Site icon Vistara News

Kajal Aggarwal: ಸೆಲ್ಫಿ ನೆಪದಲ್ಲಿ ನಟಿ ಕಾಜಲ್ ಸೊಂಟ ಮುಟ್ಟಿದ ವ್ಯಕ್ತಿ: ವಿಡಿಯೊ ವೈರಲ್‌!

Kajal Aggarwal gets upset after a man touches her inappropriately

ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಂದೆ ವಿನಯ್ ಅವರೊಂದಿಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಅಭಿಮಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸುವಾಗ ನಟಿಯ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಫೋಟೊ ಕ್ಲಿಕ್ಕಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಕಾಜಲ್​ ಅವರನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆಗಿದ್ದೇನು?

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಮಳಿಗೆಯೊಂದರ ಲಾಂಚ್ ಕಾರ್ಯಕ್ರಮದಲ್ಲಿ ಕಾಜಲ್ ಭಾಗವಹಿಸಿದ್ದರು. ಈ ವೇಳೆ ಕಾಜಲ್​ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಬಂದ ವ್ಯಕ್ತಿಯೊಬ್ಬನು ಕಾಜಲ್​ ಅವರನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಚಿತ್ರವನ್ನು ಕ್ಲಿಕ್ ಮಾಡುವಾಗ ನಟಿಯ ಸೊಂಟವನ್ನು ವ್ಯಕ್ತಿ ಹಿಡಿದಿರುವುದನ್ನು ಕಾಣಬಹುದು. ಕಾಜಲ್ ತನ್ನಿಂದ ದೂರವಿರುವಂತೆ ಸನ್ನೆ ಮಾಡುತ್ತ ಇರುವುದು ಕಂಡು ಬಂದಿದೆ. ನಟಿಯರಿಗೆ ಈ ರೀತಿ ಮುಜುಗರ ಆಗುವಂತಹ ಘಟನೆ ನಡೆದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ನಟಿ ಅಪರ್ಣಾ ಬಾಲಮುರಳಿ ಅವರಿಗೂ ಇದೇ ರೀತಿ ಆಗಿತ್ತು. ಸಾರಾ ಅಲಿ ಖಾನ್, ಅಹನಾ ಕುಮಾರ್ ಕೂಡ ಈ ಸಮಸ್ಯೆಗೆ ಗುರಿಯಾಗಿದ್ದರು. ಕಾಜಲ್ ಶೀಘ್ರದಲ್ಲೇ ತೆಲುಗು ಚಿತ್ರ ʻಸತ್ಯಭಾಮʼ ಮತ್ತು ತಮಿಳು ಚಿತ್ರ ʻಇಂಡಿಯನ್ 2ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸತ್ಯಭಾಮಾ ಚಿತ್ರದಲ್ಲಿ ರಾಜಕಾರಣಿಗೆ ಸಂಬಂಧಿಸಿದ ಕೊಲೆ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಆ್ಯಕ್ಷನ್‌ ಸೀಕ್ವೆನ್ಸ್, ಛಾಯಾಗ್ರಹಣ ಮತ್ತು ಶ್ರೀ ಚರಣ್ ಪಕಾಲ ಅವರ ಸಂಗೀತ ಸಂಯೋಜನೆ ಇದೆ. ಈ ಚಿತ್ರವನ್ನು ಅಖಿಲ್ ದೇಗಲ ನಿರ್ದೇಶಿಸಿದ್ದಾರೆ ಮತ್ತು ಶಶಿ ಕಿರಣ್ ಟಿಕ್ಕಾ ಅವರ ಚಿತ್ರಕಥೆಯನ್ನು ಒಳಗೊಂಡಿದೆ. ಸತ್ಯಭಾಮಾ ಒಂದು ಕ್ರೈಮ್ ಥ್ರಿಲ್ಲರ್‌ ಸಿನಿಮಾ. ಈ ಚಿತ್ರವನ್ನು ಔರಂ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಾಬಿ ಟಿಕ್ಕಾ ಮತ್ತು ಶ್ರೀನಿವಾಸ್ ರಾವ್ ಟಕ್ಕಲಪೆಲ್ಲಿ ನಿರ್ಮಿಸಿದ್ದಾರೆ. ಮಹಿಳಾ ಕೇಂದ್ರಿತ ಚಲನಚಿತ್ರದಂತೆ ಕಾಣುತ್ತದೆ. ನವೀನ್ ಚಂದ್ರ, ಪ್ರಕಾಶ್ ರಾಜ್, ನಾಗಿನೀಡು, ಹರ್ಷವರ್ಧನ್, ರವಿವರ್ಮ ಮತ್ತು ಅಂಕಿತ್ ಕೊಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Kajal Aggarwal: ಕಾಜಲ್ ಅಗರ್ವಾಲ್‌ ಜನುಮದಿನಕ್ಕೆ ಸತ್ಯಭಾಮಾ, ಭಗವಂತ ಕೇಸರಿ ತಂಡದಿಂದ ಭರ್ಜರಿ ಗಿಫ್ಟ್‌

ನಿರ್ದೇಶಕ ಶಂಕರ್ ಅವರ ಇಂಡಿಯನ್‌ 2 ನಲ್ಲಿ ಕಾಜಲ್ ಅಗರ್ವಾಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ಧಾರ್ಥ್ ಮತ್ತು ರಾಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ತಮಿಳಿನ ಭಯಾನಕ ಚಲನಚಿತ್ರ ಕರುಂಗಾಪಿಯಂನಲ್ಲಿ ಕಾಣಿಸಿಕೊಂಡರು.

Exit mobile version