶ್ರೀ ರಾಯಗುರು ವಕೀಲೆ ಹಾಗೂ ನಟಿ. ಕುಟುಂಬದ ಆಸೆಯಂತೆ ಕಾನೂನು ಪದವಿ ಪಡೆದರು. ಆದರೆ ನಟನೆ ಮತ್ತು ನೃತ್ಯದ ಮೇಲಿನ ಆಸಕ್ತಿಯಿಂದಾಗಿ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡರು.

ಶಕೀಲಾ

ಬಿಗ್ ಬಾಸ್ ತೆಲುಗು 7 ಕಾರ್ಯಕ್ರಮಕ್ಕೆ ಆರನೇ ಸ್ಪರ್ಧಿಯಾಗಿ ಶಕೀಲಾ ಪ್ರವೇಶಿಸಿದರು. ಮೊದಲು ಅವರ ಮಗಳು ಮಿಲಾ ಅವರು ‘ಬಿಗ್ ಬಾಸ್ ತಮಿಳು ಸೀಸನ್ 5’ ಸ್ಪರ್ಧಿ ಆಗಿದ್ದರು.

ಸಂದೀಪ್ ನೃತ್ಯ ನಿರ್ದೇಶಕ-

‘ಆಟ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಪಡೆದ ಆಟಾ ಸಂದೀಪ್ ನೃತ್ಯ ನಿರ್ದೇಶಕ.

ಇದನ್ನೂ ಓದಿ: Bigg Boss Telugu 7: ದೊಡ್ಮನೆಗೆ ಕಾಲಿಡಲು ನಟಿ ಶಕೀಲಾ ರೆಡಿ?

ಶೋಭಾ ಶೆಟ್ಟಿ

ಕಿರುತೆರೆ ನಟಿ ಶೋಭಾ ಶೆಟ್ಟಿ ಬಿಗ್ ಬಾಸ್ ತೆಲುಗು 7 ರ ಎಂಟನೇ ಸ್ಪರ್ಧಿಯಾಗಿ ಬಂದರು. ಅವರು ಕಾರ್ತಿಕಾ ದೀಪಂನ ಖಳನಾಯಕಿ ‘ಮೋನಿತಾ’ ಪಾತ್ರಧಾರಿಯಾಗಿದ್ದಾರೆ.

ಟೇಸ್ಟಿ ತೇಜಾ

ಯೂಟ್ಯೂಬರ್ ಮತ್ತು ಹಾಸ್ಯನಟಿ ಟೇಸ್ಟಿ ತೇಜ. ದಕ್ಷಿಣ ಭಾರತದ ನಟ ನಟಿಯರೊಂದಿಗೆ ತಾರೆಯರೊಂದಿಗೆ ವಿಭಿನ್ನವಾಗಿ ಅವರ ಚಲನಚಿತ್ರ ಪ್ರಚಾರಗಳನ್ನು ಮಾಡುತ್ತಾರೆ.

ರಥಿಕಾ

ರಥಿಕಾ ರೋಸ್ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದವರು. ಬಿಗ್ ಬಾಸ್ ತೆಲುಗು 7 ಮೂಲಕ ಹೆಚ್ಚು ಜನರನ್ನು ತಲುಪಲು ಮತ್ತು ಜನಪ್ರಿಯರಾಗಲು ಬಯಸುತ್ತಿದ್ದಾರೆ. ಆಕೆ ಹತ್ತನೇ ಸ್ಪರ್ಧಿಯಾಗಿ ಮನೆಗೆ ಬಂದಿದ್ದಾರೆ.

ಡಾ ಗೌತಮ್ ಕೃಷ್ಣ

ಡಾ ಗೌತಮ್ ಯಾವಾಗಲೂ ನಟನಾಗಲು ಬಯಸಿದ್ದರು. ಆದರೆ ಅವರ ಪೋಷಕರ ಬೆಂಬಲದ ಕೊರತೆಯಿಂದಾಗಿ ಅವರ ಆಸಕ್ತಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆ ‘ಆಕಾಸ ಬೀದಿಲೋ..’ ಶೀರ್ಷಿಕೆಯ ಚಲನಚಿತ್ರದೊಂದಿಗೆ ಪದಾರ್ಪಣೆ ಮಾಡಿದರು.

ಕಿರಣ್ ರಾಥೋರ್

ನಟಿ ಕಿರಣ್ ರಾಥೋಡ್ ಟಾಲಿವುಡ್‌ನ ಜನಪ್ರಿಯ ನಟಿ. ಹಿಂದಿ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಹಲವಾರು ದಕ್ಷಿಣ-ಭಾರತೀಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Bigg Boss Telugu 7: ಶುರುವಾಗ್ತಿದೆ ಬಿಗ್ ಬಾಸ್ ತೆಲುಗು ಸೀಸನ್‌ 7; ಪ್ರೋಮೊ ಔಟ್‌, ಆ್ಯಂಕರ್ ಫಿಕ್ಸ್!

ಪಲ್ಲವಿ ಪ್ರಶಾಂತ್

ಬಿಗ್ ಬಾಸ್ ತೆಲುಗು ಸೀಸನ್ 7 ರ ಹದಿಮೂರನೇ ಸ್ಪರ್ಧಿ ಪಲ್ಲವಿ ಪ್ರಶಾಂತ್. ಇವರು ಕೃಷಿ ಮತ್ತು ಡಿಜಿಟಲ್ ಕಟೆಂಟ್‌ ಕ್ರಿಯೇಟರ್‌.

ಅಮರ್‌ದೀಪ್ ಚೌದರಿ:

ಜಾನಕಿ ಕಲಗನಾಲೆಡು ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಹೆಸರುವಾಸಿಯಾದ ಕಿರುತೆರೆ ನಟ ಅಮರ್‌ದೀಪ್ ಚೌಧರಿ ಬಿಗ್ ಬಾಸ್ ತೆಲುಗು 7ರ 14 ನೇ ಸ್ಪರ್ಧಿಯಾಗಿದ್ದಾರೆ.

ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ವಿಜಯ್ ದೇವರಕೊಂಡ ಹಾಗೂ ನಟ ನವೀನ್ ಪೋಲಿಶೆಟ್ಟಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ವಿಜಯ್ ದೇವರಕೊಂಡ ತಮ್ಮ ‘ಖುಷಿ’ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು.

Exit mobile version