ಬೆಂಗಳೂರು: ತೆಲುಗು ಬಿಗ್ ಬಾಸ್ ಸೀಸನ್ 6ರಲ್ಲಿ (Bigg Boss Telugu) ಎಲ್ ವಿ ರೇವಂತ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ತೆಲುಗು ಬಿಗ್ ಬಾಸ್ ಅಂತ್ಯವಾದ ಬೆನ್ನಲ್ಲೇ ಇದೀಗ ನಟ ನಾಗಾರ್ಜುನ್ ಬಿಗ್ ಬಾಸ್ ಶೋನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಸೀಸನ್ 6ರಲ್ಲಿ ನಟ ನಾಗಾರ್ಜುನ್ ನಿರೂಪಣೆಯಲ್ಲಿ ಬಿಗ್ ಬಾಸ್ ಅದ್ಭುತವಾಗಿ ಮೂಡಿ ಬಂದಿತ್ತು.
ಬಿಗ್ಬಾಸ್ ನಿರೂಪಣೆಗೆ ನಟ ನಾಗಾರ್ಜುನ್ ವಿದಾಯ ಹೇಳಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಾಯೋಜಕರು ಅಥವಾ ನಾಗಾರ್ಜುನ್ ಕಡೆಯಿಂದ ಬಂದಿಲ್ಲ. ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ, ನಾಗಾರ್ಜುನ್ ಅವರ ಸ್ಥಾನಕ್ಕೆ ರಾಣಾ ದಗ್ಗುಬಾಟಿ ಅಥವಾ ವಿಜಯ್ ದೇವರಕೊಂಡ ಅವರನ್ನು ಕರೆತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿಂದೆ ಜ್ಯೂ.ಎನ್ಟಿಆರ್ ಮತ್ತು ನಾನಿ ಕೂಡ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದರು.
ಇದನ್ನೂ ಓದಿ | Bigg Boss Telugu 6 | ತೆಲುಗು ಬಿಗ್ ಬಾಸ್ ಸೀಸನ್ 6ರ ವಿಜೇತ ಯಾರು?
ಭಾನುವಾರ ಡಿಸೆಂಬರ್ 18ರಂದು ನಡೆದ ಫಿನಾಲೆಯಲ್ಲಿ ನಟ ನಾಗಾರ್ಜುನ ಅವರು ಸೀಸನ್ 6ರ ವಿಜೇತರನ್ನು ಘೋಷಿಸಿದ್ದರು. ಫಿನಾಲೆಗೆ ಗಾಯಕ ಶ್ರಿಹಾನ್, ಆದಿ ರೆಡ್ಡಿ, ಕೀರ್ತಿ ಭಟ್, ರೋಹಿತ್ ಶನಿ ಹಾಗೂ ರೇವಂತ್ ಬಂದಿದ್ದರು. ರೇವಂತ್ ಅವರಿಗೆ 10 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಸೈಟ್ ಸೇರಿದಂತೆ ಐಷಾರಾಮಿ ಕಾರನ್ನು ನೀಡಲಾಗಿದೆ.
ಇದನ್ನೂ ಓದಿ | Brand story | ಬಿಗ್ ಬಾಸ್, ಬಿಗ್ ಕಾಸ್, ಬಿಗ್ ಸಕ್ಸಸ್!