Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2 - Vistara News

ಸಿನಿಮಾ

Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2

ಸ್ತ್ರೀ 2 ಚಿತ್ರವು ಹೃತಿಕ್ ರೋಷನ್ ಅವರ ಫೈಟರ್ ಮತ್ತು ಪ್ರಭಾಸ್- ಅಮಿತಾಬ್ ಬಚ್ಚನ್ ಅವರ ಕಲ್ಕಿ 2898ಎಡಿ ಯನ್ನು ಸೋಲಿಸಿದ್ದು, ಈ ವರ್ಷದ ಅತಿ ಹೆಚ್ಚು ಆರಂಭಿಕ ವಾರಾಂತ್ಯವನ್ನು ದಾಖಲಿಸಿದೆ. ಸ್ತ್ರೀ 2 (Stree 2 Box Office Day 5) ಈಗಾಗಲೇ ಫೈಟರ್‌ನ ಗಳಿಕೆಯನ್ನು ಮೀರಿಸಿದೆ.

VISTARANEWS.COM


on

Stree 2 Box Office Day 5
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್‌ಕುಮಾರ್ ರಾವ್ (Rajkummar Rao) ಮತ್ತು ಶ್ರದ್ಧಾ ಕಪೂರ್ (shraddha kapoor) ಅಭಿನಯದ ಸ್ತ್ರೀ 2 (stree 2) ಚಿತ್ರ ಮತ್ತೊಂದು ದಾಖಲೆ ಬರೆದಿದೆ. ಈ ಚಿತ್ರವು ಕೇವಲ ಐದು ದಿನಗಳಲ್ಲಿ ಸುಮಾರು 228 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ (Stree 2 Box Office Day 5) 2024ರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೆಗ್ಗಳಿಕೆ ಪಡೆದಿದೆ. ಸ್ತ್ರೀ 2 ಚಿತ್ರವು ಹೃತಿಕ್ ರೋಷನ್ ಅವರ ಫೈಟರ್ ಮತ್ತು ಪ್ರಭಾಸ್- ಅಮಿತಾಬ್ ಬಚ್ಚನ್ ಅವರ ಕಲ್ಕಿ 2898ಎಡಿ ಯನ್ನು ಸೋಲಿಸಿದೆ. ಈ ವರ್ಷದ ಅತಿ ಹೆಚ್ಚು ಆರಂಭಿಕ ವಾರಾಂತ್ಯವನ್ನು ದಾಖಲಿಸಿದೆ. ಸ್ತ್ರೀ 2 ಈಗಾಗಲೇ ಫೈಟರ್‌ನ ಗಳಿಕೆಯನ್ನು ಮೀರಿಸಿದೆ.

ಸಾಕ್ನಿಕ್ ಡಾಟ್ ಕಾಮ್ ಪ್ರಕಾರ ಆರಂಭಿಕ ಅಂದಾಜಿನ ಪ್ರಕಾರ ಸ್ತ್ರೀ 2 ಸೋಮವಾರ 37 ಕೋಟಿ ರೂ. ಸಂಗ್ರಹಿಸಿದೆ. ಇದು ಸ್ತ್ರೀ 2ನ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು 228.45 ಕೋಟಿ ರೂ. ಗೆ ಏರಿಸಿದೆ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ಫೈಟರ್ ತನ್ನ ಆರಂಭಿಕ ವಾರಾಂತ್ಯದಲ್ಲಿ 115.30 ಕೋಟಿ ರೂ. ಗಳನ್ನು ಗಳಿಸಿತ್ತು ಮತ್ತು ಸಿನಿಮಾದ ಒಟ್ಟು ಗಳಿಕೆ 199.45 ಕೋಟಿ ರೂ. ಆಗಿತ್ತು.


ಕಲ್ಕಿ 2898ಎಡಿಯ ಹಿಂದಿ ಚಿತ್ರ ಗಲ್ಲಾಪೆಟ್ಟಿಗೆಯ ಸಂಗ್ರಹವನ್ನು ಸ್ತ್ರೀ 2 ಮುರಿದಿದೆ. ಕಲ್ಕಿ 2898 ಎಡಿನ ಹಿಂದಿ ಆವೃತ್ತಿಯು ಆರಂಭಿಕ ವಾರಾಂತ್ಯದಲ್ಲಿ 112.15 ಕೋಟಿ ರೂ. ಸಂಗ್ರಹಿಸಿದೆ ಮತ್ತು ಹಿಂದಿಯಲ್ಲಿಯೇ 294.25 ಕೋಟಿ ರೂ. ಸಂಗ್ರಹದೊಂದಿಗೆ ತನ್ನ ಓಟವನ್ನು ಕೊನೆಗೊಳಿಸಿತ್ತು.

ಸ್ತ್ರೀ 2 ಚಿತ್ರವು ಪ್ರಮುಖ ರಜಾದಿನಗಳಾದ ಸ್ವಾತಂತ್ರ್ಯ ಮತ್ತು ರಕ್ಷಾ ಬಂಧನದಂದು ಅತ್ಯಧಿಕ ಗಳಿಕೆ ಮಾಡಿದೆ. ಸ್ವಾತಂತ್ರ್ಯ ದಿನದಂದು 51.8 ಕೋಟಿ ರೂ. ಸಂಗ್ರಹಿಸಿದರೆ, ರಕ್ಷಾ ಬಂಧನದಂದು ದೇಶದ ಆಯ್ದ ಕಡೆಗಳಲ್ಲಿ 37 ಕೋಟಿ ರೂ. ಆದಾಯಗಳಿಸಿದೆ. ದೆಹಲಿ-ಎನ್‌ಸಿಆರ್, ಲಕ್ನೋ, ಭೋಪಾಲ್, ಅಹಮದಾಬಾದ್ ಮತ್ತು ಜೈಪುರದಲ್ಲಿ ಅತಿ ಹೆಚ್ಚು ದಾಖಲಾಗಿವೆ.

Stree 2 Box Office Day 5
Stree 2 Box Office Day 5


ಇದನ್ನೂ ಓದಿ: Duniya Vijay: 20 ಕೋಟಿ ರೂ. ಕಲೆಕ್ಷನ್‌ ಮಾಡಿ ʻಭೀಮʼ ದಾಖಲೆ ? ಇಲ್ಲಿಯವರೆಗಿನ ಕಲೆಕ್ಷನ್‌ ಎಷ್ಟು?

ಸ್ತ್ರೀ 2 ಚಿತ್ರವು 2018ರಲ್ಲಿ ಬಿಡುಗಡೆಯಾದ ಸ್ತ್ರೀ ಚಿತ್ರದ ಸೀಕ್ವೆಲ್‌. ಮೊದಲ ಚಿತ್ರವು 129.90 ಕೋಟಿ ರೂ. ಅನ್ನು ಬಾಕ್ಸ್ ಆಫೀಸ್ ನಲ್ಲಿ ಸಂಗ್ರಹಿಸಿತ್ತು. 50 ಕೋಟಿ ರೂ. ಬಜೆಟ್ ನ ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಅವರು ಅಭಿನಯಿಸಿದ್ದು, ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ವರುಣ್ ಧವನ್ ಅವರ ಭೇದಿಯ ಅವತಾರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಖಳನಾಯಕನಾಗಿ ಮಿಂಚಿದ್ದಾರೆ. ತಮನ್ನಾ ಭಾಟಿಯಾ ಪಂಕಜ್ ತ್ರಿಪಾಠಿಯ ಪ್ರೇಮಕತೆ ಚಿತ್ರದಲ್ಲಿ ಕಾಣಿಸಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Mollywood Sex Mafia: ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾ ಬಟಾಬಯಲು; 15 ಪ್ರಭಾವಿಗಳಿಂದ ದಂಧೆ- ಸ್ಫೋಟಕ ವರದಿ ಔಟ್‌

Mollywood Sex Mafia: ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

VISTARANEWS.COM


on

Mollywood Sex Mafia
Koo

ತಿರುವನಂತಪುರಂ: ಬಹಳ ಸಹಜ, ನೈಜ ಕಥಾವಸ್ತು, ಅತ್ಯದ್ಭುತ ನಟನೆಯ ನಟ-ನಟಿಯರು, ಜನರಿಗೆ ಬೇಗ ಮುಟ್ಟುವ ಮತ್ತು ಮೆಚ್ಚುಗೆಯಾಗುವಂತಹ ಸಿನಿಮಾಗಳ ಮೂಲಕ ಇಡೀ ದೇಶದ ಪ್ರೇಕ್ಷಕರ ಗಮನ ಸೆಳೆಯುವ ಮಲಯಾಳಂ ಚಿತ್ರರಂಗದ(Malayalam film industry) ವಿರುದ್ಧ ಇದೀಗ ಬಹುದೊಡ್ಡ ವಿವಾದವೊಂದು ಕೇಳಿಬಂದಿದೆ. ಕೇರಳ ಚಿತ್ರರಂಗದ ಸೆಕ್ಸ್ ಹಗರಣ(Mollywood Sex Mafia)ಹೊರಬಿದ್ದಿದ್ದು 15 ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿವೆ.

ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಇನ್ನು ಈ ಬಗ್ಗೆ ಕಿರಿಯ ನಟಿಯೊಬ್ಬರು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ್ದು, ಇದೇ ಅನೇಕ ಮಾಹಿತಿ ಕಳೆ ಹಾಕಿರುವ ಸಮಿತಿ 233 ಪುಟಗಳ ವರದಿ ತಯಾರು ಮಾಡಿದೆ. ಇದೀಗ ಮಾಹಿತಿ ಹಕ್ಕು(RTI) ಅಡಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಸಂಗತಿಗಳು ಒಂದೊಂದೆ ಬಯಲಾಗಿದೆ. ಮಲಯಾಳ ಚಿತ್ರರಂಗದಲ್ಲಿ ‘ಕಾಸ್ಟಿಂಗ್‌ ಕೌಚ್‌’ (ಸಿನಿಮಾದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸುವುದು) ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನಟಿಯರಿರುವ ಕೋಣೆ ಬಾಗಿಲು ಬಡಿಯುತ್ತಾರೆ

ಇನ್ನು ವರದಿಯಲ್ಲಿ ಹೇಳಿರುವಂತೆ ರಾತ್ರಿ ವೇಳೆ ನಟಿಯರು ತಂಗಿದ್ದಾಗ ಅವರ ಕೋಣೆಯ ಬಾಗಿಲನ್ನು ಪದೇ ಪದೇ ಬಡಿಯಲಾಗುತ್ತದೆ. ಅವರು ತೆಗೆಯದಿದ್ದರೆ ಇನ್ನೂ ಜೋರಾಗಿ ಬಡಿಯಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಬಾಗಿಲೇ ಮುರಿದು ಬೀಳಬಹುದು ಎಂಬಂತೆ ಅದನ್ನು ಬಡಿಯಲಾಗುತ್ತದೆ ಎಂದು ನಟಿಯರು ತನಗೆ ತಿಳಿಸಿದ್ದಾರೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಮಲಯಾಳಂ ಚಿತ್ರರಂಗದಲ್ಲಿ ಅತಿಹೆಚ್ಚಾಗಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ. ಒಂದು ವೇಳೆ ಅದನ್ನು ಪ್ರತಿಭಟಿಸಿದರೆ ಈ 15ಜನರ ಮಾಫಿಯಾ ಅವರ ಭವಿಷ್ಯವನ್ನೇ ಹಾಳುಗೆಡವುತ್ತಿದೆ. ಇದಕ್ಕೆ ಹೆದರಿ ನಟಿಯರು ದೂರು ನೀಡಲೂ ನಿರಾಕರಿಸುತ್ತಿದ್ದಾರೆ.

ಸಮಿತಿ ರಚನೆ ಆಗಿದ್ದು ಯಾವಾಗ?

2017ರಲ್ಲಿ ಖ್ಯಾತ ಚಿತ್ರನಟಿಯೊಬ್ಬರ ಮೇಲೆ ನಟ ದಿಲೀಪ್‌ ತಂಡದಿಂದ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬಹಳ ಸಂಚಲನ ಮೂಡಿಸಿತ್ತು. ಹೀಗಾಗಿ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಹೇಮಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಲಾಗಿತ್ತು.

ಇನ್ನು ಈ ವರದಿ ಬಿಡುಗಡೆಯಾಗಿರುವ ಬಗ್ಗೆ ಸಂಸದ ಶಶಿ ತರೂರ್‌ ಪ್ರತಿಕ್ರಿಯಿಸಿದ್ದು, ಇಷ್ಟು ದೊಡ್ಡಮಟ್ಟದಲ್ಲಿ ಕೇರಳ ಚಿತ್ರರಂಗದಲ್ಲಿ ಮಾಫಿಯಾ ನಡೆಯುತ್ತಿದ್ದರೂ ಕೇರಳ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Casting Couch | ಅಡ್ಜೆಸ್ಟ್‌ ಆಗಬೇಕು ಅಂದಿದ್ದ ನಿರ್ಮಾಪಕ: ರತನ್‌ ರಜಪೂತ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿದ್ದೇನು?

Continue Reading

Latest

Yash-Radhika: ರಾಕಿಂಗ್ ಸ್ಟಾರ್‌ ಯಶ್- ರಾಧಿಕಾ ಕುಟುಂಬದ ಸಂಭ್ರಮದ ರಕ್ಷಾಬಂಧನ; ಇಲ್ಲಿವೆ ಚಿತ್ರಗಳು

Yash-Radhika ರಕ್ಷಾಬಂಧನವು ಭಾರತದಲ್ಲಿ ಒಂದು ವಿಶೇಷ ಹಬ್ಬ. ಇದು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸುವಂತಹ ಹಬ್ಬವಾಗಿದೆ. ಈ ಬಾರಿ ರಕ್ಷಾಬಂಧನವನ್ನು ಯಶ್-ರಾಧಿಕಾ ಮಕ್ಕಳಾದ ಐರಾ-ಯಥರ್ವ್ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಮಕ್ಕಳಿಬ್ಬರ ಫೋಟೊವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.

VISTARANEWS.COM


on

Yash-Radhika
Koo

ಬೆಂಗಳೂರು: ಅಣ್ಣ- ತಂಗಿಯರ ಬಾಂಧವ್ಯ ಬೆಸುಗೆಯನ್ನು ಹೆಚ್ಚಿಸುವ ಹಬ್ಬವೇ ರಕ್ಷಾ ಬಂಧನ. ಅಣ್ಣನಿಗೆ ತಂಗಿ ರಾಖಿ ಕಟ್ಟುವ ಮೂಲಕ ತನ್ನ ರಕ್ಷಣೆಯ ಹೊಣೆಯನ್ನು ಆತನ ಹೆಗಲಿಗೇರಿಸುತ್ತಾಳೆ. ಇನ್ನು ಈ ಆಚರಣೆಯ ಹಿಂದೆ ಸಾಕಷ್ಟು ಪುರಾಣ ಕಥೆಗಳಿವೆ. ಈ ರಕ್ಷಾಬಂಧನವನ್ನು ಎಲ್ಲರೂ ಖುಷಿಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. ಚಂದನವನದಲ್ಲೂ ಈ ರಕ್ಷಾಬಂಧನದ ಸಂಭ್ರಮ ಜೋರಾಗಿಯೇ ಇತ್ತು. ಯಶ್-ರಾಧಿಕಾ(Yash-Radhika) ಮಕ್ಕಳಾದ ಐರಾ ಹಾಗೂ ಯಥರ್ವ್‌ ರಕ್ಷಾಬಂಧನವನ್ನು ಬಹಳ ಖುಷಿಯಿಂದ ಆಚರಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಎಂದೇ ಹೆಸರು ಗಳಿಸಿದ ಯಶ್-ರಾಧಿಕಾ ಅವರ ಮುದ್ದಾದ ಮಕ್ಕಳ ರಕ್ಷಾಬಂಧನದ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ.

ವರಮಹಾಲಕ್ಷ್ಮಿ, ದೀಪಾವಳಿ, ರಕ್ಷಾಬಂಧನ ಹೀಗೆ ಎಲ್ಲಾ ಹಬ್ಬದ ಆಚರಣೆಯನ್ನು ರಾಧಿಕಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಹಂಚಿಕೊಂಡು ಖುಷಿಪಡುತ್ತಿರುತ್ತಾರೆ.

ಈಗ ಮಕ್ಕಳಾದ ಐರಾ ಹಾಗೂ ಯಥರ್ವ್‌ ಅವರು ರಕ್ಷಾಬಂದನವನ್ನು ಆಚರಿಸಿದ ಫೋಟೊವನ್ನು ಶೇರ್‌ ಮಾಡಿಕೊಂಡು ಖುಷಿಪಟ್ಟಿದ್ದಾರೆ.

ಐರಾ ಹಾಗೂ ಯಥರ್ವ್‌ ರಕ್ಷಾಬಂಧನವನ್ನು ಬಹಳ ಸರಳವಾಗಿ ಆಚರಿಸಿದ್ದಾರೆ.ಅಕ್ಕ-ತಮ್ಮ ಇಬ್ಬರೂ ಮ್ಯಾಚಿಂಗ್‌ ಮ್ಯಾಚಿಂಗ್‌ ಉಡುಪು ತೊಟ್ಟಿದ್ದರು.

ಇನ್ನು ಐರಾ ತನ್ನ ತಮ್ಮನಿಗೆ ರಾಖಿ ಕಟ್ಟಿ ಹಣೆಗೆ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ರಾಖಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾಳೆ. ಈವರಿಬ್ಬರ ಫೋಟೊವನ್ನು ರಾಧಿಕಾ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಾ ಬಂಧನಕ್ಕೆ ಸಂಬಂಧಿಸಿದ ಒಂದು ಜನಪ್ರಿಯ ಕಥೆ ಮಹಾಭಾರತದ ಕೃಷ್ಣ-ದ್ರೌಪದಿಯಿಂದ ಬಂದಿದೆ ಎನ್ನಲಾಗಿದೆ. ಶ್ರೀಕೃಷ್ಣನು ಕಬ್ಬಿನ ತುಂಡನ್ನು ಕತ್ತರಿಸುವಾಗ ಅವನ ಬೆರಳಿಗೆ ಗಾಯವಾಯಿತು. ಆಗ ಪಾಂಡವರ ಪತ್ನಿ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಆತನನ್ನು ರಕ್ಷಿಸಲು ಬೆರಳಿಗೆ ಸುತ್ತಿದಳು. ಆಗ ಕೃಷ್ಣನು ಅವಳಲ್ಲಿ ಸಹೋದರ ಪ್ರೇಮವನ್ನು ಕಂಡು ಅಗತ್ಯದ ಸಮಯದಲ್ಲಿ ಅವಳನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದನು. ಅದರಂತೆ ರಕ್ಷಾ ಬಂಧನವನ್ನು ಅಣ್ಣ-ತಂಗಿ ಹಬ್ಬವೆಂದು ರಾಖಿ ಕಟ್ಟುವ ಮೂಲಕ ಆಚರಿಸಲಾಗುತ್ತದೆ.

ಇದನ್ನೂ ಓದಿ: ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

ಹಾಗೇ ಇನ್ನೊಂದು ಇತಿಹಾಸದ ಕಥೆಯಲ್ಲಿ ಚಿತ್ತೋರಿನ ರಾಣಿ ಕರ್ಣಾವತಿ ಆಕ್ರಮಣಕಾರರ ವಿರುದ್ಧ ಸಹಾಯವನ್ನು ಕೋರಿ ಚಕ್ರವರ್ತಿ ಹುಮಾಯೂನ್‌ಗೆ ರಾಖಿಯನ್ನು ಕಳುಹಿಸಿದಳು. ಆಗ ಹುಮಾಯೂನ್ ತಕ್ಷಣವೇ ಅವಳ ಸಹಾಯಕ್ಕೆ ಬಂದನು ಎನ್ನಲಾಗಿದೆ. ರಾಖಿ ಮೂಲಕ ಅವರ ನಡುವೆ ಸಹೋದರ ಸಹೋದರಿಯ ಸಂಬಂಧ ಬೆಳೆಯಿತು ಎನ್ನಲಾಗಿದೆ.

Continue Reading

ಸಿನಿಮಾ

Bheema Box Office Collection : ಎರಡನೇ ವಾರಾಂತ್ಯದಲ್ಲೂ ಮುನ್ನುಗ್ಗಿದ್ದ ಭೀಮ; 20 ಕೋಟಿ ರೂ. ಕಲೆಕ್ಷನ್‌

Bheema Box Office Collection :

VISTARANEWS.COM


on

Bheema Box Office Collection
Koo

ಬೆಂಗಳೂರು : ವರ್ಷದ ಮೊದಲ ಹಿಟ್‌ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯೊಂದಿಗೆ ದುನಿಯಾ ವಿಜಯ್‌ ನಿರ್ದೇಶನದ ‘ಭೀಮ’ ಸಿನಿಮಾ ಮುನ್ನುಗುತ್ತಿದೆ. ಸ್ಯಾಂಡಲ್‌ವುಡ್‌‌ನ ಬಾಕ್ಸ್‌ ಆಫೀಸ್‌ನಲ್ಲಿ ತನ್ನದೇ ಆದ ರೀತಿಯಲ್ಲಿ ಸಾಗಿ ನಿರಂತರವಾಗಿ ಕಲೆಕ್ಷನ್ (Bheema Box Office Collection) ಮಾಡುತ್ತಿದೆ. ನಿರಂತರ ರಜೆಗಳು ಮತ್ತು ವೀಕೆಂಡ್‌ ಸಿನಿಮಾ ಪ್ರಿಯರ ಮನ ಗೆದ್ದಿರುವ ‘ಭೀಮ’ 20 ಕೋಟಿ ರೂಪಾಯಿ ಕಲೆಕ್ಷನ್ ಮೀರಿದೆ.

‘ಭೀಮ’ ಸಿನಿಮಾಗೆ ಎರಡನೇ ವಾರಾಂತ್ಯದ ಲಾಭವನ್ನೂ ಸಂಪೂರ್ಣವಾಗಿ ಗಳಿಸಿದೆ. ಇದು ಈ ವರ್ಷದ ಮೊದಲ ಕನ್ನಡದ ಹಿಟ್ ಸಿನಿಮಾ. ಹೀಗಾಗಿ ಅದರ ಪ್ರಭಾವ ಎಷ್ಟು ದಿನ ಉಳಿಬಹುದು ಎಂಬ ಕುತೂಹಲದ ನಡುವೆಯೂ ಬಹುತೇಕ ವಿಜಯದ ಗುರಿಯನ್ನು ಮುಟ್ಟಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇರುವ ಹೊರತಾಗಿಯೂ ಮಾಸ್ ಅಭಿಮಾನಿಗಳ ಪ್ರೀತಿಗೆ ಸಿನಿಮಾ ಪಾತ್ರವಾಗಿದೆ.

‘ಭೀಮ’ ಮೊದಲ ದಿನದಿಂದಲೇ ಕಲೆಕ್ಷನ್‌ನಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ. ಹೀಗಾಗಿ 10 ದಿನಗಳಲ್ಲಿ 20 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರು ಸ್ಯಾಂಡಲ್‌ವುಡ್‌ಗೆ ಹೊಸ ಹುರುಷು ಕೊಟ್ಟಿದೆ. ಸಿನಿಮಾವನ್ನು ಪ್ರೇಕ್ಷಕರಷ್ಟೇ ಅಲ್ಲ ವಿಮರ್ಶಕರೂ ಹೊಗಳುತ್ತಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿರುವ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಗೊಳ್ಳುತ್ತಿದೆ. ಭೀಮನ ಪ್ರಭಾವ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಎರಡನೇ ಹಂತದ ನಗರಗಳಲ್ಲೂ ವಾರಾಂತ್ಯದಲ್ಲಿ ಲಾಭ ಮಾಡಿಕೊಂಡಿದೆ.

ಚಿತ್ರಮಂದಿರಗಳಿಂದ ವಿಮುಖರಾಗಿದ್ದ ಸಿನಿ ಪ್ರೇಕ್ಷಕರನ್ನು ಮತ್ತೆ ಸೆಳೆಯುವಲ್ಲಿ ಭೀಮ ಯಶಸ್ವಿಯಾಗಿದೆ ಎಂಬುದೇ ಹೆಚ್ಚುಗಾರಿಕೆ. ವಿಜಯ್‌ ಅವರ ಮೊದಲ ಸಿನಿಮಾ ‘ಸಲಗ’ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿತ್ತು. ಈಗ ಎರಡನೇ ಸಿನಿಮಾ ‘ಭೀಮ’ವನ್ನು ಕೂಡ ದುನಿಯಾ ಗೆಲ್ಲಿಸಿದ್ದಾರೆ. ನಿರೀಕ್ಷೆಯಂತೆ ಕಳೆದ ಶನಿವಾರ ಮತ್ತು ಭಾನುವಾರ ಸಿನಿಮಾ ಕಲೆಕ್ಷನ್ ಚೆನ್ನಾಗಿಯೇ ಆಗಿದೆ. ಭಾನುವಾರ (ಆಗಸ್ಟ್ 18 ಭೀಮನಿಗೆ 10ನೇ ದಿನವಾಗಿದ್ದು 1.25 ರಿಂದ 1.30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ ₹20 ಕೋಟಿ ಕ್ಲಬ್ ಸೇರಿತೇ? ಭೀಮ

ದುನಿಯಾ ವಿಜಯ್ ಅವರ ಪ್ರಯತ್ನ ನಿರ್ಮಾಪಕರ ಜೇಬು ತುಂಬಿಸಿದೆ. ಸಣ್ಣ ಬಜೆಟ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಭರವಸೆ ಮೂಡಿಸಿದೆ. ಇದು ಸ್ಯಾಂಡಲ್‌ವುಡ್‌‌‌ ಮಟ್ಟಿಗೆ ದೊಡ್ಡ ಸಕ್ಸಸ್. ಕಳೆದ 9 ದಿನಗಳಲ್ಲಿ ‘ಭೀಮ’ 19.73 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂತೆಯೇ 10ನೇ ದಿನದ್ದೂ ಸೇರಿದರೆ 21 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ : Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

3ನೇ ವಾರ ಭೀಮನಿಗೆ ದೊಡ್ಡ ಸವಾಲು ಇದೆ. ಯಾಕೆಂದರೆ ದೀರ್ಘ ರಜೆಗಳು ಮುಗಿದಿವೆ. ಹೊಸ ಹೊಸ ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿವೆ. ಇವೆಲ್ಲದರ ನಡುವೆ ಭೀಮ ಮುನ್ನುಗ್ಗಿದರೆ ನಿರ್ಮಾಪಕರಿಗೆ ಲಾಭ ಗ್ಯಾರಂಟಿ.

Continue Reading

ಬೆಂಗಳೂರು

Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಅಡ್ವೆಂಚರಸ್ ಕಾಮಿಡಿ (Kannada New Movie) ಕಥಾಹಂದರ ಒಳಗೊಂಡಿರುವ “ಫಾರೆಸ್ಟ್” ಚಿತ್ರದ ಟ್ರೈಲರ್ ಸದ್ದದಲ್ಲೇ ರಿಲೀಸ್‌ ಆಗಲಿದೆ. ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂತ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ “ಫಾರೆಸ್ಟ್” ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಎಂ.ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್. ಎಂ. ಕಾಂತರಾಜ್ ಅವರು ಚಿತ್ರವನ್ನು (Kannada New Movie) ನಿರ್ಮಿಸಿದ್ದಾರೆ.

ಇದನ್ನೂ ಓದಿ: Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

ಈ ಸಿನಿಮಾ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿರುವ ನಿರ್ಮಾಪಕರು ಕ್ವಾಲಿಟಿ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ, ಬಜೆಟ್ ಬಗ್ಗೆ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ, ಡಬಲ್ ಇಂಜಿನ್ , ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂತ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಫಾರೆಸ್ಟ್‌ನಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್ ಇರುವ ಈ ಚಿತ್ರದ ಬಹುತೇಕ ಕಥೆ ಕಾಡಿನಲ್ಲಿಯೇ ನಡೆಯೋದು ಚಿತ್ರದ ಮತ್ತೊಂದು ವಿಶೇಷ. ಸದ್ಯದಲ್ಲೇ ಈ ಸಿನಿಮಾದ ಮೊದಲಪ್ರತಿ ಹೊರಬರಲಿದೆ. ಅತಿದೊಡ್ಡ ಕಳ್ಳತನವೊಂದರ ಸುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಕೆಲವು ಕಡೆ ಡಬಲ್ ಕಾಲ್‌ಶೀಟ್ ಆಗಿದ್ದರಿಂದ ಶೂಟಿಂಗ್ ದಿನಗಳು ಹೆಚ್ಚಾಗಿದೆ ಎಂದು ನಿರ್ಮಾಪಕ ಕಾಂತರಾಜು ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಸಿದ್ದವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ರಿಲೀಸ್ ಮಾಡವುದಾಗಿಯೂ ಹಾಗೂ ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಕಾಂತರಾಜು ಅವರು ಯೋಜನೆ ಹಾಕಿಕೊಂಡಿದ್ದಾರೆ.

ಅಲ್ಲದೆ ಚಿತ್ರದ ಮತ್ತೊಂದು ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿಯೂ ನಿರ್ಮಾಪಕರು ಹೇಳಿದ್ದಾರೆ, ಚೇತನ್ ಕುಮಾರ್ ಅವರ ರಚನೆಯ ಈ ಹಾಡಿಗೆ ಗಾಯಕ ಚಂದನ್ ಶೆಟ್ಟಿ ದನಿಯಾಗಿದ್ದಾರೆ.

ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಅಲ್ಲದೆ ಸತ್ಯಶೌರ್ಯ ಸಾಗರ್ ಸಂಭಾಷಣೆ ರಚಿಸಿದ್ದಾರೆ. ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: Fake Garlic: ಎಚ್ಚರ..ಎಚ್ಚರ.. ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ ಸಿಮೆಂಟ್‌ ಬೆಳ್ಳುಳ್ಳಿ! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು ಫಾರೆಸ್ಟ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

Continue Reading
Advertisement
CM vs Governor
ಪ್ರಮುಖ ಸುದ್ದಿ16 mins ago

CM vs Governor: ರಾಜ್ಯಪಾಲರ ವಿರುದ್ಧ ಹೋರಾಟ ತೀವ್ರ; ರಾಷ್ಟ್ರಪತಿಗಳಿಗೆ ದೂರು ನೀಡಲು ರಾಜ್ಯ ಸರ್ಕಾರ ಚಿಂತನೆ

kolkata Doctor murder case
ಪ್ರಮುಖ ಸುದ್ದಿ23 mins ago

Kolkata Doctor murder case: ಅಂತ್ಯಕ್ರಿಯೆ ನಡೆದ 3 ಗಂಟೆ ನಂತ್ರ FIR ದಾಖಲು..ಆಸ್ಪತ್ರೆ ವೈದ್ಯರು, ಪೊಲೀಸರು ಏನ್‌ ಮಾಡ್ತಿದ್ರು?- ಸುಪ್ರೀಂ ತರಾಟೆ

HD Kumaraswamy
ಪ್ರಮುಖ ಸುದ್ದಿ36 mins ago

HD Kumaraswamy : ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು 2ನೇ ಬಾರಿ ರಾಜ್ಯಪಾಲರ ಅನುಮತಿ ಕೋರಿದ ಎಸ್‌ಐಟಿ

Child Online Protection Award
ಬೆಂಗಳೂರು1 hour ago

Child Online Protection Award : ಸ್ಟೋಗೋ ಉತ್ಸವ, ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ 2024 ಘೋಷಣೆ

Yuvraj Singh
ಕ್ರೀಡೆ2 hours ago

Yuvraj Singh : ಶೀಘ್ರದಲ್ಲೇ ತೆರೆಗೆ ಬರಲಿದೆ ಯುವರಾಜ್ ಸಿಂಗ್‌ ಬಯೋಪಿಕ್‌

Mollywood Sex Mafia
ಪ್ರಮುಖ ಸುದ್ದಿ2 hours ago

Mollywood Sex Mafia: ಮಲಯಾಳಂ ಚಿತ್ರರಂಗದ ಸೆಕ್ಸ್‌ ಮಾಫಿಯಾ ಬಟಾಬಯಲು; 15 ಪ್ರಭಾವಿಗಳಿಂದ ದಂಧೆ- ಸ್ಫೋಟಕ ವರದಿ ಔಟ್‌

Assault case
ಬೆಂಗಳೂರು2 hours ago

Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

Stree 2 Box Office Day 5
ಸಿನಿಮಾ2 hours ago

Stree 2 Box Office Day 5: ಕಲ್ಕಿ, ಫೈಟರ್ ದಾಖಲೆ ಮುರಿದ ಶ್ರದ್ಧಾ ಕಪೂರ್‌ ಅಭಿನಯದ ಸ್ತ್ರೀ 2

assault case
ದಕ್ಷಿಣ ಕನ್ನಡ2 hours ago

Assault Case : ಮಂಗಳೂರಿನಲ್ಲಿ ಫುಟ್ಬಾಲ್‌ ಆಟಕ್ಕೆ ಕಿರಿಕ್‌; ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್‌ ಮಾಡಿ ಅರೆಬೆತ್ತಲೆಗೊಳಿಸಿ ಹಲ್ಲೆ

Yash-Radhika
Latest2 hours ago

Yash-Radhika: ರಾಕಿಂಗ್ ಸ್ಟಾರ್‌ ಯಶ್- ರಾಧಿಕಾ ಕುಟುಂಬದ ಸಂಭ್ರಮದ ರಕ್ಷಾಬಂಧನ; ಇಲ್ಲಿವೆ ಚಿತ್ರಗಳು

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌