ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಜಪಾನ್‌ನಲ್ಲಿದ್ದಾರೆ. ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಕ್ರಂಚೈರೋಲ್ ಅನಿಮೆ ಅವಾರ್ಡ್ಸ್’ 2024 ರಲ್ಲಿ (Crunchyroll Anime Awards) ಭಾರತವನ್ನು ಪ್ರತಿನಿಧಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಟೋಕಿಯೋ ವಿಮಾನ ನಿಲ್ದಾಣದಲ್ಲಿ ಹೋಗಿ ಇಳಿದ ತಕ್ಷಣ, ಅಲ್ಲಿನ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಅಷ್ಟೇ ಅಲ್ಲ ಜಪಾನ್‌ನಲ್ಲಿ ರಶ್ಮಿಕಾ ಪೋಸ್ ಕೊಟ್ಟು ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ರಶ್ಮಿಕಾ ಅವರ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಪಾನ್ ಅಭಿಮಾನಿಗಳು ತಮ್ಮ ಮೇಲೆ ತೋರಿದ ಪ್ರೀತಿಗೆ ರಶ್ಮಿಕಾ ಸಂತಸ ಮಂದಣ್ಣ ವ್ಯಕ್ತಪಡಿಸಿದ್ದಾರೆ. ಕೆಲಹೊತ್ತು ಅದನ್ನು ನೋಡುತ್ತಾ ನಿಂತು ಬಿಟ್ಟಿದ್ದಾರೆ. ಬಳಿಕ ಥ್ಯಾಂಕ್ಸ್ ಎಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಇಂದು (ಮಾರ್ಚ್ 2) ಟೋಕಿಯೊದಲ್ಲಿ ‘ಕ್ರಂಚೈರೋಲ್ ಅನಿಮೆ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ನಟರು ಹಾಗೂ ಗಾಯಕರು ಆಗಮಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಹೊಸ ಪಿಆರ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಈ ತಂಡ ಮುಂಬೈ ಮೂಲದ್ದು. ಪಿಆರ್ ಏಜಿನ್ಸಿ ಅವರೇ ರಶ್ಮಿಕಾ ಮಂದಣ್ಣ ಅವರಿಗೆ ಈ ಅವಕಾಶ ಬರುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Rashmika Mandanna: ಧನುಷ್ -ರಶ್ಮಿಕಾ ಅಭಿನಯದ ಸಿನಿಮಾವೊಂದರ ದೃಶ್ಯ ಲೀಕ್!
ರಶ್ಮಿಕಾ ಮಂದಣ್ಣ ಅವರು ತಮ್ಮ ಪ್ಯಾಕ್ಡ್ ಶೆಡ್ಯೂಲ್‌ನಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಧುನುಷ್ ಅವರ ಜತೆ DNS (D51) ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ವರದಿಯ ಪ್ರಕಾರ ಇದೊಂದು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.
ಶ್ರೀವೆಂಕಟೇಶ್ವರ ಸಿನಿಮಾಸ್ ಮತ್ತು ಒಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ.