Site icon Vistara News

Spandana Vijay Raghavendra: ಬ್ಯಾಂಕಾಕ್‌ನಿಂದ ಇನ್ನೂ ಬರದ ಸ್ಪಂದನಾ ಶರೀರ, ಅಂತ್ಯಕ್ರಿಯೆಯೂ ತಡ

spandana Jyothishya

ಬೆಂಗಳೂರು: ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಪಾರ್ಥೀವ ಶರೀರ ಇಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಲಿದೆ. ಅಂತಿಮ ಕ್ರಿಯೆ ಎಲ್ಲಿ ನಡೆಸಬೇಕು ಎಂದು ಇನ್ನೂ ನಿರ್ಧಾರವಾಗಿಲ್ಲ.

ಇಂದು ಬೆಳಗ್ಗೆ ಸಹ ಬ್ಯಾಂಕಾಕ್‌ನಲ್ಲಿ ಈ ಬಗ್ಗೆ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಲಿವೆ. ಹೀಗಾಗಿ ಪಾರ್ಥಿವ ಶರೀರ ಹೊರಡಲು ಮಧ್ಯಾಹ್ನ ಆಗುವ ಸಾಧ್ಯತೆ ಇದೆ. ಮಧ್ಯಾಹ್ನ 2 ಘಂಟೆ ಒಳಗೆ ಎಲ್ಲಾ‌ ಪ್ರಕ್ರಿಯೆಗಳು ಮುಗಿದರೆ ಸಂಜೆ 6 ಘಂಟೆಗೆ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ. ಸ್ಪಂದನಾ ಪತಿ ವಿಜಯ ರಾಘವೇಂದ್ರ ಮುಂತಾದ ಕುಟುಂಬಸ್ಥರು ಬ್ಯಾಂಕಾಕ್‌ನಲ್ಲಿದ್ದು, ಕಾನೂನು ಪ್ರಕ್ರಿಯೆಗಳನ್ನು ಗಮನಿಸಿಕೊಳ್ಳುತ್ತಿದ್ದಾರೆ.

ಇಂಡಿಗೋದಲ್ಲಿ ಪ್ಯಾಸೆಂಜರ್ ವಿಮಾನದಲ್ಲಿ ಪಾರ್ಥಿವ ಶರೀರ ತರಲು ಅವಕಾಶವಿರುವುದರಿಂದ ಅದರಲ್ಲಿ ತರುವ ಸಾಧ್ಯತೆಯಿದೆ. ಮಧ್ಯಾಹ್ನ 2 ಗಂಟೆ ನಂತರ ಆದರೆ ಥಾಯ್ ಏರ್‌ಲೈನ್ಸ್ ಮೂಲಕ ಪಾರ್ಥಿವ ಶರೀರ ತರಬೇಕಾಗುತ್ತದೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಇಂದು ರಾತ್ರಿ 9:30ಕ್ಕೆ ಥಾಯ್ ಏರ್‌ಲೈನ್ಸ್ ವಿಮಾನವಿದೆ. ಒಂದು ವೇಳೆ ಕಾನೂನು ಪ್ರಕ್ರಿಯೆ‌ ತಡವಾಗಿ, ರಾತ್ರಿ 9:30ಕ್ಕೆ ಹೊರಟರೆ ಬೆಂಗಳೂರಿಗೆ ಬರಲು ಮಧ್ಯರಾತ್ರಿ ಆಗಬಹುದು.

ಸದ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಎಲ್ಲಿ ನಡೆಯಬೇಕು ಎಂಬ ಚರ್ಚೆ ನಡೆಯುತ್ತಿದೆ. ಮಲ್ಲೇಶ್ವರಂ ಗ್ರೌಂಡ್ ಅಥವಾ ಬಿಜೆಪಿ ಕಚೇರಿ ಎದುರಿನ ಮೈದಾನ ಎರಡರಲ್ಲಿ‌ ಒಂದು ಕಡೆ ಅಂತಿಮ ದರ್ಶನಕ್ಕೆ ಪ್ಲಾನ್ ಮಾಡಲಾಗ್ತಿದೆ. ಅಂತ್ಯಕ್ರಿಯೆ ಈಡಿಗ ಸಮುದಾಯದ ಆಚರಣೆ ಪ್ರಕಾರ ಆಗಲಿದ್ದು, ಅಂತ್ಯಕ್ರಿಯೆಯ ಜಾಗ ಇನ್ನಷ್ಟೇ ನಿರ್ಧಾರ ಆಗಬೇಕಿದೆ.

ಇದನ್ನೂ ಓದಿ: Spandana Vijay Raghavendra : ಸ್ಪಂದನಾಗೆ ಕಂಟಕವಿತ್ತಾ? ನಾಲ್ಕು ತಿಂಗಳ ಮೊದಲೇ ಸೂಚನೆ ಸಿಕ್ಕಿತ್ತಾ?

Exit mobile version