Site icon Vistara News

SS Rajamouli: ಹೆಂಡತಿ ಜತೆ ರಾಜಮೌಳಿ ಲವ್ಲಿ ಡ್ಯೂಯೆಟ್‌! ನೀವೆ ನೋಡಿ ಈ ಜೋಡಿಯ ಡ್ಯಾನ್ಸ್‌!

SS Rajamouli and his wife Rama dance

ಬೆಂಗಳೂರು: ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಮತ್ತು ಪತ್ನಿ ರಮಾ ರಾಜಮೌಳಿ (Rama Rajamouli) ಅವರು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಎಕ್ಸ್‌ನಲ್ಲಿ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಎಆರ್ ರೆಹಮಾನ್ ಸಂಯೋಜಿಸಿದ ಹಾಡಿಗೆ ದಂಪತಿ ಸಖತ್‌ ಡ್ಯಾನ್ಸ್ಸ್‌ ಮಾಡಿದ್ದಾರೆ. ʻಪ್ರೇಮಿಕುಡುʼ ಸಿನಿಮಾದ ʻಅಂದಮೈನಾ ಪ್ರೇಮರಾಣಿʼ ( Andamaina Premarani) ಹಾಡಿಗೆ ಈ ಜೋಡಿ ಡ್ಯಾನ್ಸ್‌ ಮಾಡಿದೆ. ಇದೀಗ ರಾಜಮೌಳಿ ಅವರ ಸ್ಟೆಪ್ಸ್‌ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಿಇಒ ಚೆರ್ರಿ ಅವರ ಮಗಳ ಸಂಗೀತ ಸಮಾರಂಭದ ಕ್ಲಿಪ್‌ ಇದು ಎನ್ನಲಾಗಿದೆ.

ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli ), ಅವರ ಮಗ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಯರ್ಲಗಡ್ಡ ಅವರು ಮಾರ್ಚ್ 21ರ ಗುರುವಾರ ಆರ್‌ಆರ್‌ಆರ್‌ನ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ನಲ್ಲಿದ್ದರು. ಈ ವೇಳೆ ಜಪಾನ್‌ನಲ್ಲಿ ನಡೆದ ತಮ್ಮ ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದರು. ಕಾರ್ತಿಕೇಯ ಅವರು ತಮ್ಮ ವಾಚ್‌ ಚಿತ್ರವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಭೂಕಂಪದ ತುರ್ತು ಎಚ್ಚರಿಕೆಯ ಮೆಸೇಜ್‌ ಶೇರ್‌ ಮಾಡಿಕೊಂಡಿದ್ದರು. “ಇದೀಗ ಜಪಾನ್‌ನಲ್ಲಿ ಭೂಕಂಪನದ ಅನುಭವ ಆಯ್ತು. ನಾವು 28ನೇ ಮಹಡಿಯಲ್ಲಿ ಇದ್ದೆವು. ಇದು ಭೂಕಂಪನ ಎಂದು ತಿಳಿದುಕೊಳ್ಳಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ನಾವೆಲ್ಲ ಭಯಭೀತರಾದರೂ ಜಪಾನಿಯರು ಸ್ವಲ್ಪವೂ ಕದಲಲಿಲ್ಲ!!ʼʼಎಂದು ಪೋಸ್ಟ್‌ನಲ್ಲಿ ರಾಜಮೌಳಿ ಮತ್ತು ಶೋಬು ಅವರನ್ನು ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ; SS Rajamouli: ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

ಎಸ್‌ಎಸ್ ರಾಜಮೌಳಿ (SS Rajamouli) ಅವರು ಪತ್ನಿ ರಮಾ ರಾಜಮೌಳಿ ಅವರೊಂದಿಗೆ ಮಾರ್ಚ್ 18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ ಪ್ರದರ್ಶನಕ್ಕೆ ಹಾಜರಾಗಿದ್ದರು. ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದರು.

ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಮುಖ್ಯ ನಾಯಕ, ಅಂದರೆ ಮಹೇಶ್‌ ಬಾಬು ಅವರು ಮಾತ್ರ ಫಿಕ್ಸ್‌ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆʼʼ ಎಂದರು.

ಸದ್ಯ ಚಿತ್ರಕ್ಕೆ ʼಎಸ್‌.ಎಸ್‌.ಬಿ.ಎಂ. 29ʼ (SSMB 29) ಎನ್ನುವ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಮೊದಲ ಬಾರಿಗೆ ಇಬ್ಬರು ಚಿತ್ರಕ್ಕಾಗಿ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಮತ್ತೊಂದು ಮುಖ್ಯ ಕಾರಣ.

Exit mobile version