Site icon Vistara News

Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2

Stree 2 Box Office Day 5

ಬೆಂಗಳೂರು: ರಾಜ್‌ಕುಮಾರ್ ರಾವ್ (Rajkummar Rao) ಮತ್ತು ಶ್ರದ್ಧಾ ಕಪೂರ್ (shraddha kapoor) ಅಭಿನಯದ ಸ್ತ್ರೀ 2 (stree 2) ಚಿತ್ರ ಮತ್ತೊಂದು ದಾಖಲೆ ಬರೆದಿದೆ. ಈ ಚಿತ್ರವು ಕೇವಲ ಐದು ದಿನಗಳಲ್ಲಿ ಸುಮಾರು 228 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ (Stree 2 Box Office Day 5) 2024ರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೆಗ್ಗಳಿಕೆ ಪಡೆದಿದೆ. ಸ್ತ್ರೀ 2 ಚಿತ್ರವು ಹೃತಿಕ್ ರೋಷನ್ ಅವರ ಫೈಟರ್ ಮತ್ತು ಪ್ರಭಾಸ್- ಅಮಿತಾಬ್ ಬಚ್ಚನ್ ಅವರ ಕಲ್ಕಿ 2898ಎಡಿ ಯನ್ನು ಸೋಲಿಸಿದೆ. ಈ ವರ್ಷದ ಅತಿ ಹೆಚ್ಚು ಆರಂಭಿಕ ವಾರಾಂತ್ಯವನ್ನು ದಾಖಲಿಸಿದೆ. ಸ್ತ್ರೀ 2 ಈಗಾಗಲೇ ಫೈಟರ್‌ನ ಗಳಿಕೆಯನ್ನು ಮೀರಿಸಿದೆ.

ಸಾಕ್ನಿಕ್ ಡಾಟ್ ಕಾಮ್ ಪ್ರಕಾರ ಆರಂಭಿಕ ಅಂದಾಜಿನ ಪ್ರಕಾರ ಸ್ತ್ರೀ 2 ಸೋಮವಾರ 37 ಕೋಟಿ ರೂ. ಸಂಗ್ರಹಿಸಿದೆ. ಇದು ಸ್ತ್ರೀ 2ನ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು 228.45 ಕೋಟಿ ರೂ. ಗೆ ಏರಿಸಿದೆ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಫೈಟರ್ ತನ್ನ ಆರಂಭಿಕ ವಾರಾಂತ್ಯದಲ್ಲಿ 115.30 ಕೋಟಿ ರೂ. ಗಳನ್ನು ಗಳಿಸಿತ್ತು ಮತ್ತು ಸಿನಿಮಾದ ಒಟ್ಟು ಗಳಿಕೆ 199.45 ಕೋಟಿ ರೂ. ಆಗಿತ್ತು.


ಕಲ್ಕಿ 2898ಎಡಿಯ ಹಿಂದಿ ಚಿತ್ರ ಗಲ್ಲಾಪೆಟ್ಟಿಗೆಯ ಸಂಗ್ರಹವನ್ನು ಸ್ತ್ರೀ 2 ಮುರಿದಿದೆ. ಕಲ್ಕಿ 2898 ಎಡಿನ ಹಿಂದಿ ಆವೃತ್ತಿಯು ಆರಂಭಿಕ ವಾರಾಂತ್ಯದಲ್ಲಿ 112.15 ಕೋಟಿ ರೂ. ಸಂಗ್ರಹಿಸಿದೆ ಮತ್ತು ಹಿಂದಿಯಲ್ಲಿಯೇ 294.25 ಕೋಟಿ ರೂ. ಸಂಗ್ರಹದೊಂದಿಗೆ ತನ್ನ ಓಟವನ್ನು ಕೊನೆಗೊಳಿಸಿತ್ತು.

ಸ್ತ್ರೀ 2 ಚಿತ್ರವು ಪ್ರಮುಖ ರಜಾದಿನಗಳಾದ ಸ್ವಾತಂತ್ರ್ಯ ಮತ್ತು ರಕ್ಷಾ ಬಂಧನದಂದು ಅತ್ಯಧಿಕ ಗಳಿಕೆ ಮಾಡಿದೆ. ಸ್ವಾತಂತ್ರ್ಯ ದಿನದಂದು 51.8 ಕೋಟಿ ರೂ. ಸಂಗ್ರಹಿಸಿದರೆ, ರಕ್ಷಾ ಬಂಧನದಂದು ದೇಶದ ಆಯ್ದ ಕಡೆಗಳಲ್ಲಿ 37 ಕೋಟಿ ರೂ. ಆದಾಯಗಳಿಸಿದೆ. ದೆಹಲಿ-ಎನ್‌ಸಿಆರ್, ಲಕ್ನೋ, ಭೋಪಾಲ್, ಅಹಮದಾಬಾದ್ ಮತ್ತು ಜೈಪುರದಲ್ಲಿ ಅತಿ ಹೆಚ್ಚು ದಾಖಲಾಗಿವೆ.


ಇದನ್ನೂ ಓದಿ: Duniya Vijay: 20 ಕೋಟಿ ರೂ. ಕಲೆಕ್ಷನ್‌ ಮಾಡಿ ʻಭೀಮʼ ದಾಖಲೆ ? ಇಲ್ಲಿಯವರೆಗಿನ ಕಲೆಕ್ಷನ್‌ ಎಷ್ಟು?

ಸ್ತ್ರೀ 2 ಚಿತ್ರವು 2018ರಲ್ಲಿ ಬಿಡುಗಡೆಯಾದ ಸ್ತ್ರೀ ಚಿತ್ರದ ಸೀಕ್ವೆಲ್‌. ಮೊದಲ ಚಿತ್ರವು 129.90 ಕೋಟಿ ರೂ. ಅನ್ನು ಬಾಕ್ಸ್ ಆಫೀಸ್ ನಲ್ಲಿ ಸಂಗ್ರಹಿಸಿತ್ತು. 50 ಕೋಟಿ ರೂ. ಬಜೆಟ್ ನ ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಅವರು ಅಭಿನಯಿಸಿದ್ದು, ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ವರುಣ್ ಧವನ್ ಅವರ ಭೇದಿಯ ಅವತಾರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಖಳನಾಯಕನಾಗಿ ಮಿಂಚಿದ್ದಾರೆ. ತಮನ್ನಾ ಭಾಟಿಯಾ ಪಂಕಜ್ ತ್ರಿಪಾಠಿಯ ಪ್ರೇಮಕತೆ ಚಿತ್ರದಲ್ಲಿ ಕಾಣಿಸಿಕೊಂಡಿದೆ.

Exit mobile version