Site icon Vistara News

Khushbu Sundar: ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾದ ʻರಣಧೀರʼ ನಟಿ ಖುಷ್ಬು ಸುಂದರ್‌

Khushbu Sundar hospitalised due to high fever

ಬೆಂಗಳೂರು: ನಟಿ ಖುಷ್ಬು ಸುಂದರ್‌ (Khushbu Sundar) ತೀವ್ರ ಜ್ವರ ಹಾಗೂ ನೋವಿನಿಂದ ಬಳಲುತ್ತಿದ್ದಾರೆ. ಅರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖುಷ್ಬು ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಮತ್ತು ಪವನ್ ಕಲ್ಯಾಣ್ ಅವರಂತಹ ಟಾಪ್ ಸ್ಟಾರ್‌ಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಂಡ ಇವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಖುಷ್ಬು ಅವರು ಆಸ್ಪತ್ರೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆರೋಗ್ಯದ ಎಚ್ಚರಿಕೆ ವಹಿಸಿ, ನಿರ್ಲಕ್ಷಿಸದಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ʻʻವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನ್ನನ್ನು ಕೊಲ್ಲುತ್ತಿದೆ. ಅದು ನನ್ನ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಜ್ವರ, ದೇಹದ ನೋವು ಮತ್ತು ದೌರ್ಬಲ್ಯದಿಂದ ಸಾಯುವಂತೆ ಆಗುತ್ತಿದೆ. ನಾನು ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯ ನಿರ್ಲಕ್ಷಿಸಬೇಡಿ ಎಂದುʼʼ ಖುಷ್ಟು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಖುಷ್ಬು ಟ್ವೀಟ್‌

ಹಿರಿಯ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ. ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಾನು ಹುಷಾರಾಗಿದ್ದೇನೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರ ಜತೆ ಯಶಸ್ವಿ ನಿರ್ಮಾಪಕಿ ಕೂಡ ಆಗಿದ್ದಾರೆ, ಉದ್ಯಮಿ ಮತ್ತು ರಾಜಕಾರಣಿಯಾಗಿಯೂ ಜನಪ್ರಿಯರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಟಿ 20 ಕೆಜಿ ತೂಕ ಇಳಿಸಿದ ನಂತರ ಸುದ್ದಿಯಲ್ಲಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಬೆನ್ನಲ್ಲೇ ವೈರಲ್ ಆಗ್ತಿದೆ ಬಿಜೆಪಿ ನಾಯಕಿ ಖುಷ್ಬು ಹಳೇ ಟ್ವೀಟ್​; ಶಿಕ್ಷೆ ಇಲ್ವಾ ಎನ್ನುತ್ತಿದ್ದಾರೆ ಕಾಂಗ್ರೆಸ್​ ನಾಯಕರು

https://twitter.com/khushsundar/status/1644230692115746816?s=20

ವಿಜಯ್ ಅಭಿನಯದ ವಾರಿಸು ಚಿತ್ರದಲ್ಲಿ ನಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ವಂಶಿ ಪಡಿಪಲ್ಲಿ ನಿರ್ದೇಶಿಸಿದ್ದಾರೆ.

Exit mobile version