Site icon Vistara News

Varalaxmi Sarathkumar: ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Varalaxmi Sarathkumar invites Rajinikanth for her wedding

ಬೆಂಗಳೂರು: ತಮಿಳು-ತೆಲುಗು ನಟಿ ವರಲಕ್ಷ್ಮಿ ಶರತ್‌ಕುಮಾರ್ (aralaxmi Sarathkumar) ಅವರು ತಮ್ಮ ಕುಟುಂಬದೊಂದಿಗೆ ರಜನಿಕಾಂತ್, ಹಾಗೂ ಅವರ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರನ್ನು ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಮದುವೆಗೆ ಆಹ್ವಾನಿಸಿದರು. ವರಲಕ್ಷ್ಮಿ ಶರತ್‌ಕುಮಾರ್ ಜತೆ ತಂದೆ ಶರತ್‌ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜತೆಗೆ ಇತ್ತು.

ಭೇಟಿಯ ಫೋಟೋಗಳನ್ನು ಹಂಚಿಕೊಂಡಿರುವ ವರಲಕ್ಷ್ಮಿ, “ನಮ್ಮ ತಲೈವರ್ ರಜಿನಿಕಾಂತ್ ಸರ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮತ್ತು ಲತಾ ಆಂಟಿ ಅವರನ್ನು ಮದುವೆ ಆಹ್ವಾನಿಸಿದೆ. ಧನ್ಯವಾದಗಳು ಸರ್ʼʼಎಂದು ಬರೆದುಕೊಂಡಿದ್ದಾರೆ.

ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ಇದನ್ನೂ ಓದಿ: Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ನಟ ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದರು.

aನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Exit mobile version