-ಶೀಲಾ ಸಿ. ಶೆಟ್ಟಿ ಬೆಂಗಳೂರು
ಮೂಗುತಿ ಸುಂದರಿ ಕಾಂತಾರ ನಟಿ ಸಪ್ತಮಿ ಗೌಡ ಯಾರಿಗೆ ಗೊತ್ತಿಲ್ಲ? ತಕ್ಷಣಕ್ಕೆ ಅವರ ಎತ್ತರ ಹಾಗೂ ಸ್ಟೈಲಿಂಗ್ ನೋಡಿದವರು, ಅವರನ್ನು ಪ್ರೊಫೆಷನಲ್ ಮಾಡೆಲ್ ಅಥವಾ ಫ್ಯಾಷನ್ ಲೋಕದಿಂದ ಎಂಟ್ರಿ ನೀಡಿದ್ದಾರೆ ಎಂದುಕೊಳ್ಳುವವರೇ ಹೆಚ್ಚು! ಆದರೆ, ಅವರು ಸಿನಿಮಾಗೂ ಮುನ್ನ, ಯಾವುದೇ ಫ್ಯಾಷನ್ ಶೋ ಆಗಲಿ, ಇವೆಂಟ್‌ನಲ್ಲಾಗಲಿ ಭಾಗವಹಿಸಿಲ್ಲವಂತೆ. ಕಾಂತಾರ ಸಿನಿಮಾದ ನಂತರವೇ ಅತಿ ಹೆಚ್ಚು ಫ್ಯಾಷನ್ ಫೋಟೊಶೂಟ್ ಹಾಗೂ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದಂತೆ. ಹಾಗೆಂದು ಖುದ್ದು ನಟಿ ಸಪ್ತಮಿ ಗೌಡ ಹೇಳುತ್ತಾರೆ. ಕಾಂತಾರ ಸಿನಿಮಾದ ನಂತರ ಸ್ಯಾಂಡಲ್‌ವುಡ್‌ನ ಫ್ಯಾಷನ್ ಐಕಾನ್ ಕೂಡ ಆಗಿರುವ ಸಪ್ತಮಿ ಗೌಡ ಈ ಬಾರಿಯ ವಿಸ್ತಾರದ ಸೆಲೆಬ್ರೆಟಿ ಫ್ಯಾಷನ್ ಕಾರ್ನರ್‌ನಲ್ಲಿ ತಮ್ಮ ಮೂಗುತಿ ಫ್ಯಾಷನ್ (Sapthami Gowda Interview) ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ಸ್ ಬಗ್ಗೆ ಮಾತನಾಡಿದ್ದಾರೆ.
ಕಾಂತಾರ ಸಿನಿಮಾದ ಮೂಲಕ ಈಗಿನ ಜನರೇಷನ್‌ನ ಹೆಣ್ಣುಮಕ್ಕಳು ಕೂಡ ಮೂಗುತಿ ಧರಿಸುವ ಟ್ರೆಂಡ್ ಹುಟ್ಟುಹಾಕಿದಿರಲ್ಲ! ಈ ಬಗ್ಗೆ ನಿಮಗೆ ಏನನಿಸುತ್ತದೆ?
ಸಪ್ತಮಿ ಗೌಡ: ಕಾಂತಾರ ಸಿನಿಮಾಗಾಗಿ ನಾನು ಮೂಗಿನ ಎರಡೂ ಕಡೆ ಚುಚ್ಚಿಸಿ, ಮೂಗುತಿ ಧರಿಸಿದೆ. ಇದೀಗ ಈ ಫ್ಯಾಷನ್ ಯಾವ ಮಟ್ಟಿಗೆ ಟ್ರೆಂಡ್ ಸೆಟ್ ಆಗಿದೆ ಎಂದರೆ ನನಗೆ ಹೆಮ್ಮೆಯೆನಿಸುತ್ತದೆ. ನಮ್ಮ ಸಂಸ್ಕೃತಿಯ ಟ್ರೆಡಿಷನಲ್ ಆಭರಣ ನನ್ನಿಂದ ಮರುಹುಟ್ಟು ಪಡೆದಿರುವುದಕ್ಕೆ ಖುಷಿಯೆನಿಸುತ್ತದೆ. ಎಲ್ಲಿ ಹೋದರೂ ನನ್ನ ಮೂಗುತಿ ಪ್ರೇಮದ ಬಗ್ಗೆಯೇ ಜನ ಕೇಳುತ್ತಾರೆ, ಮಾತನಾಡುತ್ತಾರೆ. ಟ್ರೆಂಡ್ ಸೆಟ್ಟರ್ ಆಗಿರುವುದಕ್ಕೆ ಸಂತಸವಾಗಿದೆ.
ಇದನ್ನೂ ಓದಿ: Sapthami Gowda: ದಕ್ಷಿಣ ಭಾರತದ ಖ್ಯಾತ ʼಪ್ರವೋಕ್ʼ ಮ್ಯಾಗಜಿನ್‌ಗೆ ಸಪ್ತಮಿ ಗೌಡ ಕವರ್ ಫೋಟೊ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯಾದ ನೀವು ಸದಾ ಪಾಲಿಸುವ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಸಪ್ತಮಿ ಗೌಡ: ಕಂಫರ್ಟಬಲ್ ಫ್ಯಾಷನ್ ನನ್ನದು. ಅದು ಯಾವುದೇ ಉಡುಪಾಗಲಿ, ಟ್ರೆಡಿಷನಲ್ ಆಗಬಹುದು ಅಥವಾ ವೆಸ್ಟರ್ನ್ ಔಟ್‌ಫಿಟ್ ಆಗಬಹುದು. ನೋಡಲು ಮಾತ್ರವಲ್ಲ, ಮೊದಲು ನನಗೆ ಕಂಫರ್ಟಬಲ್ ಫೀಲ್ ನೀಡಬೇಕು. ಅಂತಹ ಯಾವುದೇ ಫ್ಯಾಷನ್‌ವೇರ್ ನನ್ನ ಫ್ಯಾಷನ್ ಸ್ಟೇಟ್‌ಮೆಂಟ್ ಆಗುತ್ತದೆ. ಅದೇ ನನ್ನ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ.
ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ನಿಮ್ಮ ಫ್ಯಾಷನ್‌ನಲ್ಲಿ ಆದ ಮಹತ್ತರ ಬದಲಾವಣೆಗಳೇನು?
ಸಪ್ತಮಿ ಗೌಡ: ಬಾಲಿವುಡ್‌ನಲ್ಲಿ ನಟಿಸುತ್ತಿದ್ದೇನೆ ಎಂದಾಕ್ಷಣ ಫ್ಯಾಷನ್ ಹಾಗೂ ಡ್ರೆಸ್ಸಿಂಗ್‌ನಲ್ಲಿ ಯಾವುದೇ ಬದಲಾವಣೆಗಳಾಗಬೇಕಾಗಿಲ್ಲ! ಆದರೆ, ಭಾಗವಹಿಸುವ ಪ್ರತಿಯೊಂದು ಇವೆಂಟ್‌ಗೆ ತಕ್ಕಂತೆ, ಇಮೇಜ್ ಬದಲಿಸುತ್ತೇನೆ. ಫ್ಯಾಷೆನಬಲ್ ಆಗಿರಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಡಿಸೈನರ್ ತೇಜು ಕ್ರಾಂತಿ ಹಾಗೂ ಖುಷಿ ಜಗದೀಶ್ ಅವರನ್ನೊಳಗೊಂಡ ನನ್ನದೇ ಆದ ಸ್ಟೈಲಿಂಗ್ ಟೀಮ್ ಇದೆ.
ಇದನ್ನೂ ಓದಿ: Sandalwood Star fashion: ಫ್ಯಾಷನ್ ಹಬ್ ಪ್ಯಾರಿಸ್‌ನಲ್ಲಿ ನಟಿ ಮೇಘನಾ ಗಾಂವ್ಕರ್ ಆಕರ್ಷಕ ಲೇಯರ್ ಲುಕ್
ಟ್ರೆಡಿಷನಲ್ ಲುಕ್‌ನಲ್ಲಿ ಅಭಿಮಾನಿಗಳ ಮನಗೆದ್ದ ನಿಮ್ಮ ಸಿಗ್ನೇಚರ್ ಸ್ಟೈಲ್ ?
ಸಪ್ತಮಿ ಗೌಡ: ಮೂಗುತಿ ನನ್ನ ಎವರ್‌ಗ್ರೀನ್ ಸಿಗ್ನೆಚರ್ ಸ್ಟೈಲ್‌ನಲ್ಲಿ ಸೇರಿದೆ.
ನಿಮ್ಮ ಅಭಿಮಾನಿಗಳಿಗೆ ಯಾವ ಬಗೆಯ ಫ್ಯಾಷನ್ ಟಿಪ್ಸ್ ನೀಡುತ್ತೀರಾ?
ಸಪ್ತಮಿ ಗೌಡ: ಸ್ಟಾರ್‌ಗಳ ಸ್ಟೈಲ್‌ಗಳನ್ನು ಅಳವಡಿಸಿಕೊಳ್ಳುವ ಮುನ್ನ ಅದು ನಿಮಗೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಮನಗಾಣಿ. ಸುಮ್ಮನೆ ಅವರನ್ನು ಫಾಲೋ ಮಾಡುವ ಬದಲು, ಕಂಫರ್ಟಬಲ್ ಫ್ಯಾಷನ್ ಅಳವಡಿಸಿಕೊಳ್ಳಿ. ಸೀಸನ್ ಹಾಗೂ ಸಂದರ್ಭಕ್ಕೆ ತಕ್ಕಂತೆ ಬದಲಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)