ಬೆಂಗಳೂರು: ಬಾಲಿವುಡ್ ಹಿಟ್ ಸಿನಿಮಾಗಳಲ್ಲಿ ಒಂದಾದ ಆದಿತ್ಯ ಚೋಪ್ರಾ ನಿರ್ದೇಶನದ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ (Dilwale Dulhania Le Jayeng) ವ್ಯಾಲೆಂಟೈನ್ಸ್ ವೀಕ್‌ಗೆ (Valentine Week) ಪ್ಯಾನ್-ಇಂಡಿಯಾ ಸಿನಿಮಾವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದೀಗ ಶಾರುಖ್ ಖಾನ್ ಮತ್ತು ಕಾಜೋಲ್ ಕಾಂಬಿನೇಶನ್‌ನ ಈ ಸಿನಿಮಾ ಸಿನಿಪ್ರಿಯರಿಗೆ ಗುಡ್‌ನ್ಯೂಸ್ ನೀಡಿದೆ. 1995ರಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ಒಂದು ಪ್ರೇಮಕಥೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ.
ಯಶ್‌ರಾಜ್ ಫಿಲ್ಮ್ಸ್ ವಿತರಣಾ ಉಪಾಧ್ಯಕ್ಷ ರೋಹನ್ ಮಲ್ಹೋತ್ರಾ ಮಾಧ್ಯಮದವರೊಂದಿಗೆ ಮಾತನಾಡಿ, “ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಐತಿಹಾಸಿಕ ಬಿಡುಗಡೆ ಭಾರತೀಯರಿಗೆ ಒಳ್ಳೆಯ ಅವಕಾಶ. ಪ್ರೇಕ್ಷಕರು ಮತ್ತು ಅಭಿಮಾನಿಗಳು, ವರ್ಷದುದ್ದಕ್ಕೂ ಮತ್ತೆ ಮತ್ತೆ ಚಿತ್ರವನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವೀಕ್ಷಿಸಬಹುದು. ಈ ವರ್ಷ, ಪ್ರೇಮಿಗಳ ದಿನದ ಸಂದರ್ಭದಲ್ಲಿ, ನಾವು ಅವರ ಆಶಯವನ್ನು ಈಡೇರಿಸುತ್ತಿದ್ದೇವೆ. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಫೆಬ್ರವರಿ 10ರಿಂದ ಭಾರತದಾದ್ಯಂತ ಪ್ರದರ್ಶನಗೊಳ್ಳಲಿದೆ, ಕೇವಲ ಒಂದು ವಾರ ಮಾತ್ರ ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್ 10 ಪ್ರವಾಸಿ ತಾಣಗಳಿವು
‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಮುಂಬೈ, ಪುಣೆ, ಅಹಮದಾಬಾದ್, ಸೂರತ್, ವಡೋದರಾ, ಗುರ್ಗಾಂವ್, ಫರಿದಾಬಾದ್, ಲಕ್ನೋ, ನೋಯ್ಡಾ, ಡೆಹ್ರಾಡೂನ್, ದೆಹಲಿ, ಚಂಡೀಗಢ, ಕೋಲ್ಕತ್ತಾ, ಗುವಾಹಟಿ, ಬೆಂಗಳೂರು, ಹೈದರಾಬಾದ್, ಇಂದೋರ್, ಚೆನ್ನೈ, ವೆಲ್ಲೂರು, ತಿರುವನಂತಪುರ ಸೇರಿದಂತೆ ಭಾರತದ 37 ನಗರಗಳಲ್ಲಿ ಬಿಡುಗಡೆಯಾಗಲಿದೆ. ʻದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಕಾಲ ಯಶಸ್ವಿ ಪ್ರದರ್ಶನ ಕಂಡ ಸಿನಿಮಾವಾಗಿದೆ.
ಇದನ್ನೂ ಓದಿ: Aamir Khan: ಬಾಕ್ಸ್ ಆಫೀಸ್ ಕಿಂಗ್ ಆಮೀರ್ ಖಾನ್‌ನ 14 ವರ್ಷಗಳ ಸುದೀರ್ಘ ದಾಖಲೆಯನ್ನು ಮುರಿದ ʻಪಠಾಣ್ʼ
ಇದೀಗ ಯಶ್‌ರಾಜ್ ಫೀಲ್ಮ್ಸ್ ನಿರ್ಮಾಣದ ʻಪಠಾಣ್ʼ ಸಿನಿಮಾ 25 ವರ್ಷಗಳ ನಂತರ, ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. “ಈ ಅವಧಿಯಲ್ಲಿ ದೊಡ್ಡ ಪರದೆಯ ಮೇಲೆ ಏಕಕಾಲದಲ್ಲಿ ‘(ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ) DDLJ’ ಮತ್ತು ‘ಪಠಾಣ್’ ಅನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲು ನಾವು ಉತ್ಸುಕರಾಗಿದ್ದೇವೆ. ಈ ಎರಡೂ ಚಿತ್ರಗಳು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಜನರಿಗೆ ಅದ್ಭುತವಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ರೋಹನ್ ಮಾಹಿತಿ ಹಂಚಿಕೊಂಡರು.