ಚೆನ್ನೈ: ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ವಿಜಯ್ ಆನಂದ್ (Vijay Anand) ಮಂಗಳವಾರ (ಫೆ.8) ಚೆನ್ನೈನಲ್ಲಿ ನಿಧನರಾದರು. 1982ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ, ಅವರು ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರ 1986ರ ಚಲನಚಿತ್ರ, ‘ನಾನ್ ಆದಿಮೈ ಇಲ್ಲೈ’ ಚಿತ್ರದಲ್ಲಿನ ‘ಒರು ಜೀವನನ್’ ಹಾಡು ವಿಜಯ್ ಅವರ ಅತ್ಯಂತ ಜನಪ್ರಿಯ ಸಂಯೋಜಿಸಿದ ಹಾಡಾಗಿತ್ತು. ಹಲವು ದಿನಗಳಿಂದ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ. ವಿಜಯ್ ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.
1982ರಲ್ಲಿ ವೃತ್ತಿ ಜೀವನ ಆರಂಭವಿಸಿದ್ದ ವಿಜಯ್, ನಾಲ್ಕು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಇಳಯರಾಜರಂತಹ ದಿಗ್ಗಜರ ಮಧ್ಯೆಯೂ ತಮ್ಮ ತನವನ್ನು ವಿಜಯ್ ಉಳಿಸಿಕೊಂಡು ಬಂದಿದ್ದರು. ವಿಜಯ್ ನಿಧನಕ್ಕೆ ಸಂಗೀತ ಕ್ಷೇತ್ರ ಕೂಡ ಕಂಬನಿ ಮಿಡಿದಿದೆ.
ತಮಿಳಿನಲ್ಲಿ, ವಿಜಯ್ ಆನಂದ್ ಅವರು ರಜನಿಕಾಂತ್ ಅವರ ‘ನಾನ್ ಆದಿಮೈ ಇಲ್ಲೈ’ ಹೊರತುಪಡಿಸಿ ‘ನಾನಯಂ ಇಲ್ಲತಾ ನಾನಯಂ'(Naanayam Illatha Naanayam) , ‘ವೆಟ್ರಿ ಮೆಲ್ ವೆಟ್ರಿ (Vettri Mel Vettri)’, ‘ವಾಯ್ ಸೊಲ್ಲಿಲ್ ವೀರರಡಿ (Vaai Sollil Veeraradi)’, ‘ಕವಲನ್ ಅವನ್ ಕೋವಲನ್ (Oorukku Ubathesam)’, ‘ಊರುಕ್ಕು ಉಭತೇಸಂ’ ಮತ್ತು ಇತರ ಅನೇಕ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ.