Rashmika Mandanna: ಜಪಾನ್‌ನಲ್ಲಿ ಮಿಂಚಿದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ! - Vistara News

ಟಾಲಿವುಡ್

Rashmika Mandanna: ಜಪಾನ್‌ನಲ್ಲಿ ಮಿಂಚಿದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ!

Rashmika Mandanna: ಜಪಾನ್‌ನಲ್ಲಿ ರಶ್ಮಿಕಾ ಪೋಸ್‌ ಕೊಟ್ಟು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದೀಗ ರಶ್ಮಿಕಾ ಅವರ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Rashmika Mandanna jets off to Tokyo to attend ceremony
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಜಪಾನ್‌ನಲ್ಲಿದ್ದಾರೆ. ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಕ್ರಂಚೈರೋಲ್ ಅನಿಮೆ ಅವಾರ್ಡ್ಸ್’ 2024 ರಲ್ಲಿ (Crunchyroll Anime Awards) ಭಾರತವನ್ನು ಪ್ರತಿನಿಧಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಟೋಕಿಯೋ ವಿಮಾನ ನಿಲ್ದಾಣದಲ್ಲಿ ಹೋಗಿ ಇಳಿದ ತಕ್ಷಣ, ಅಲ್ಲಿನ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಅಷ್ಟೇ ಅಲ್ಲ ಜಪಾನ್‌ನಲ್ಲಿ ರಶ್ಮಿಕಾ ಪೋಸ್‌ ಕೊಟ್ಟು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದೀಗ ರಶ್ಮಿಕಾ ಅವರ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜಪಾನ್ ಅಭಿಮಾನಿಗಳು ತಮ್ಮ ಮೇಲೆ ತೋರಿದ ಪ್ರೀತಿಗೆ ರಶ್ಮಿಕಾ ಸಂತಸ ಮಂದಣ್ಣ ವ್ಯಕ್ತಪಡಿಸಿದ್ದಾರೆ. ಕೆಲಹೊತ್ತು ಅದನ್ನು ನೋಡುತ್ತಾ ನಿಂತು ಬಿಟ್ಟಿದ್ದಾರೆ. ಬಳಿಕ ಥ್ಯಾಂಕ್ಸ್ ಎಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಇಂದು (ಮಾರ್ಚ್ 2) ಟೋಕಿಯೊದಲ್ಲಿ ‘ಕ್ರಂಚೈರೋಲ್ ಅನಿಮೆ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ನಟರು ಹಾಗೂ ಗಾಯಕರು ಆಗಮಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಹೊಸ ಪಿಆರ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಈ ತಂಡ ಮುಂಬೈ ಮೂಲದ್ದು. ಪಿಆರ್ ಏಜಿನ್ಸಿ ಅವರೇ ರಶ್ಮಿಕಾ ಮಂದಣ್ಣ ಅವರಿಗೆ ಈ ಅವಕಾಶ ಬರುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rashmika Mandanna: ಧನುಷ್‌ -ರಶ್ಮಿಕಾ ಅಭಿನಯದ ಸಿನಿಮಾವೊಂದರ ದೃಶ್ಯ ಲೀಕ್‌!

ರಶ್ಮಿಕಾ ಮಂದಣ್ಣ ಅವರು ತಮ್ಮ ಪ್ಯಾಕ್ಡ್ ಶೆಡ್ಯೂಲ್‌ನಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಧುನುಷ್‌ ಅವರ ಜತೆ DNS (D51) ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ವರದಿಯ ಪ್ರಕಾರ ಇದೊಂದು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.

ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Jerusha Christopher: ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ʻವೀರ ಮದಕರಿʼ ಬಾಲನಟಿ ನಾಯಕಿ!

Jerusha Christopher: ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇದೀಗ ಹೊಸ ಸಮಾಚಾರ ಏನಂದರೆ ಈ ಚಿತ್ರದ ಮೂಲಕ ಮತ್ತೊಬ್ಬ ಯುವ ನಟಿಯನ್ನು ಲಾಂಚ್ ಮಾಡುತ್ತಿದ್ದಾರೆ ಮಹೇಶ್. ಇತ್ತೀಚೆಗಷ್ಟೇ `ಅಪರೂಪ’ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದ ಅವರೀಗ (Jerusha Christopher) ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಸಿನಿಮಾಪ್ರೇಮಿಗಳ ಎದುರು ತರುತ್ತಿದ್ದಾರೆ.

VISTARANEWS.COM


on

Jerusha Christopher In mahesh Babu Movie
Koo

ಬೆಂಗಳೂರು: ಮಹೇಶ್ ಬಾಬು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ʻಆಕಾಶ್ʼ, ʻಅರಸುʼ, ʻಪರಮೇಶ ಪಾನ್ ವಾಲʼ ಮುಂತಾದ ಸ್ಟಾರ್ ಸಿನಿಮಾಗಳನ್ನು ಮಾಡಿರುವ ಅವರು, ಈಗ ಮತ್ತೊಂದು ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ `ಅಪರೂಪ’ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದ ಅವರೀಗ (Jerusha Christopher) ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಸಿನಿಮಾಪ್ರೇಮಿಗಳ ಎದುರು ತರುತ್ತಿದ್ದಾರೆ.

ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇದೀಗ ಹೊಸ ಸಮಾಚಾರ ಏನಂದರೆ ಈ ಚಿತ್ರದ ಮೂಲಕ ಮತ್ತೊಬ್ಬ ಯುವ ನಟಿಯನ್ನು ಲಾಂಚ್ ಮಾಡುತ್ತಿದ್ದಾರೆ ಮಹೇಶ್. `ಮೆರವಣಿಗೆ’ ಸಿನಿಮಾ ಮೂಲಕ ಐಂದ್ರಿತಾ ರೇ , ಚಿರು ಸಿನಿಮಾ ಮೂಲಕ ಕೃತಿ ಕರಬಂದ, `ಅಜಿತ್ ಚಿತ್ರ’ದ ಮೂಲಕ ನಿಕ್ಕಿ ಗಲ್ರಾನಿ , ಕ್ರೇಜಿ ಬಾಯ್ ಮೂಲಕ ಆಶಿಕಾ ರಂಗನಾಥ್ ಮತ್ತು ಅಪರೂಪದ ಮೂಲಕ ಹೃತಿಕಾ ಶ್ರೀನಿವಾಸ್ ಹೀಗೆ ಹಲವಾರು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮಹೇಶ್ ಬಾಬು ಇದೀಗ ಹೊಸ ಮುಖ ಜೆರುಶಾರನ್ನು ನಾಯಕಿಯಾಗಿ ಲಾಂಚ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna : ಮಹೇಶ್ ಬಾಬು ಫೋಟೊಗೆ ಹೋಲಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್‌ ಏನು?

ಅಂದಹಾಗೇ ಜೆರುಶಾ ಕ್ಯಾಮೆರಾ ಹೊಸದೇನಲ್ಲ. ಈಗಾಗಲೇ ಸುದೀಪ್ ಅಭಿನಯದ ʻವೀರ ಮದಕರಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಜಾಹೀರಾತುಗಳು ಮತ್ತು ರಂಗಭೂಮಿ ಹಿನ್ನೆಲೆ ಹೊಂದಿರುವ ಜೆರುಶಾ ಇದೀಗ ಮಹೇಶ್ ಬಾಬು ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳಲು ಹೆಸರಾಗಿರುವ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಮಹೇಶ್ ಬಾಬು ಅವರು ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಆಯ್ಕೆಯಲ್ಲಿ ತೊಡಗಿದ್ದು, ಅದರ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.

ಮಹೇಶ್ ಬಾಬು ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣವಿರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

Continue Reading

ಟಾಲಿವುಡ್

Mrunal Thakur: ಸಿದ್ಧಾಂತ್ ಚತುರ್ವೇದಿ ಜತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್‌!

Mrunal Thakur: ದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ಮುಂದಿನ ಚಿತ್ರಕ್ಕೆ ಮೃಣಾಲ್ ಠಾಕೂರ್ (Mrunal Thakur) ಮತ್ತು ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ನಟಿಸುತ್ತಿದ್ದಾರೆ.

VISTARANEWS.COM


on

Mrunal Thakur and Siddhant Chaturvedi to start shoot
Koo

ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ಮುಂದಿನ ಚಿತ್ರಕ್ಕೆ ಮೃಣಾಲ್ ಠಾಕೂರ್ (Mrunal Thakur) ಮತ್ತು ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ನಟಿಸುತ್ತಿದ್ದಾರೆ. ಮುಂದಿನ ವಾರ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ವರದಿಯಾಗಿದೆ. ʻಸೀತಾರಾಮಂʼ, ʻಹಾಯ್ ನಾನ್ನʼ, ʻಫ್ಯಾಮಿಲಿ ಸ್ಟಾರ್ʼ ಚಿತ್ರದ ಸಕ್ಸೆಸ್‌ ನಂತರ ಮೃಣಾಲ್ ಮತ್ತೆ ಹವಾ ಕ್ರಿಯೇಟ್ ಮಾಡಲಿದ್ದಾರೆ. ಮೃಣಾಲ್‌ ಮತ್ತು ಸಿದ್ಧಾಂತ್ ಮುಂದಿನ ವಾರ ಮುಂಬೈನಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಏಪ್ರಿಲ್ ಮೊದಲ ವಾರದಿಂದಲೇ ರವಿ ಉದ್ಯಾವರ್ ಅವರೊಂದಿಗೆ ಕಾರ್ಯಾಗಾರಗಳಿಗೆ ಭಾಗಿಯಾಗಿದ್ದರು. ಉದ್ಯಾವರ್ ಈ ಹಿಂದೆ ದಿವಂಗತ ನಟಿ ಶ್ರೀದೇವಿ ಅಭಿನಯದ MoM (2017) ಚಿತ್ರವನ್ನು ನಿರ್ದೇಶಿಸಿದ್ದರು. ಕೆಲವು ಮೂಲಗಳ ಪ್ರಕಾರ ‘ಲವ್ ಆ್ಯಂಡ್ ವಾರ್’ ಸಿನಿಮಾ ಬಳಿಕ ಬನ್ಸಾಲಿ ಈ ಸಿನಿಮಾದ ಚಿತ್ರೀಕರಣವನ್ನು ಮುಗಿಸುವ ಪ್ಲ್ಯಾನ್‌ನಲ್ಲಿದ್ದಾರೆ.

ಇದನ್ನೂ ಓದಿ: Mrunal Thakur: ಕೈ ಕೈ ಹಿಡಿದುಕೊಂಡ ಮೃಣಾಲ್ ಠಾಕೂರ್- ಬಾದ್‌ಶಾ; ಡೇಟಿಂಗ್ ಇರಬಹುದಾ?

ಬನ್ಸಾಲಿಯ ‘ಲವ್ ಆ್ಯಂಡ್ ವಾರ್’ಗೆ 1964ರ ಹಿಟ್‌ ಸಿನಿಮಾದಿಂದ ಸ್ಫೂರ್ತಿ!

ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್‌ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. ಈಗ ಈ ‘ಲವ್ ಆ್ಯಂಡ್ ವಾರ್’ ನಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್‌ ನಟಿಸಲಿದ್ದಾರೆ.

ಈ ‘ಲವ್ ಆ್ಯಂಡ್ ವಾರ್’ ಸಿನಿಮಾ ʻಸಂಗಮ್‌ʼ ರಿಮೇಕ್‌ ಎಂದು ಬಹಳ ಹಿಂದೆಯೇ ವರದಿಯಾಗಿತ್ತು. ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಬನ್ಸಾಲಿಯವರ ‘ಲವ್ ಆ್ಯಂಡ್ ವಾರ್’ ಸಿನಿಮಾ ಒಂದು ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವರದಿಯಾಗಿದೆ. ಮಾತ್ರವಲ್ಲ 1964ರ ಚಲನಚಿತ್ರ ʻಸಂಗಮ್‌ʼ ಸಿನಿಮಾದಿಂದ ಸ್ಫೂರ್ತಿ ಪಡೆದ ‘ಲವ್ ಆ್ಯಂಡ್ ವಾರ್’ ಆಧುನಿಕ ಕಾಲದ ಚಿತ್ರಕಥೆ ಹೊಂದಿರಲಿದೆ ಎಂದು ವರದಿಯಾಗಿದೆ.

ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ದೃಢಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

Continue Reading

South Cinema

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

Mahesh Babu: ವೈರಲ್‌ ಆದ ವಿಡಿಯೊದಲ್ಲಿ ಮಹೇಶ್ ಕಪ್ಪು ಮತ್ತು ಬಿಳಿ ಜಾಕೆಟ್‌ನಲ್ಲಿ ಬೂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಕಾಣಿಸಿಕೊಂಡಿದ್ದರು. ಮಹೇಶ್​ ಬಾಬು ಅವರು ವಿಶೇಷ ತರಬೇತಿ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದುಬೈನಿಂದ ಮಹೇಶ್‌ ಬಾಬು ಅವರು ವಾಪಸ್​ ಹೈದರಾಬಾದ್​ಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ದುಬೈನಿಂದ ಶೂಟಿಂಗ್‌ ಮುಗಿಸಿ ವಾಪಸ್‌ ಬರುವಾಗ ಮಹೇಶ್‌ ಬಾಬು ಅವರ ಲುಕ್‌ ಬಹಿರಂಗವಾಗಿದೆ.

VISTARANEWS.COM


on

Mahesh Babu SS Rajamouli return from Dubai
Koo

ಬೆಂಗಳೂರು: ಟಾಲಿವುಡ್‌ ನಟ ಮಹೇಶ್‌ ಬಾಬು (Mahesh Babu) ಹಾಗೂ ನಿರ್ದೇಶಕ ರಾಜಮೌಳಿ (SS Rajamouli) ಅವರು ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ದುಬೈನಿಂದ ಶೂಟಿಂಗ್‌ ಮುಗಿಸಿ ವಾಪಸ್‌ ಬರುವಾಗ ಮಹೇಶ್‌ ಬಾಬು ಅವರ ಲುಕ್‌ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಮಹೇಶ್‌ ಬಾಬು ಅವರ ಲುಕ್‌ ಡಿಫ್‌ರೆಂಟ್‌ ಆಗಿರಲಿದೆ ಎಂದು ಈ ಮುಂಚೆ ರಾಜಮೌಳಿ ಅವರು ಹೇಳಿದ್ದರು. ಆ ಲುಕ್​ ಬಹಿರಂಗ ಆಗಬಾರದು ಎಂಬುದು ರಾಜಮೌಳಿ ಅವರ ಉದ್ದೇಶ ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಈಗ ಮಹೇಶ್​ ಬಾಬು ಅವರು ಹೊಸ ಗೆಟಪ್​ ಬಹಿರಂಗ ಆಗಿದೆ.

ವೈರಲ್‌ ಆದ ವಿಡಿಯೊದಲ್ಲಿ ಮಹೇಶ್ ಕಪ್ಪು ಮತ್ತು ಬಿಳಿ ಜಾಕೆಟ್‌ನಲ್ಲಿ ಬೂದು ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಕಾಣಿಸಿಕೊಂಡಿದ್ದರು. ಮಹೇಶ್​ ಬಾಬು ಅವರು ವಿಶೇಷ ತರಬೇತಿ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದುಬೈನಿಂದ ಮಹೇಶ್‌ ಬಾಬು ಅವರು ವಾಪಸ್​ ಹೈದರಾಬಾದ್​ಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದ ಪಾತ್ರಕ್ಕಾಗಿ ಅವರು ಕೂದಲು ಬೆಳೆಸಿದ್ದಾರೆ ಎಂದು ವರದಿಯಾಗಿದೆ. ರಾಜಮೌಳಿ ಇತ್ತೀಚೆಗೆ ಆರ್‌ಆರ್‌ಆರ್ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ಗೆ ಬಂದಿದ್ದರು.

ಇದನ್ನೂ ಓದಿ: Mahesh Babu: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತ ಎಲ್ಲಿ? ಯಾವಾಗ?

ಎಸ್‌ಎಸ್ ರಾಜಮೌಳಿ (SS Rajamouli) ಅವರು ಪತ್ನಿ ರಮಾ ರಾಜಮೌಳಿ ಅವರೊಂದಿಗೆ ಮಾರ್ಚ್ 18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ ಪ್ರದರ್ಶನಕ್ಕೆ ಹಾಜರಾಗಿದ್ದರು. ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದರು. ಅಭಿಮಾನಿಗಳೊಂದಿಗೆ ಸಂವಾದದ ಸಮಯದಲ್ಲಿ, ಅವರು ಮಹೇಶ್ ಬಾಬು ಅವರೊಂದಿಗಿನ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದರು.

ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಮುಖ್ಯ ನಾಯಕ, ಅಂದರೆ ಮಹೇಶ್‌ ಬಾಬು ಅವರು ಮಾತ್ರ ಫಿಕ್ಸ್‌ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆʼʼ ಎಂದಿದ್ದರು

2022ರಲ್ಲಿ ತೆರೆಕಂಡ ʼಆರ್‌.ಆರ್‌.ಆರ್‌.ʼ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರು ಈ ಚಿತ್ರಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ದಾಖಲೆ ಬರೆದ ʼಬಾಹುಬಲಿʼ, ʼಬಾಹುಬಲಿ 2ʼ, ʼಆರ್‌.ಆರ್‌.ಆರ್‌.ʼ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್‌ ಅವರೇ ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದ ಬರವಣಿಗೆಯಲ್ಲಿ ತೊಡಗಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ. ಇತ್ತೀಚೆಗೆ ತೆರೆಕಂಡ ಮಹೇಶ್‌ ಬಾಬು ಅಭಿನಯದ ʼಗುಂಟೂರು ಖಾರಂʼ ಸಿನಿಮಾ ಸಾಧಾರಣ ಗೆಲುವು ದಾಖಲಿಸಿದೆ. ಹೀಗಾಗಿ ಅವರು ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದತ್ತ ಗಮನ ಹರಿಸಿದ್ದಾರೆ.

Continue Reading

ಟಾಲಿವುಡ್

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Teja Sajja: ಮಿರಾಯ್ʼ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

VISTARANEWS.COM


on

Teja Sajja Hanuman Movie Feme Mirai announce
Koo

ಬೆಂಗಳೂರು: ʻಹನುಮಾನ್ʼ ಸಿನಿಮಾ (Hanuman Movie) ಮೂಲಕ ಸೂಪರ್ ಸಕ್ಸೆಸ್‌ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ (Teja Sajja) ಹೊಸ ಸಿನಿಮಾ ಅನೌನ್ಸ್ ಆಗಿದೆ. ʻಕಾರ್ತಿಕೇಯʼ, ʻಕಾರ್ತಿಕೇಯ-2ʼ , `ಧಮಾಕ’ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ  ಅವರು ತೇಜ್ ಸಜ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಅನಾವರಣಗೊಂಡಿದೆ.

ʻಹನುಮಾನ್ʼನಲ್ಲಿ ಸೂಪರ್ ಹೀರೊ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ ʻಮಿರಾಯ್ʼ ಎಂಬ ಟೈಟಲ್ ಇಡಲಾಗಿದೆ. ʻಮಿರಾಯ್ʼ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.

ʻಮಿರಾಯ್ʼ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: Hanuman Chalisa: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ FIR;‌ ಪಾಕಿಸ್ತಾನವನ್ನು ಆಳುತ್ತಿದ್ದೀರಾ ಎಂದು ಸಿಎಂಗೆ ಜೋಶಿ ಪ್ರಶ್ನೆ

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್ ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರ್ತಿರುವ ಮರೈ ಸಿನಿಮಾವನ್ನು 2025ರ ಏಪ್ರಿಲ್ 18ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Continue Reading
Advertisement
Yuzvendra Chahal
ಪ್ರಮುಖ ಸುದ್ದಿ14 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Three boys drown
ಕರ್ನಾಟಕ20 mins ago

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Fraud case
ಬೆಂಗಳೂರು24 mins ago

Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

Uttarakaanda Movie
ಸಿನಿಮಾ25 mins ago

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Lok Sabha Election 2024 BJP released Pick pocket Congress poster
Lok Sabha Election 202436 mins ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Match Fixing
ಕ್ರೀಡೆ38 mins ago

Match Fixing : ಇರ್ಫಾನ್​ ಪಠಾಣ್​, ಸುರೇಶ್ ರೈನಾ ಪಾಲ್ಗೊಂಡಿದ್ದ ​ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್?

Ballari lok sabha constituency congress candidate e Tukaram election campaign in Ballari city
ಬಳ್ಳಾರಿ41 mins ago

Lok Sabha Election 2024: ಪಂಚ ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ: ಈ.ತುಕಾರಾಂ

Murugha Seer
ಕರ್ನಾಟಕ44 mins ago

Murugha Seer: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ; 4 ತಿಂಗಳು ಜೈಲಿಗೆ

T20 World Cup 2024
ಕ್ರಿಕೆಟ್53 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ಮುಹೂರ್ತ ಫಿಕ್ಸ್‌​; ಈ ದಿನ ಘೋಷಣೆ

BrahMos Missiles
ಪ್ರಮುಖ ಸುದ್ದಿ1 hour ago

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು23 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌