Site icon Vistara News

Bigg Boss Telugu 7: ಶುರುವಾಗ್ತಿದೆ ಬಿಗ್ ಬಾಸ್ ತೆಲುಗು ಸೀಸನ್‌ 7; ಪ್ರೋಮೊ ಔಟ್‌, ಆ್ಯಂಕರ್ ಫಿಕ್ಸ್!

Akkineni Nagarjuna In Bigg Boss Promo

ಬಿಗ್ ಬಾಸ್ ತೆಲುಗು (Bigg Boss Telugu 7) ಸೀಸನ್ 7 ಶೋ ಕೆಲ ವಾರಗಳಲ್ಲಿ ಆರಂಭವಾಗುತ್ತಿದೆ. ಸೆಪ್ಟೆಂಬರ್ 3ರಂದು ಈ ಶೋ ಶುರುವಾಗಲಿದೆ ಎನ್ನಲಾಗುತ್ತಿದೆ. ನಾಗಾರ್ಜುನ ಅಕ್ಕಿನೇನಿ ಅವರು ಈ ಶೋ ನಿರೂಪಣೆ ಮಾಡುತ್ತಿರುವುದು ಕನ್‌ಫರ್ಮ್‌ ಆಗಿದೆ. ಈಗಾಗಲೇ ತೆಲುಗು ಬಿಗ್‌ ಬಾಸ್‌ ಪ್ರೋಮೊ ರಿಲೀಸ್‌ ಕೂಡ ಆಗಿದೆ. ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿಯಿದೆ. ಟಿಕ್‌ ಟಾಕ್‌ ಸ್ಟಾರ್ಸ್‌, ವಿವಾದದಲ್ಲಿ ಸುದ್ದಿಯಾದವರಿಗೆ ದೊಡ್ಮನೆ ಆಟಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಮರದೀಪ್ ಚೌದರಿ ಮತ್ತು ತೇಜಸ್ವಿನಿ ದಂಪತಿ, ಗಾಯಕಿ ಮೋಹನ ಭೋಗರಾಜು, ಯೂಟ್ಯೂಬರ್ ಶ್ವೇತಾ ನಾಯ್ಡು ಹೆಸರುಗಳು ಕೇಳಿಬರುತ್ತಿದೆ.

ಹೊಸ ಸೀಸನ್‌ಗಾಗಿ ಮನೆಯ ವಿನ್ಯಾಸ, ಹೊಸ ನಿಯಮಗಳನ್ನು ತರಲು ಪ್ಲ್ಯಾನ್ ಮಾಡಲಾಗಿದೆ. ಈ ಹಿಂದಿನ ಟಾಸ್ಕ್‌ಗಳ ಬದಲು ಹೊಸ ಬಗೆಯ ಟಾಸ್ಕ್‌ಗಳನ್ನು ಸೀಸನ್ 7ರಲ್ಲಿ ನೋಡಬಹುದು. ಬಹುಭಾಷೆಗಳಲ್ಲಿ ಬಿಗ್ ಬಾಸ್ ಮೂಡಿ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ ಮುಗಿದಿತ್ತು. ಸುದೀಪ್(Sudeep) ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಈಗ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಸಕಲ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದ್ದಾರೆ ಟೀಮ್​ ಇಂಡಿಯಾ ಕ್ರಿಕೆಟಿಗ

ಈಗಾಗಲೇ ಕೆಲ ಸ್ಪರ್ಧಿಗಳು ತೆಲುಗು ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ವದಂತಿ ಹರಡುತ್ತಿದೆ. ಇದರ ಜತೆಗೆ ಹಿಂದಿನ ಸೀಸನ್‌ನ ಕೆಲ ಸ್ಪರ್ಧಿಗಳು ಕೂಡ ಈ ಶೋನಲ್ಲಿ ಇರಲಿದ್ದಾರೆ ಎನ್ನಲಾಗಿದೆ.

Exit mobile version